ನವದೆಹಲಿ: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಮತ್ತೆ ಭಾರೀ ಇಳಿಕೆಯಾಗಿದೆ. ಗುರುವಾರ 10 ಗ್ರಾಂ ಚಿನ್ನದ ಬೆಲೆ ರೂ.75,700 ಆಗಿದ್ದರೆ, ಶುಕ್ರವಾರ ರೂ.1,573 ಇಳಿಕೆಯಾಗಿ ರೂ.74,127 ಆಗಿದೆ. ಗುರುವಾರ ಪ್ರತೀ ಕೆ.ಜಿ ಬೆಳ್ಳಿ ಬೆಲೆ ರೂ.94,680ರಷ್ಟಿದ್ದರೆ, ಶುಕ್ರವಾರ ರೂ.2,795ರಷ್ಟು ಕುಸಿದು ರೂ.91,885ಕ್ಕೆ ತಲುಪಿತು.
- ಬೆಂಗಳೂರಿನಲ್ಲಿ 10ಗ್ರಾಂ ಚಿನ್ನದ ಬೆಲೆ ₹73,420 ಆಗಿದೆ. ಪ್ರತೀ ಕೆಜಿ ಬೆಳ್ಳಿ ಬೆಲೆ ₹92,500 ಇದೆ.
- ಬೆಳಗಾವಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ₹73,420 ಆಗಿದೆ. ಪ್ರತೀ ಕೆಜಿ ಬೆಳ್ಳಿ ಬೆಲೆ ₹92,500 ಇದೆ.
- ಮೈಸೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ₹73,420 ಆಗಿದೆ. ಪ್ರತೀ ಕೆಜಿ ಬೆಳ್ಳಿ ಬೆಲೆ ₹92,500 ಇದೆ.
- ಮಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.₹73,420 ಆಗಿದೆ. ಪ್ರತೀ ಕೆಜಿ ಬೆಳ್ಳಿ ಬೆಲೆ ₹92,500 ಇದೆ.
- ಹೈದರಾಬಾದ್‌ನಲ್ಲಿ 10 ಗ್ರಾಂ ಚಿನ್ನದ ಬೆಲೆ ₹74,127 ಆಗಿದೆ. ಪ್ರತೀ ಕೆಜಿ ಬೆಳ್ಳಿಯ ಬೆಲೆ ₹91,885 ಇದೆ.
- ವಿಜಯವಾಡದಲ್ಲಿ 10 ಗ್ರಾಂ ಚಿನ್ನದ ಬೆಲೆ ₹74,127 ಆಗಿದೆ. ಪ್ರತೀ ಕೆಜಿ ಬೆಳ್ಳಿಯ ಬೆಲೆ ₹91,885 ಇದೆ.
- ವಿಶಾಖಪಟ್ಟಣಂನಲ್ಲಿ 10 ಗ್ರಾಂ ಚಿನ್ನದ ಬೆಲೆ ₹74,127 ಆಗಿದೆ. ಪ್ರತೀ ಕೆಜಿ ಬೆಳ್ಳಿಯ ಬೆಲೆ ₹91,885 ಇದೆ.
ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ದರಗಳು ಬದಲಾಗುತ್ತವೆ.
ಸ್ಪಾಟ್ ಚಿನ್ನದ ಬೆಲೆ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ದರಗಳು ಕುಸಿತ ಕಂಡಿವೆ. ಗುರುವಾರ ಒಂದು ಔನ್ಸ್ ಚಿನ್ನದ ಬೆಲೆ 2,369 ಡಾಲರ್ ಇತ್ತು. ಆದರೆ ಶುಕ್ರವಾರದ ವೇಳೆಗೆ 39 ಡಾಲರ್ ಇಳಿಕೆಯಾಗಿ 2,330 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 30.24 ಡಾಲರ್ ಇದೆ.