ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರುಗತಿಯಲ್ಲಿವೆ. ಮಂಗಳವಾರ 10 ಗ್ರಾಂ ಚಿನ್ನದ ಬೆಲೆ ₹74,651 ರಷ್ಟಿದ್ದರೆ, ಬುಧವಾರದ ವೇಳೆಗೆ ₹252ರಷ್ಟು ಏರಿಕೆಯಾಗಿ ₹74,903 ತಲುಪಿತು. ಮಂಗಳವಾರ ಕೆಜಿ ಬೆಳ್ಳಿ ದರ ₹96,006 ಇತ್ತು. ಇದು ಬುಧವಾರ ₹1,038 ರೂ. ಏರಿಕೆಯಾಗಿದ್ದು, ₹97,044ರ ಗಡಿದಾಟಿದೆ.
- ಬೆಂಗಳೂರಿನಲ್ಲಿ 10ಗ್ರಾಂ ಚಿನ್ನದ ಬೆಲೆ ₹73,200 ಆಗಿದೆ. ಪ್ರತೀ ಕೆಜಿ ಬೆಳ್ಳಿ ಬೆಲೆ ₹95,250 ಇದೆ.
- ಬೆಳಗಾವಿಯಲ್ಲಿ ಚಿನ್ನದ ಬೆಲೆ ₹73,200 ಆಗಿದೆ. ಬೆಳ್ಳಿ ಬೆಲೆ ₹95,250 ಇದೆ.
- ಮೈಸೂರಿನಲ್ಲಿ ಚಿನ್ನದ ಬೆಲೆ ₹73,200 ಆಗಿದೆ. ಬೆಳ್ಳಿ ಬೆಲೆ ₹95,250 ಇದೆ.
- ಮಂಗಳೂರಿನಲ್ಲಿ ಚಿನ್ನದ ಬೆಲೆ ₹73,200 ಆಗಿದೆ. ಬೆಳ್ಳಿ ಬೆಲೆ ₹95,250 ಇದೆ.
- ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ ₹74,903 ಆಗಿದೆ. ಬೆಳ್ಳಿ ಬೆಲೆ 97,044 ರೂ. ಇದೆ.
- ವಿಜಯವಾಡದಲ್ಲಿ ಚಿನ್ನದ ಬೆಲೆ ₹74,903 ಆಗಿದೆ. ಬೆಳ್ಳಿ ಬೆಲೆ 97,044 ರೂ. ಇದೆ.
- ವಿಶಾಖಪಟ್ಟಣಂನಲ್ಲಿ ಚಿನ್ನದ ಬೆಲೆ ₹74,903 ಆಗಿದೆ. ಬೆಳ್ಳಿ ಬೆಲೆ 97,044 ರೂ. ಇದೆ.
ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ದರಗಳು ಬದಲಾಗುತ್ತವೆ.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ?:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಕ್ರಮೇಣ ಹೆಚ್ಚಾಗುತ್ತಿವೆ. ಮಂಗಳವಾರ ಒಂದು ಔನ್ಸ್ ಚಿನ್ನದ ಬೆಲೆ 2,351 ಡಾಲರ್ ಇತ್ತು. ಆದರೆ, ಬುಧವಾರದ ವೇಳೆಗೆ 6 ಡಾಲರ್ ಏರಿಕೆಯಾಗಿ 2,357 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 32.08 ಡಾಲರ್ ಆಗಿದೆ.
ಕ್ರಿಪ್ಟೋಕರೆನ್ಸಿ ಬೆಲೆಗಳ ವಿವರ: ಕ್ರಿಪ್ಟೋಕರೆನ್ಸಿ ವ್ಯಾಪಾರ ಬುಧವಾರ ಯಥಾಸ್ಥಿತಿ ಮುಂದುವರಿದಿದೆ.
ವಿವಿಧ ಕ್ರಿಪ್ಟೋಗಳ ಪ್ರಸ್ತುತ ಮೌಲ್ಯ:
- ಬಿಟ್ ಕಾಯಿನ್- ₹51,98,637
- ಎಥೆರಿಯಂ ₹2,77,416
- ಟೆಥರ್ ₹79.55
- ಬೈನಾನ್ಸ್ ನಾಣ್ಯ ₹49,601
- ಸೊಲೊನಾ ₹12,716
ಷೇರುಪೇಟೆ ಅಪ್ಡೇಟ್: ದೇಶೀಯ ಷೇರು ಮಾರುಕಟ್ಟೆಗಳು ಬುಧವಾರ ನಷ್ಟದೊಂದಿಗೆ ಆರಂಭಗೊಂಡವು. ಏಷ್ಯಾದ ಮಾರುಕಟ್ಟೆಗಳಿಂದ ನಕಾರಾತ್ಮಕ ಸಂಕೇತಗಳು ಬರುತ್ತಿದ್ದು, ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನ ಹೂಡಿಕೆದಾರರು ಜಾಗರೂಕತೆಯಿಂದ ಹೆಜ್ಜೆ ಇಡಬೇಕಿದೆ.
ಪ್ರಸ್ತುತ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 418 ಅಂಕ ಕಳೆದುಕೊಂಡು 74,752ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಪ್ರಸ್ತುತ 122 ಅಂಕಗಳ ನಷ್ಟದ ನಂತರ 22,766ನಲ್ಲಿ ವಹಿವಾಟು ನಡೆಸುತ್ತಿದೆ.