ನವದೆಹಲಿ: ಭಾರತವನ್ನು ಜಾಗತಿಕ ಪ್ರಮುಖ ರಫ್ತು ಕೇಂದ್ರವಾಗಿಸುವ ಗುರಿಯನ್ನು ಹೊಂದಿರುವುದಾಗಿ ಹುಂಡೈ ಮೋಟರ್ ಗ್ರೂಪ್ ತಿಳಿಸಿದೆ. ಇತ್ತೀಚಿಗೆ ಭಾರತಕ್ಕೆ ಭೇಟಿ ನೀಡಿದ್ದ ಹುಂಡೈ ಮೋಟರ್ ಗ್ರೂಪ್ನ ಮುಖ್ಯಸ್ಥರು ಸಂಸ್ಥೆಯ ಉದ್ಯೋಗಿಗಳೊಂದಿಗೆ ಮಾತನಾಡಿದ್ದು, ತಮ್ಮ ಕಾರ್ಯಾಚರಣೆ ಹೆಚ್ಚಿಸುವ ಗುರಿಯನ್ನು ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.
ಕಳೆದೊಂದು ವರ್ಷದ ಹಿಂದೆ ಹುಂಡೈ ಮೋಟರ್ ಗ್ರೂಪ್, ಭಾರತದಲ್ಲಿ ಅಂದಾಜು 5 ಟ್ರಿಲಿಯನ್ ಹೊಸ ಹೂಡಿಕೆ ಯೋಜನೆಯನ್ನು ಹೊಂದಿರುವುದಾಗಿ ಘೋಷಿಸಿದರು. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ವಾಹನ ಮಾರುಕಟ್ಟೆಗಳನ್ನು ಉತ್ತಮ ಗುರಿಪಡಿಸುವ ಉದ್ದೇಶವನ್ನು ಹೊಂದಿರುವುದಾಗಿ ತಿಳಿಸಿದೆ.
ಭಾರತದಲ್ಲಿ ಹುಂಡೈ ಮುಖ್ಯ ಕಚೇರಿ ಇರುವ ಗುರುಗ್ರಾಮದ ಕೇಂದ್ರಕ್ಕೆ ಭೇಟಿ ನೀಡಿದ ಕಾರ್ಯಕಾರಿ ಅಧ್ಯಕ್ಷ ಯುಯಿಸನ್ ಚುಂಗ್, ಉದ್ಯೋಗಿಗಳೊಂದಿಗೆ ಭಾರತದ ಮಾರುಕಟ್ಟೆಗಾಗಿ ಮಧ್ಯಮದಿಂದ ದೀರ್ಘಾವಧಿವರೆಗಿನ ಕಾರ್ಯತಂತ್ರವನ್ನು ಚರ್ಚೆ ನಡೆಸಿದರು.
ಜೊತೆಗೆ ಸಂಸ್ಥೆಯ 400 ಉದ್ಯೋಗಿಗಳೊಂದಿಗೆ ಸಭೆ ನಡೆಸಿದ ಅವರು ಭವಿಷ್ಯದ ಗುರಿಗಳನ್ನು ಹಂಚಿಕೊಂಡಿದ್ದರು. ಇದೇ ಮೊದಲ ಭಾರೀ ಸಾಗರೋತ್ತರ ಉದ್ಯೋಗಿಗಳೊಂದಿಗೆ ಚುಂಗ್ ಟೌನ್ ಹಾಲ್ ಮೀಟಿಂಗ್ ನಡೆಸಿದರು. ಸಭೆಯಲ್ಲಿ ಚುಂಗ್, ದೇಶವನ್ನು ಜಾಗತಿಕ ರಫ್ತಿ ಕೇಂದ್ರವಾಗಿ ಬೆಳೆಸುವ ಕುರಿತ ದೃಷ್ಟಿಕೋನವನ್ನು ಉದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಏಷ್ಯಾ, ಮಧ್ಯ ಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ತಮ್ಮ ಉದ್ಯಮದ ಗುರಿ ವಿಸ್ತರಣೆ ಕುರಿತು ತಿಳಿಸಿದ್ದಾರೆ.