ಬೆಂಗಳೂರು: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕಡಿಮೆಯಾಗಿದೆ. ಭಾನುವಾರ 10 ಗ್ರಾಂ ಚಿನ್ನದ ಬೆಲೆ ರೂ.81,270ರಷ್ಟಿದ್ದರೆ ಸೋಮವಾರದ ವೇಳೆಗೆ ರೂ.690 ಇಳಿಕೆಯಾಗಿ ರೂ.80,580ಕ್ಕೆ ತಲುಪಿದೆ. ಭಾನುವಾರ, ಪ್ರತಿ ಕೆಜಿ ಬೆಳ್ಳಿಯ ಬೆಲೆ ಸೋಮವಾರದ ವೇಳೆಗೆ ರೂ.99,750 ಇದ್ದ ಬೆಳ್ಳಿ ಬೆಲೆ ಕಡಿಮೆಯಾಗಿ ರೂ.98,714 ಕ್ಕೆ ಇಳಿಕೆ ಕಂಡಿದೆ. ಸುಮಾರು 1,036 ರೂ ಕಡಿಮೆಯಾದಂತಾಗಿದೆ.
ಬೆಂಗಳೂರು ಮತ್ತು ದಾವಣಗೆರೆಯಲ್ಲಿ 22K 1 ಗ್ರಾಂ ಚಿನ್ನಕ್ಕೆ ₹ 7,315 ಇದ್ದು ನಿನ್ನೆಯ ದರಕ್ಕೆ ಹೋಲಿಸಿದರೆ ಒಂದು ಗ್ರಾಂಗೆ ₹ 45 ರೂ ಇಳಿಕೆ ಕಂಡು ಬಂದಿದೆ.
ಇನ್ನು 24K ಒಂದು ಗ್ರಾಂ ಬಂಗಾರಕ್ಕೆ ಇಂದು ₹ 7,980 ದರ ಇದ್ದು, ಸುಮಾರು ₹ 49 ರೂ ಕಡಿಮೆ ಆಗಿದೆ. ಅಂದರೆ ತೊಲ ಬಂಗಾರಕ್ಕೆ ಸುಮಾರು 490 ರೂ ಕಡಿಮೆ ಆಗಿದೆ.
ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತವೆ. ಗಮನಿಸಬಹುದು.
ಸ್ಪಾಟ್ ಗೋಲ್ಡ್ ಬೆಲೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡರಲ್ಲೂ ದರಗಳು ಕಡಿಮೆಯಾಗಿವೆ. ಭಾನುವಾರ ಒಂದು ಔನ್ಸ್ ಚಿನ್ನದ ಬೆಲೆ 2746 ಡಾಲರ್ ಇದ್ದರೆ ಸೋಮವಾರ 15 ಡಾಲರ್ ಇಳಿಕೆಯಾಗಿ 2731 ಡಾಲರ್ ಆಗಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 33.35 ಡಾಲರ್ ಆಗಿದೆ.