ಕರ್ನಾಟಕ

karnataka

ETV Bharat / business

ಜುಲೈನಲ್ಲಿ ಹರಿದು ಬಂತು ₹7,900 ಕೋಟಿ: ₹1.16 ಲಕ್ಷ ಕೋಟಿ ತಲುಪಿದ ಎಫ್​ಪಿಐ ಬಂಡವಾಳ - FPI - FPI

2024ರಲ್ಲಿ ಇಲ್ಲಿಯವರೆಗೆ ಭಾರತದ ಇಕ್ವಿಟಿ ಮಾರುಕಟ್ಟೆಗೆ 1.16 ಲಕ್ಷ ಕೋಟಿ ರೂ. ಎಫ್​ಪಿಐ ಹೂಡಿಕೆ ಹರಿದು ಬಂದಿದೆ.

ಜುಲೈನಲ್ಲಿ 7,900 ಕೋಟಿ ರೂ. ಎಫ್​​ಪಿಐ ಹೂಡಿಕೆ (ಸಾಂದರ್ಭಿಕ ಚಿತ್ರ)
ಜುಲೈನಲ್ಲಿ 7,900 ಕೋಟಿ ರೂ. ಎಫ್​​ಪಿಐ ಹೂಡಿಕೆ (ಸಾಂದರ್ಭಿಕ ಚಿತ್ರ) (IANS)

By PTI

Published : Jul 7, 2024, 12:08 PM IST

Updated : Jul 7, 2024, 12:14 PM IST

ನವದೆಹಲಿ: ವಿದೇಶಿ ಹೂಡಿಕೆದಾರರು ಈ ತಿಂಗಳ ಮೊದಲ ವಾರದಲ್ಲಿ ಭಾರತೀಯ ಷೇರುಗಳಲ್ಲಿ 7,900 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಿದ್ದಾರೆ ಎಂದು ಡಿಪಾಸಿಟರಿಗಳ ಅಂಕಿಅಂಶಗಳು ತಿಳಿಸಿವೆ. ಇದರೊಂದಿಗೆ ಈಕ್ವಿಟಿಗಳಲ್ಲಿ ಒಟ್ಟು ಎಫ್​​ಪಿಐ ಹೂಡಿಕೆ ಈ ವರ್ಷ ಇಲ್ಲಿಯವರೆಗೆ 1.16 ಲಕ್ಷ ಕೋಟಿ ರೂ.ಗೆ ತಲುಪಿದೆ.

ಕೇಂದ್ರ ಬಜೆಟ್​ ಮಂಡನೆ ಮತ್ತು ಕಂಪನಿಗಳ 2025ರ ಮೊದಲ ತ್ರೈಮಾಸಿಕದ ಆದಾಯದ ಅಂಕಿಅಂಶಗಳು ಮುಂಬರುವ ದಿನಗಳಲ್ಲಿ ಎಫ್​ಪಿಐ ಹರಿವಿನ ಸುಸ್ಥಿರತೆಯನ್ನು ನಿರ್ಧರಿಸಬಹುದು ಎಂದು ತಜ್ಞರು ಹೇಳಿದ್ದಾರೆ. ಅಂಕಿಅಂಶಗಳ ಪ್ರಕಾರ, ವಿದೇಶಿ ಪೋರ್ಟ್​ಫೋಲಿಯೊ ಹೂಡಿಕೆದಾರರು (ಎಫ್​ಪಿಐ) ಈ ತಿಂಗಳ ಜುಲೈ 5 ರವರೆಗೆ ಈಕ್ವಿಟಿಗಳಲ್ಲಿ 7,962 ಕೋಟಿ ರೂ.ಗಳ ನಿವ್ವಳ ಹೂಡಿಕೆ ಮಾಡಿದ್ದಾರೆ.

ರಾಜಕೀಯ ಸ್ಥಿರತೆ ಮತ್ತು ಮಾರುಕಟ್ಟೆಗಳಲ್ಲಿನ ತೀವ್ರ ಚೇತರಿಕೆಯಿಂದಾಗಿ ಜೂನ್​ನಲ್ಲಿ ಈಕ್ವಿಟಿಗಳಲ್ಲಿ 26,565 ಕೋಟಿ ರೂ.ಗಳ ಎಫ್​ಪಿಐ ಹರಿದು ಬಂದಿತ್ತು.

ಇದಕ್ಕೂ ಮೊದಲು, ಮಾರಿಷಸ್​ನೊಂದಿಗಿನ ಭಾರತದ ತೆರಿಗೆ ಒಪ್ಪಂದದಲ್ಲಿನ ಬದಲಾವಣೆ ಮತ್ತು ಯುಎಸ್ ಬಾಂಡ್ ಗಳಿಕೆಯಲ್ಲಿನ ನಿರಂತರ ಏರಿಕೆಯ ಆತಂಕದ ಹಿನ್ನೆಲೆಯಲ್ಲಿ ಎಫ್​​ಪಿಐಗಳು ಭಾರತದ ಷೇರು ಮಾರುಕಟ್ಟೆಯಿಂದ ಮೇ ತಿಂಗಳಲ್ಲಿ 25,586 ಕೋಟಿ ರೂ. ಮತ್ತು ಏಪ್ರಿಲ್​ನಲ್ಲಿ 8,700 ಕೋಟಿ ರೂ. ಹೂಡಿಕೆ ಹಿಂಪಡೆದಿದ್ದರು.

ಇನ್ನು ಕೆಲವು ಎಫ್​​ಪಿಐಗಳು ಹೂಡಿಕೆ ಮಾಡಲು ಭಾರತದ ಚುನಾವಣಾ ಪ್ರಕ್ರಿಯೆ ಮುಗಿಯುವುದನ್ನು ಕಾಯುತ್ತಿದ್ದಾರೆ ಎಂದು ಜೂಲಿಯಸ್ ಬೇರ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಮಿಲಿಂದ್ ಮುಚಲಾ ಹೇಳಿದ್ದಾರೆ. "ಆರೋಗ್ಯಕರ ಆರ್ಥಿಕ ಮತ್ತು ಗಳಿಕೆಯ ಬೆಳವಣಿಗೆಯ ವೇಗದ ನಡುವೆ ಭಾರತವು ಆಕರ್ಷಕ ಹೂಡಿಕೆ ತಾಣವಾಗಿ ಮುಂದುವರಿದಿದೆ. ಹೀಗಾಗಿ ಎಫ್​ಪಿಐಗಳು ಭಾರತದ ಮಾರುಕಟ್ಟೆಗಳನ್ನು ದೀರ್ಘಾವಧಿಯವರೆಗೆ ನಿರ್ಲಕ್ಷಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ಜೂನ್ 30ಕ್ಕೆ ಕೊನೆಗೊಂಡ ಪಾಕ್ಷಿಕದಲ್ಲಿ, ಎಫ್​ಪಿಐಗಳು ಟೆಲಿಕಾಂ ಮತ್ತು ಹಣಕಾಸು ಉದ್ಯಮದ ಷೇರುಗಳನ್ನು ಭಾರಿ ಪ್ರಮಾಣದಲ್ಲಿ ಖರೀದಿಸಿದ್ದಾರೆ. ಅಲ್ಲದೆ ಆಟೋ, ಬಂಡವಾಳ ಸರಕುಗಳು, ಆರೋಗ್ಯ ಮತ್ತು ಐಟಿ ವಲಯದಲ್ಲಿಯೂ ಎಫ್​​ಪಿಐಗಳು ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದಾರೆ. ಮತ್ತೊಂದೆಡೆ ಲೋಹ, ಗಣಿಗಾರಿಕೆ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ಎಫ್​ಪಿಐಗಳು ತಮ್ಮ ಹೂಡಿಕೆಯನ್ನು ಹಿಂಪಡೆದಿರುವುದು ಕಂಡು ಬಂದಿದೆ. ಈಕ್ವಿಟಿಗಳ ಹೊರತಾಗಿ, ಎಫ್​ಪಿಐಗಳು ಡೆಬ್ಟ್​ ಮಾರುಕಟ್ಟೆಯಲ್ಲಿ 6,304 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಈ ವರ್ಷ ಇಲ್ಲಿಯವರೆಗೆ ಡೆಬ್ಟ್​​ ಮಾರುಕಟ್ಟೆಯ ಗಾತ್ರ 74,928 ಕೋಟಿ ರೂ.ಗೆ ಏರಿಕೆಯಾಗಿದೆ.

ಇದನ್ನೂ ಓದಿ: ಬಜಾಜ್ 'ಫ್ರೀಡಂ 125' ಸಿಎನ್​ಜಿ ಬೈಕ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ? - CNG motorcycle

Last Updated : Jul 7, 2024, 12:14 PM IST

ABOUT THE AUTHOR

...view details