ಕರ್ನಾಟಕ

karnataka

ETV Bharat / business

ವರ್ಷದಲ್ಲಿ 20 ಸಾವಿರ ರೂ ಏರಿಕೆಯಾದ ಚಿನ್ನದ ಬೆಲೆ: ಈಗಲೇ ಬಂಗಾರ ಖರೀದಿಸಬೇಕೆ?: 2025 ರಲ್ಲಿ ಲಕ್ಷ ತಲುಪುತ್ತಾ Gold?

ಕಳೆದ ವರ್ಷ 60 ಸಾವಿರದ ಆಸುಪಾಸಿನಲ್ಲಿದ್ದ ಶುದ್ಧ ಬಂಗಾರ ಈ ವರ್ಷ 80 ಸಾವಿರದ ಆಸುಪಾಸಿನಲ್ಲಿದೆ. ಇದು ಮುಂದಿನ ವರ್ಷ ಇದೇ ಅವಧಿಯೊಳಗೆ ಎಷ್ಟಾಗಬಹುದು ಅಂತಾ ಒಮ್ಮೆ ಯೋಚಿಸಿ.

dhanteras-2024-gold-prices-shine-bright-set-to-rise-further-in-2025
ವರ್ಷದಲ್ಲಿ 20 ಸಾವಿರ ರೂ ಏರಿಕೆಯಾದ ಚಿನ್ನದ ಬೆಲೆ (ETV Bharat)

By ETV Bharat Karnataka Team

Published : 4 hours ago

Gold Price Forecast :

  • 2023 ಧನತ್ರಯೋದಶಿ ದಿನ 10 ಗ್ರಾಂ ಚಿನ್ನದ ಬೆಲೆ ರೂ.60,700
  • ಅಕ್ಟೋಬರ್ 25, 2024 ರಂದು 10 ಗ್ರಾಂ ಚಿನ್ನದ ಬೆಲೆ ರೂ. 80,600
  • ಧನ್ತೇರಸ್ 2025 ರ ಚಿನ್ನದ ಬೆಲೆ = ?

Every Day increase Gold Rate: ಭಾರತದಲ್ಲಿ ಚಿನ್ನದ ಬೆಲೆ ತೀವ್ರವಾಗಿ ಹೆಚ್ಚುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ದೇಶದಲ್ಲಿ ಚಿನ್ನದ ಬೆಲೆ ಸುಮಾರು ಶೇ 30ರಷ್ಟು ಹೆಚ್ಚಾಗಿದೆ. ಪ್ರಸ್ತುತ 10 ಗ್ರಾಂ ಶುದ್ಧ ಚಿನ್ನದ (24 ಕ್ಯಾರೆಟ್) ಬೆಲೆ 80,600 ರೂ. ಕಳೆದ ಕೆಲವು ವಾರಗಳಿಂದ ಚಿನ್ನ ಇದೇ ದರದಲ್ಲಿ ಏರಿಕೆ ಕಾಣುತ್ತಾ ಸಾಗಿದೆ. ಮೇಲಾಗಿ ಈಗ ಮದುವೆ ಸೀಸನ್ ಶುರುವಾಗುತ್ತಿದೆ. ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಇಂತಹ ಸಂದರ್ಭಗಳಲ್ಲಿ ನೀವು ಚಿನ್ನದ ಮೇಲೆ ಹೂಡಿಕೆ ಮಾಡಬಹುದೇ? ಬೇಡವೇ ಎಂಬ ಬಗ್ಗೆ ತಿಳಿದುಕೊಳ್ಳೋಣ.

ಭಾರತೀಯ ಚೀನಿವಾರು ಮಾರುಕಟ್ಟೆ ಮತ್ತು ಜ್ಯುವೆಲ್ಲರಿ ಅಸೋಸಿಯೇಷನ್ ​IBJA ಅಂಕಿ ಅಂಶಗಳ ಪ್ರಕಾರ, ಕಳೆದ ದೀಪಾವಳಿಯಿಂದ ಅಂದರೆ 2023ರ ನವೆಂಬರ್ 10ರಂದು 10 ಗ್ರಾಂ ಚಿನ್ನದ ಬೆಲೆ 60,750 ರೂ ಇತ್ತ. ಆ ಬೆಲೆ ಈಗ 80,600 ರೂ.ಗೆ ಏರಿಕೆಯಾಗಿದೆ.

ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆಯೇ?: ಅಕ್ಟೋಬರ್ 24, 2024 ರಂದು IBJA ಪ್ರಕಟಿಸಿದ ದರಗಳ ಪ್ರಕಾರ, 24 ಕ್ಯಾರೆಟ್​ನ ಒಂದು ಗ್ರಾಂ ಚಿನ್ನದ ಬೆಲೆ ರೂ.7,825 ಆಗಿದೆ. ಇನ್ನು 22ಕ್ಯಾರೆಟ್ ಚಿನ್ನದ ಗ್ರಾಂ ಬೆಲೆ ರೂ.7,637ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಕಳೆದ ಮೂರು ವರ್ಷಗಳಲ್ಲಿ 'MCX ಗೋಲ್ಡ್' ಎರಡಂಕಿಯ ಆದಾಯ ನೀಡಿದೆ. ಇದು ದೀರ್ಘಾವಧಿಯ ಹೂಡಿಕೆಯ ಕಲ್ಪನೆಯನ್ನು ನಿಮಗೆ ಒದಗಿಸುತ್ತದೆ.

ಚಿನ್ನದ ಬೆಲೆ ಏರಿಕೆಗೆ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರಣಗಳಿವೆ. ಪಶ್ಚಿಮ ಏಷ್ಯಾದಲ್ಲಿ ರಷ್ಯಾ - ಉಕ್ರೇನ್ ಮತ್ತು ಇಸ್ರೇಲ್ - ಇರಾನ್ - ಹಮಾಸ್ ನಡುವೆ ನಡೆಯುತ್ತಿರುವ ಉದ್ವಿಗ್ನತೆ ಜಗತ್ತನ್ನು ಹೆದರಿಸುತ್ತಿದೆ. ಇಂತಹ ಉದ್ವಿಗ್ನತೆ ಸಂದರ್ಭಗಳಲ್ಲಿ ಹೂಡಿಕೆದಾರರಿಗೆ ಚಿನ್ನವು ವಿಶ್ವಾಸಾರ್ಹ ಹೂಡಿಕೆ ಸಾಧನವಾಗಿದೆ. ಹಾಗಾಗಿಯೇ ಅಂತಾರಾಷ್ಟ್ರೀಯ ಚಿನ್ನದ ಬೆಲೆ ಘಾತೀಯವಾಗಿ ಏರುತ್ತಿದೆ.

ಸ್ಪಾಟ್ ಚಿನ್ನದ ಬೆಲೆಯ ವಿಷಯಕ್ಕೆ ಬಂದರೆ, 2007 ರಿಂದ ಸುಮಾರು 33 ಪ್ರತಿಶತದಷ್ಟು ಹೆಚ್ಚಾಗಿದೆ. ಇದು ಹೂಡಿಕೆದಾರರಲ್ಲಿನ ಆಶಾವಾದಿ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಅಂತಾರಾಷ್ಟ್ರೀಯ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಯುಎಸ್ ಫೆಡರಲ್ ರಿಸರ್ವ್ ಪ್ರಮುಖ ಬಡ್ಡಿದರಗಳನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸುತ್ತಿರುವುದರಿಂದ ಭವಿಷ್ಯದಲ್ಲಿ ಚಿನ್ನದ ದರಗಳು ಮತ್ತಷ್ಟು ಏರಿಕೆಯಾಗುವ ಅವಕಾಶವಿದೆ ಎಂದು ಹಣಕಾಸು ತಜ್ಞರು ಭವಿಷ್ಯ ನುಡಿದಿದ್ದಾರೆ.

ಕೇಂದ್ರೀಯ ಬ್ಯಾಂಕುಗಳು ಏನು ಮಾಡುತ್ತಿವೆ?:ಜಾಗತಿಕವಾಗಿ ಅನೇಕ ದೇಶಗಳ ಕೇಂದ್ರ ಬ್ಯಾಂಕ್‌ಗಳು ಚಿನ್ನದ ಸಂಗ್ರಹವನ್ನು ಹೆಚ್ಚಿಸಿಕೊಳ್ಳುತ್ತಿವೆ. ವಿಶೇಷವಾಗಿ ಚೀನಾ 2022 ರಿಂದ ತನ್ನ ಚಿನ್ನದ ಸಂಗ್ರಹವನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಚೀನಾ ಇಲ್ಲಿಯವರೆಗೆ 2,262 ಟನ್ ಚಿನ್ನದ ಸಂಗ್ರಹವನ್ನು ಮಾಡಿಕಟ್ಟುಕೊಂಡಿದೆ. ಆಕ್ಸಿಸ್ ಸೆಕ್ಯುರಿಟೀಸ್‌ನ ಇತ್ತೀಚಿನ ವರದಿಯ ಪ್ರಕಾರ, ಈ ಪ್ರವೃತ್ತಿಯು 2025 ರವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಇದು ಬುಲಿಯನ್ ಮಾರುಕಟ್ಟೆಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಹಾಗಾಗಿ ಚಿನ್ನದಲ್ಲಿ ದೀರ್ಘಕಾಲದ ಹೂಡಿಕೆ ಮಾಡುವವರಿಗೆ ಇದೊಂದು ಉತ್ತಮ ಅವಕಾಶ ಎಂದೇ ಹೇಳಬಹುದು.

ನೀವು ಚಿನ್ನದ ಮೇಲೆ ಹೂಡಿಕೆ ಮಾಡಬಹುದೇ?:ಪ್ರಪಂಚದಾದ್ಯಂತ ನಡೆಯುತ್ತಿರುವ ಉದ್ವಿಗ್ನತೆಗಳಿಂದಾಗಿ, ಚೀನಾ ಸೇರಿದಂತೆ ಹಲವು ದೇಶಗಳ ಕೇಂದ್ರ ಬ್ಯಾಂಕ್‌ಗಳು ತಮ್ಮ ಚಿನ್ನದ ಸಂಗ್ರಹದ ಮಿತಿಗಳನ್ನು ಹೆಚ್ಚಿಕೊಳ್ಳುತ್ತಿವೆ. ಫೆಡರಲ್ ರಿಸರ್ವ್​​ನ ಪ್ರಮುಖ ಬಡ್ಡಿದರಗಳನ್ನು ಕಡಿತಗೊಳಿಸಿರುವುದು ಸೇರಿ ಇತ್ಯಾದಿಗಳಿಂದ ಆರ್ಥಿಕತೆಯು ನಿಧಾನವಾಗುವ ಸಾಧ್ಯತೆಯಿದೆ. ಹಾಗಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿರುವ ಚಿನ್ನದ ಮೇಲೆ ಹೆಚ್ಚು ಕೇಂದ್ರೀಕರಿಸಬಹುದು. ಇದೇ ವೇಳೆ, ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗಲಿದೆ. ಕೆಲವು ಹಣಕಾಸು ತಜ್ಞರ ಪ್ರಕಾರ 2025ರಲ್ಲೂ ಇದೇ ಟ್ರೆಂಡ್ ಮುಂದುವರಿಯಲಿದೆ. ಹಾಗಾಗಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ

ಆಕ್ಸಿಸ್ ಸೆಕ್ಯುರಿಟೀಸ್ ವರದಿಯ ಪ್ರಕಾರ,ಸದ್ಯ ಚಿನ್ನದ ಬೆಲೆ ತುಂಬಾ ಹೆಚ್ಚಾಗಿದೆ. ಆದರೆ ನೀವು 72,000 - 75,000 ಬೆಲೆಯಲ್ಲಿ ಚಿನ್ನವನ್ನು ಖರೀದಿಸಿದರೆ, ಮುಂಬರುವ ದೀಪಾವಳಿ (ಧನ್ತೇರಸ್) ವೇಳೆಗೆ ಚಿನ್ನದ ಬೆಲೆ ರೂ.85,000 ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ.

ಇವುಗಳನ್ನು ಒಮ್ಮೆ ಗಮನಿಸಿ:ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ ಅನಧಿಕೃತ ಶುಲ್ಕದ ಹೊರೆಯೇ?; ಹಾಗಾದರೆ ಸಮಸ್ಯೆ ಈ ರೀತಿ ಪರಿಹರಿಸಿಕೊಳ್ಳಬಹುದು!

ಚಿನ್ನ VS ಡೈಮಂಡ್ ; ಹೂಡಿಕೆಗೆ ಯಾವುದು ಬೆಸ್ಟ್​​?: ಯಾವುದು ಕಡಿಮೆ ರಿಸ್ಕ್​? : ನಿಮ್ಮ ಆಯ್ಕೆ ಏನು?

ಕೈ ಸುಡುತ್ತಿದೆ ಬಂಗಾರ.. ದೀಪಾವಳಿಗೆ ಚಿನ್ನದ ಬದಲಾಗಿ ಬೆಳ್ಳಿ ಕೊಳ್ಳಿ: ಇದರಿಂದ ಇವೆ ಹಲವು ಲಾಭಗಳು

ಹಬ್ಬದ ಎಫೆಕ್ಟ್​: ಆಹಾರದ ಪ್ರತಿ ಆರ್ಡರ್​ಗೆ ಮತ್ತೆ ₹10 ಹೆಚ್ಚಿಸಿದ ಜೊಮಾಟೊ, ಸ್ವಿಗ್ಗಿ

ಷೇರು ಮಾರುಕಟ್ಟೆ: ಸೆನ್ಸೆಕ್ಸ್​ ಅಲ್ಪ ಕುಸಿತ, 24,400ಕ್ಕಿಂತ ಕೆಳಗಿಳಿದ ನಿಫ್ಟಿ

ABOUT THE AUTHOR

...view details