ತೆರಿಗೆ ವಂಚನೆಗೆ ಕಡಿವಾಣ ಹಾಕಲು ಹಿಂದಿನಿಂದಲೂ ಸರ್ಕಾರಗಳು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ 2017ರಲ್ಲಿ ಕೇಂದ್ರ ಸರ್ಕಾರ ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ, ಇಂದಿಗೂ ಹಲವೆಡೆ ಜಿಎಸ್‌ಟಿ ವಂಚನೆ, ನಕಲಿ ಬಿಲ್‌ಗಳ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಬಹುತೇಕ ಜಿಎಸ್‌ಟಿ ವಂಚನೆಗಳನ್ನು ನಕಲಿ ಇನ್‌ವಾಯ್ಸ್‌ಗಳ ಮೂಲಕ ಮಾಡಲಾಗುತ್ತದೆ. ಹಾಗಾಗಿ ಈ ನಕಲಿ ಜಿಎಸ್‌ಟಿ ಬಿಲ್‌ಗಳ ಬಗ್ಗೆ ಗ್ರಾಹಕರು ಹೆಚ್ಚು ಎಚ್ಚರದಿಂದಿರಬೇಕು.
ಜಿಎಸ್‌ಟಿ ಇನ್‌ವಾಯ್ಸ್ ಎಂದರೇನು?: ಮೊದಲಿಗೆ ಜಿಎಸ್‌ಟಿ ಇನ್‌ವಾಯ್ಸ್ ಎಂದರೇನು ಎಂದು ತಿಳಿಯುವುದು ಮುಖ್ಯ. ಜಿಎಸ್‌ಟಿ ಇನ್‌ವಾಯ್ಸ್ ಒಂದು ವಿಧದ ಬಿಲ್ ಆಗಿದೆ. ಉದಾಹರಣೆಗೆ, ನೀವು ಸರಕುಗಳನ್ನು ಖರೀದಿಸಿದರೆ ಅಥವಾ ಸೇವೆಗಳನ್ನು ಪಡೆದರೆ, ಉತ್ಪನ್ನಗಳು ಅಥವಾ ಸೇವೆಗಳನ್ನು ಒದಗಿಸಿದ ವ್ಯಕ್ತಿ ಅಥವಾ ಸಂಸ್ಥೆಗೆ ಬಿಲ್ ಪಾವತಿಸಬೇಕಾಗುತ್ತದೆ.
ಈ ಬಿಲ್‌ನಲ್ಲಿ ಸರಬರಾಜುದಾರರ ಹೆಸರು, ಉತ್ಪನ್ನದ ಮಾಹಿತಿ, ಖರೀದಿಸಿದ ದಿನಾಂಕ, ರಿಯಾಯಿತಿ ಮತ್ತು ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆಯ ವಿವರಗಳು ಇರುತ್ತವೆ. ಆದರೆ, ಜಿಎಸ್‌ಟಿ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಗ್ರಾಹಕರಿಗೆ ನೀಡುತ್ತಿರುವ ಹಲವು ಪ್ರಕರಣಗಳು ವರದಿಯಾಗುತ್ತಿವೆ. ತಜ್ಞರ ಪ್ರಕಾರ, ಕೆಲವು ವ್ಯಾಪಾರಿಗಳು ತಮ್ಮ ಬಿಲ್‌ಗಳಲ್ಲಿ GSTIN ಅಂದರೆ GST ಗುರುತಿನ ಸಂಖ್ಯೆಗೆ ಬದಲಾಗಿ VAT/TIN, ಕೇಂದ್ರ ಮಾರಾಟ ತೆರಿಗೆ ಸಂಖ್ಯೆಗಳನ್ನು ತೋರಿಸುತ್ತಿದ್ದಾರೆ. ಇನ್ನು ಕೆಲವರು ಸರ್ಕಾರಕ್ಕೆ ತೆರಿಗೆ ಕಟ್ಟದೆ ನಕಲಿ ಜಿಎಸ್‌ಟಿ ಬಿಲ್‌ಗಳನ್ನು ತೋರಿಸಿ ಗ್ರಾಹಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ.
ನಕಲಿ ಜಿಎಸ್‌ಟಿ ಪತ್ತೆ ಹಚ್ಚುವುದು ಹೇಗೆ?: ಸರಕು ಮತ್ತು ಸೇವೆಗಳನ್ನು ಒದಗಿಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ವಿಶಿಷ್ಟವಾದ 15 ಅಂಕಿಯ GSTIN ಅನ್ನು ನಿಗದಿಪಡಿಸಲಾಗಿದೆ. ಇದು ಸ್ಟೇಟ್ ಕೋಡ್‌ನ ಮೊದಲ ಎರಡು ಅಂಕೆಗಳನ್ನು ಒಳಗೊಂಡಿರುತ್ತದೆ. ನಂತರ ಮಾರಾಟಗಾರರ ಫ್ಯಾನ್ ಸಂಖ್ಯೆಯ 10 ಸಂಖ್ಯೆಗಳು ಅಥವಾ ಪೂರೈಕೆದಾರರ ಅನನ್ಯ ನೋಂದಣಿ ಸಂಖ್ಯೆಗಳನ್ನು ಹೊಂದಿರುತ್ತದೆ. 13ನೇ ಅಂಕಿಯು ಪ್ಯಾನ್ ಹೋಲ್ಡರ್ ಯೂನಿಟ್ ಸಂಖ್ಯೆ, 14ನೇ ಅಂಕಿಯು ಜೆಡ್ ಅಕ್ಷರವಾಗಿದೆ ಮತ್ತು ಕೊನೆಯದು 'ಚೆಕ್ಸಮ್ ಅಂಕಿ' ಆಗಿರುತ್ತದೆ.
ಆದ್ದರಿಂದ ಸರಬರಾಜುದಾರರು ನಿಮಗೆ ಬಿಲ್ ನೀಡಿದ ತಕ್ಷಣ, ಅದರಲ್ಲಿರುವ GSTIN (ಸರಕು ಮತ್ತು ಸೇವಾ ತೆರಿಗೆ ಗುರುತಿನ ಸಂಖ್ಯೆ) ಪರಿಶೀಲಿಸಿ. ಇದನ್ನು ಜಿಎಸ್‌ಟಿ ಪೋರ್ಟಲ್‌ನಲ್ಲಿ ನಮೂದಿಸಿ, GSTIN ಸರಿಯಾಗಿದ್ದರೆ, GST ಪೋರ್ಟಲ್ ತೆರಿಗೆದಾರರ ಪ್ರಕಾರ, ನೋಂದಣಿ ದಿನಾಂಕ, ನೋಂದಣಿ ಸ್ಥಳ (ರಾಜ್ಯ), ಕಾನೂನು ಹೆಸರು, ವ್ಯಾಪಾರ, ವ್ಯಾಪಾರ ಹೆಸರು, UIN ಅಥವಾ GSTIN ಸ್ಥಿತಿಯನ್ನು ತೋರಿಸುತ್ತದೆ.