ETV Bharat / business

1.29 ಶತಕೋಟಿ ಡಾಲರ್​ಗೆ ತಲುಪಿದ ಭಾರತದ ಕಾಫಿ ರಫ್ತು: 4 ವರ್ಷದಲ್ಲಿ ದ್ವಿಗುಣ, ಕಾಫಿ ಉತ್ಪಾದನೆಯಲ್ಲಿ ಕರ್ನಾಟಕವೇ ಕಿಂಗ್ - COFFEE EXPORTS

ಭಾರತದ ಕಾಫಿ ರಫ್ತು ದ್ವಿಗುಣಗೊಂಡಿದೆ. ಈ ಮೂಲಕ ದೇಶದ ರಫ್ತಿನ ಪ್ರಮಾಣ ಹೆಚ್ಚಿಸಲು ತನ್ನದೇ ಕೊಡುಗೆ ನೀಡಿದೆ.

ಕಾಫಿ ಬೀಜ
ಕಾಫಿ ಬೀಜ (ians)
author img

By ETV Bharat Karnataka Team

Published : Jan 21, 2025, 4:00 PM IST

ನವದೆಹಲಿ: ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಕಾಫಿ ರಫ್ತು ಬಹುತೇಕ ದ್ವಿಗುಣಗೊಂಡು 2023-24ರ ಹಣಕಾಸು ವರ್ಷದಲ್ಲಿ 1.29 ಶತಕೋಟಿ ಡಾಲರ್​ಗೆ ತಲುಪಿದೆ. ಜನವರಿ 2025 ರ ಮೊದಲಾರ್ಧದಲ್ಲಿ, ಭಾರತವು ಇಟಲಿ, ಬೆಲ್ಜಿಯಂ ಮತ್ತು ರಷ್ಯಾ ಸೇರಿದಂತೆ ಇತರ ರಾಷ್ಟ್ರಗಳಿಗೆ 9,300 ಟನ್ ಕಾಫಿಯನ್ನು ರಫ್ತು ಮಾಡಿದೆ. ಉತ್ತಮ ಗುಣಮಟ್ಟ ಮತ್ತು ಅನನ್ಯ ರುಚಿಯ ಕಾಫಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚಾಗಿದ್ದರಿಂದ ದೇಶದ ಕಾಫಿ ರಫ್ತು ಗಮನಾರ್ಹವಾಗಿ ಬೆಳೆದಿದೆ.

ಭಾರತದ ಕಾಫಿ ಉತ್ಪಾದನೆಯಲ್ಲಿ ಸರಿಸುಮಾರು ಮುಕ್ಕಾಲು ಭಾಗ ಅರೇಬಿಕಾ ಮತ್ತು ರೊಬಸ್ಟಾ ಬೀನ್ಸ್ ಪಾಲಿದೆ. ಇವುಗಳನ್ನು ಪ್ರಾಥಮಿಕವಾಗಿ ಹುರಿಯದ ಬೀನ್ಸ್ ಆಗಿ ರಫ್ತು ಮಾಡಲಾಗುತ್ತದೆ. ಆದಾಗ್ಯೂ, ಹುರಿದ ಮತ್ತು ತ್ವರಿತ ಕಾಫಿಯಂತಹ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಇದು ರಫ್ತು ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿದೆ.

ದೇಶೀಯ ಕಾಫಿ ಬಳಕೆಯಲ್ಲೂ ಹೆಚ್ಚಳ: ಇನ್ನು ದೇಶೀಯ ಕಾಫಿ ಬಳಕೆಯು 2012 ರಲ್ಲಿ ಇದ್ದ 84,000 ಟನ್ ಗಳಿಂದ 2023 ರಲ್ಲಿ 91,000 ಟನ್ ಗಳಿಗೆ ಏರಿಕೆಯಾಗಿದೆ. ಜನರ ದೈನಂದಿನ ಜೀವನದಲ್ಲಿ ಕಾಫಿ ಸೇವನೆಯ ಅಭ್ಯಾಸ ಹೆಚ್ಚಾಗುತ್ತಿರುವುದನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ವಿಶೇಷವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳರಡರಲ್ಲಿಯೂ ಈ ಪ್ರವೃತ್ತಿ ಕಂಡು ಬಂದಿದೆ.

ಕಾಫಿ ಉತ್ಪಾದನೆಯಲ್ಲಿ ಕರ್ನಾಟಕವೇ ಕಿಂಗ್​: ಭಾರತದಲ್ಲಿ ಕಾಫಿಯನ್ನು ಮುಖ್ಯವಾಗಿ ಪರಿಸರ ಸಮೃದ್ಧ ಪಶ್ಚಿಮ ಮತ್ತು ಪೂರ್ವ ಘಟ್ಟಗಳಲ್ಲಿ ಬೆಳೆಯಲಾಗುತ್ತದೆ. ಇವು ಜೀವ ವೈವಿಧ್ಯತೆಗೆ ಹೆಸರುವಾಸಿಯಾದ ಪ್ರದೇಶಗಳಾಗಿವೆ. 2022-23ರಲ್ಲಿ ಕರ್ನಾಟಕವು 2,48,020 ಮೆಟ್ರಿಕ್ ಟನ್​ನೊಂದಿಗೆ ಕಾಫಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಕೇರಳ ಮತ್ತು ತಮಿಳುನಾಡು ನಂತರದ ಸ್ಥಾನಗಳಲ್ಲಿವೆ.

ಜೀವವೈವಿಧ್ಯತೆ ಕಾಪಾಡುವಲ್ಲಿ ಪ್ರಮುಖ ಪಾತ್ರ: ಈ ಪ್ರದೇಶಗಳು ನೆರಳಿನ ತೋಟಗಳಿಗೆ ನೆಲೆಯಾಗಿದ್ದು, ಇವು ಕಾಫಿ ಉದ್ಯಮವನ್ನು ಬೆಂಬಲಿಸುವುದಲ್ಲದೆ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೆ ಇವು ಜೀವವೈವಿಧ್ಯತೆಯ ಪ್ರಮುಖ ಪ್ರದೇಶಗಳಲ್ಲಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಕಾಫಿ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಹೆಚ್ಚುತ್ತಿರುವ ದೇಶೀಯ ಮತ್ತು ಅಂತರರಾಷ್ಟ್ರೀಯ ಬೇಡಿಕೆಯನ್ನು ಪೂರೈಸಲು ಕಾಫಿ ಬೋರ್ಡ್ ಆಫ್ ಇಂಡಿಯಾ ಹಲವಾರು ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸಿದೆ.

ಸಮಗ್ರ ಕಾಫಿ ಅಭಿವೃದ್ಧಿ ಯೋಜನೆ (ಐಸಿಡಿಪಿ) ಮೂಲಕ ಇಳುವರಿಯನ್ನು ಸುಧಾರಿಸುವುದು, ಸಾಂಪ್ರದಾಯಿಕವಲ್ಲದ ಪ್ರದೇಶಗಳಲ್ಲಿ ಕೃಷಿಯನ್ನು ವಿಸ್ತರಿಸುವುದು ಮತ್ತು ಕಾಫಿ ಕೃಷಿಯ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸಲಾಗಿದೆ. ಈ ಕ್ರಮಗಳು ಭಾರತದ ಕಾಫಿ ಉದ್ಯಮವನ್ನು ಬಲಪಡಿಸಲು, ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಅದರ ಜಾಗತಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಸಮಗ್ರ ಕಾರ್ಯತಂತ್ರದ ಭಾಗವಾಗಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಸದ್ದು ಮಾಡಿದ್ದ ಹಿಂಡನ್​ಬರ್ಗ್ ರಿಸರ್ಚ್​​ ಸ್ಥಗಿತ: ಸಂಸ್ಥಾಪಕರಿಂದ ಘೋಷಣೆ - HINDENBURG RESEARCH TO BE DISBANDED

ETV Bharat Logo

Copyright © 2025 Ushodaya Enterprises Pvt. Ltd., All Rights Reserved.