ಕರ್ನಾಟಕ

karnataka

ETV Bharat / business

ದಸರಾ ಎಫೆಕ್ಟ್! ₹78,000 ತಲುಪಿದ ಚಿನ್ನ, ₹93,000 ದಾಟಿದ ಬೆಳ್ಳಿ ಬೆಲೆ!

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಪ್ರಮುಖ ನಗರಗಳಲ್ಲಿ ಪ್ರಸ್ತುತ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಗೊತ್ತಾ?

By ETV Bharat Karnataka Team

Published : 4 hours ago

Updated : 2 hours ago

Gold Rate Today October 12, 2024
ಸಂಗ್ರಹ ಚಿತ್ರ (ETV Bharat)

Gold Rate Today October 12, 2024: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ದಸರಾ ಹಿನ್ನೆಲೆಯಲ್ಲಿ ಶುಕ್ರವಾರ (ನಿನ್ನೆ) ಇದ್ದ ಬೆಲೆ ಶನಿವಾರ (ಇಂದು) ಇಲ್ಲ. ನಿನ್ನೆಗಿಂತ ಇಂದು ಚಿನ್ನಾಭರಣಗಳ ಬೆಲೆಯಲ್ಲಿ ಭಾರಿ ಬದಲಾವಣೆಯಾಗಿದೆ.

ಶುಕ್ರವಾರ 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹77,875 ಇತ್ತು. ಆದರೆ, ಶನಿವಾರ ₹489 ಏರಿಕೆಯಾಗುವ ಮೂಲಕ ₹78,364ಕ್ಕೆ ತಲುಪಿದೆ. ಶುಕ್ರವಾರ ಪ್ರತಿ ಕೆಜಿ ಬೆಳ್ಳಿ ಬೆಲೆ ₹92,620ಕ್ಕೆ ತಲುಪಿತ್ತು. ಶನಿವಾರ ₹824 ಏರಿಕೆಯಾಗುವ ಮೂಲಕ ₹93,444ಕ್ಕೆ ತಲುಪಿದೆ.

  • ಬೆಂಗಳೂರಿನಲ್ಲಿ 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹78,010.00 ಆಗಿದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆ ₹84,900 ಇದೆ.
  • ಹೈದರಾಬಾದ್‌ನಲ್ಲಿ 10 ಗ್ರಾಂ ಚಿನ್ನದ ಬೆಲೆ ₹78,364 ಇದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆ ₹93,444 ಇದೆ.
  • ವಿಜಯವಾಡದಲ್ಲಿ 10 ಗ್ರಾಂ ಚಿನ್ನದ ಬೆಲೆ ₹78,364 ಇದ್ದರೆ, ಪ್ರತಿ ಕೆಜಿ ಬೆಳ್ಳಿ ಬೆಲೆ ₹93,444 ಇದೆ.
  • ವಿಶಾಖಪಟ್ಟಣಂನಲ್ಲಿ 10 ಗ್ರಾಂ ಚಿನ್ನದ ಬೆಲೆ ₹78,364 ಇದ್ದು, ಪ್ರತಿ ಕೆಜಿ ಬೆಳ್ಳಿ ಬೆಲೆ ₹93,444 ಇರುತ್ತದೆ.
  • ಪ್ರದ್ದತ್ತೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ₹78,364 ಇದ್ದು, ಪ್ರತಿ ಕೆಜಿ ಬೆಳ್ಳಿಯ ಬೆಲೆ ₹93,444 ಇರುತ್ತದೆ.

ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರದ್ದಾಗಿರುತ್ತದೆ. ಈ ಚಿನ್ನ ಮತ್ತು ಬೆಳ್ಳಿ ದರಗಳು ಕ್ಷಣಕ್ಕೂ ಕ್ಷಣಕ್ಕೂ ಬದಲಾಗುತ್ತವೆ.

ಸ್ಪಾಟ್ ಗೋಲ್ಡ್ ಬೆಲೆ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರಗಳು ಹೆಚ್ಚಿವೆ. ಪರಿಣಾಮ ಶುಕ್ರವಾರ ಒಂದು ಔನ್ಸ್ ಚಿನ್ನದ ಬೆಲೆ 2645 ಡಾಲರ್ ಆಗಿದ್ದರೆ, ಶನಿವಾರದ ವೇಳೆಗೆ 11 ಡಾಲರ್ ಏರಿಕೆಯಾಗಿ 2656 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 31.55 ಡಾಲರ್ ಆಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ: ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಪೆಟ್ರೋಲ್ ಬೆಲೆ ₹102.86 ಆಗಿದ್ದರೆ, ಡೀಸೆಲ್ ದರ ₹ 88.94 ಆಗಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಹೈದರಾಬಾದ್​​ನಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹107.39 ಆಗಿದ್ದರೆ, ಡೀಸೆಲ್ ಬೆಲೆ ₹95.63 ಆಗಿದೆ. ವಿಶಾಖಪಟ್ಟಣಂನಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹108.27 ಇದ್ದು, ಡೀಸೆಲ್ ಬೆಲೆ ₹96.16. ಇದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹94.76 ಇದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ₹87.66 ಆಗಿದೆ.

ಇದನ್ನೂ ಓದಿ:ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ?: SIPಯ ಈ ತಂತ್ರ ಅನುಸರಿಸಿ - ಲಾಭ ಗ್ಯಾರಂಟಿ!

Last Updated : 2 hours ago

ABOUT THE AUTHOR

...view details