New Recharge Plans: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ಆದೇಶವನ್ನು ಅನುಸರಿಸಿ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೋಡಾಫೋನ್ - ಐಡಿಯಾ ತನ್ನ ಬಳಕೆದಾರರಿಗೆ ಕಾಲಿಂಗ್ ಮತ್ತು ಎಸ್ಎಮ್ಎಸ್ ಪ್ಲಾನ್ಗಳನ್ನು ಘೋಷಿಸಿವೆ. ಇವುಗಳ ಬಗ್ಗೆ ತಿಳಿಯೋಣ ಬನ್ನಿ..
ಏರ್‌ಟೆಲ್ ನ್ಯೂ ಪ್ಲಾನ್: ಏರ್‌ಟೆಲ್ ತನ್ನ ಬಳಕೆದಾರರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಎರಡು ಹೊಸ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳಲ್ಲಿ ಕರೆ ಮತ್ತು SMS ಸೌಲಭ್ಯಗಳನ್ನು ಮಾತ್ರ ಒದಗಿಸಲಾಗಿದೆ. ಆದರೆ ಈ ಬೆಲೆಗಳಲ್ಲಿ ಮೊದಲು ಲಭ್ಯವಿದ್ದ ಡೇಟಾ ಸೌಲಭ್ಯವನ್ನು ತೆಗೆದುಹಾಕಲಾಗಿದೆ. ಆ ಪ್ಲಾನ್ಗಳ ವಿವರ ಈ ಕೆಳಗೆ ನೀಡಲಾಗಿದೆ.
499 ರೂ. ಪ್ರಿಪೇಯ್ಡ್ ಪ್ಲಾನ್: ಏರ್‌ಟೆಲ್ 499 ರೂ.ಗಳ ಪ್ರಿಪೇಯ್ಡ್ ಪ್ಲಾನ್ ಅನ್ನು ಘೋಷಿಸಿದೆ. ಇದರಲ್ಲಿ ಬಳಕೆದಾರರು ಅನ್ಲಿಮಿಟೆಡ್ ಕಾಲಿಂಗ್ ಮತ್ತು 900 ಎಸ್ಎಮ್ಎಸ್ ಸೌಲಭ್ಯ ಪಡೆಯುತ್ತಾರೆ. ಈ ಯೋಜನೆಯ ಮಾನ್ಯತೆ 84 ದಿನಗಳು. ಈ ಯೋಜನೆಯೊಂದಿಗೆ ಬಳಕೆದಾರರು ಅಪೊಲೊ 24/7 ಸರ್ಕಲ್ ಮೆಂಬರ್ಶಿಪ್ ಮತ್ತು 3 ತಿಂಗಳವರೆಗೆ ಉಚಿತ ಹಲೋ ಟ್ಯೂನ್ಸ್ ಅನ್ನು ಸಹ ಪಡೆಯುತ್ತಾರೆ.
1959 ರೂ. ಪ್ರಿಪೇಯ್ಡ್ ಪ್ಲಾನ್: ಏರ್‌ಟೆಲ್‌ನ ಎರಡನೇ ಹೊಸ ಯೋಜನೆ 1959 ರೂಪಾಯಿ. ಈ ಪ್ಲಾನ್ನಲ್ಲಿ ಗ್ರಾಹಕರು 365 ದಿನಗಳ ಮಾನ್ಯತೆ ಪಡೆಯುತ್ತಾರೆ. ಬಳಕೆದಾರರು ಇಡೀ ವರ್ಷ ಅನ್ಲಿಮಿಟೆಡ್ ಕಾಲಿಂಗ್ ಮತ್ತು 3600 ಎಸ್ಎಮ್ಎಸ್ ಸೌಲಭ್ಯವನ್ನು ಪಡೆಯುತ್ತಾರೆ. ಇದಲ್ಲದೇ ಈ ಪ್ಲಾನ್ ಜೊತೆ ಬಳಕೆದಾರರು ಅಪೊಲೊ 24/7 ಸರ್ಕಲ್ ಮೆಂಬರ್ಶಿಪ್ ಮತ್ತು 3 ತಿಂಗಳವರೆಗೆ ಉಚಿತ ಹಲೋ ಟ್ಯೂನ್‌ಗಳನ್ನು ಸಹ ಪಡೆಯುತ್ತಾರೆ.
ಜಿಯೋ ನ್ಯೂ ಪ್ಲಾನ್: ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ರಿಲಯನ್ಸ್ ಜಿಯೋ ಟ್ರಾಯ್ನ ಇತ್ತೀಚಿನ ನಿರ್ದೇಶನಗಳನ್ನು ಅನುಸರಿಸಿ ಕಾಲಿಂಗ್ ಮತ್ತು ಎಸ್ಎಮ್ಎಸ್ ಪ್ರಿಪೇಯ್ಡ್ ಪ್ಲಾನ್ಗಳನ್ನು ಪ್ರಾರಂಭಿಸಿದೆ. ಇದರ ವಿವರ ಈ ಕೆಳಗೆ ನೀಡಲಾಗಿದೆ.
458 ರೂ. ಪ್ರಿಪೇಯ್ಡ್ ಪ್ಲಾನ್: ರಿಲಯನ್ಸ್ ಜಿಯೋ 458 ರೂ.ಗಳ ಪ್ರಿಪೇಯ್ಡ್ ಪ್ಲಾನ್ ಅನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಈ ಯೋಜನೆಯಲ್ಲಿ ಬಳಕೆದಾರರು 84 ದಿನಗಳ ಮಾನ್ಯತೆಯೊಂದಿಗೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು 1000 ಎಸ್ಎಮ್ಎಸ್ ಸೌಲಭ್ಯವನ್ನು ಪಡೆಯುತ್ತಾರೆ. ಇದಲ್ಲದೆ ಈ ಯೋಜನೆಯಡಿಯಲ್ಲಿ ಜಿಯೋ ಬಳಕೆದಾರರು ಜಿಯೋಟಿವಿ, ಜಿಯೋಕ್ಲೌಡ್ ಮತ್ತು ಜಿಯೋಸಿನಿಮಾ ಪ್ರಯೋಜನಗಳಂತಹ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ.
ರೂ.479 ಪ್ರಿಪೇಯ್ಡ್ ಯೋಜನೆ: ರೂ.458 ಕಾಲಿಂಗ್ ಪ್ಲಾನ್ ಪ್ರಾರಂಭಿಸಲು ಜಿಯೋ ತನ್ನ ಹಳೆಯ ರೂ.479 ಪ್ರಿಪೇಯ್ಡ್ ಯೋಜನೆಯನ್ನು ಸ್ಥಗಿತಗೊಳಿಸಿದೆ. ಆ ಯೋಜನೆಯಲ್ಲಿ, ಬಳಕೆದಾರರು 84 ದಿನಗಳವರೆಗೆ ಅನಿಯಮಿತ ಕರೆ, 1000 SMS ಮತ್ತು 6GB ಡೇಟಾವನ್ನು ಪಡೆಯುತ್ತಿದ್ದರು. ಇದಲ್ಲದೇ ಬಳಕೆದಾರರು ಜಿಯೋಟಿವಿ, ಜಿಯೋ ಕ್ಲೌಡ್ ಮತ್ತು ಜಿಯೋ ಸಿನಿಮಾ (ಪ್ರೀಮಿಯಂ ಅಲ್ಲದ) ಚಂದಾದಾರಿಕೆಯನ್ನು ಸಹ ಪಡೆಯುತ್ತಿದ್ದರು. ಈಗ ಈ ಪ್ಲಾನ್ ಬಂದ್ ಆಗಿದೆ.
ನೀವು ಜಿಯೋದ ಡೇಟಾ ಬೂಸ್ಟರ್ ಯೋಜನೆಯನ್ನು ಖರೀದಿಸಲು ಬಯಸಿದರೆ 6GB ಡೇಟಾ ಪಡೆಯಲು 69 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. ಇದರ ಮಾನ್ಯತೆಯು ಸಕ್ರಿಯ ಯೋಜನೆಗೆ ಸಮಾನವಾಗಿರುತ್ತದೆ.
1,958 ರೂ.ಗಳ ಪ್ರಿಪೇಯ್ಡ್ ಯೋಜನೆ: ಜಿಯೋದ ಮತ್ತೊಂದು ರಿಚಾರ್ಜ್ ಪ್ಲಾನ್ನ ಬೆಲೆ 1958 ರೂ. ಆಗಿದೆ. ಈ ಹೊಸ ಪ್ರಿಪೇಯ್ಡ್ ಯೋಜನೆಯಲ್ಲಿ ಬಳಕೆದಾರರು 365 ದಿನಗಳವರೆಗೆ ಅಂದರೆ ಇಡೀ ವರ್ಷಕ್ಕೆ ಅನ್ಲಿಮಿಟೆಡ್ ಕಾಲಿಂಗ್ ಮತ್ತು ಒಟ್ಟು 3600 SMS ಸೌಲಭ್ಯವನ್ನು ಪಡೆಯುತ್ತಾರೆ. ಈ ಯೋಜನೆ ಜೊತೆ ಬಳಕೆದಾರರು ಜಿಯೋಟಿವಿ, ಜಿಯೋಕ್ಲೌಡ್ ಮತ್ತು ಜಿಯೋ ಸಿನಿಮಾದ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ. ಆದ್ರೆ ಬಳಕೆದಾರರು ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುವುದಿಲ್ಲ ಎಂಬುದು ನೆನಪಿಡಬೇಕಾದ ಅಂಶ..
ಈ ಪ್ಲಾನ್ಗಾಗಿ ಜಿಯೋ ತನ್ನ ಹಳೆಯ 1899 ರೂ. ಪ್ರಿಪೇಯ್ಡ್ ಯೋಜನೆಯನ್ನು ಬಂದ್ ಮಾಡಿದೆ. ಈ ಪ್ಲಾನ್ ಅಡಿಯಲ್ಲಿ ಬಳಕೆದಾರರು 336 ದಿನಗಳವರೆಗೆ ಅನಿಯಮಿತ ಕರೆ ಮತ್ತು ಎಸ್ಎಮ್ಎಸ್ ಸೌಲಭ್ಯ ಜೊತೆ ಒಟ್ಟು 24GB ಡೇಟಾವನ್ನು ಪಡೆಯುತ್ತಿದ್ದರು.
ವೊಡಾಫೋನ್-ಐಡಿಯಾ ನ್ಯೂ ಪ್ಲಾನ್: ಟ್ರಾಯ್ ಮಾರ್ಗಸೂಚಿಗಳ ಪ್ರಕಾರ ವೋಡಾಫೋನ್ - ಐಡಿಯಾ ಸಹ ಹೊಸ ಪ್ಲಾನ್ ಅನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಈ ಪ್ಲಾನ್ ಅಡಿಯಲ್ಲಿ ಗ್ರಾಹಕರು ಕಾಲಿಂಗ್ ಮತ್ತು ಎಸ್ಎಮ್ಎಸ್ಗೆ ಮಾತ್ರ ಹಣ ಪಾವತಿಸಬೇಕಾಗುತ್ತದೆ. ಈ ರೀಚಾರ್ಜ್ ಪ್ಲಾನ್ ವಿವರ ಈ ಕೆಳಗೆ ನೀಡಲಾಗಿದೆ.
ರೂ.1,460 ಪ್ರಿಪೇಯ್ಡ್ ಯೋಜನೆ: ವೊಡಾಫೋನ್-ಐಡಿಯಾ ಕಾಲಿಂಗ್ ಮತ್ತು ಎಸ್ಎಮ್ಎಸ್ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯ ಬೆಲೆ 1460 ರೂ.ಗಳಾಗಿದ್ದು, ಇದರಲ್ಲಿ VI ಬಳಕೆದಾರರು 270 ದಿನಗಳ ಸಿಂಧುತ್ವ ಪಡೆಯುತ್ತಾರೆ. ಅಂದ್ರೆ ಸರಿಸುಮಾರು 9 ತಿಂಗಳು ಸಿಂಧುತ್ವ ಪಡೆಯಲಿದ್ದಾರೆ.
ಈ ಪ್ಲಾನ್ ಅಡಿ ಅವರು ಅನ್ಲಿಮಿಟೆಡ್ ಕಾಲಿಂಗ್ ಮತ್ತು ಒಟ್ಟು 100 ಎಸ್ಎಮ್ಎಸ್ ಪಡೆಯುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ 100 ಎಸ್ಎಮ್ಎಸ್ ಖಾಲಿಯಾದ ನಂತರ ಕಂಪನಿಯು ಪ್ರತಿ ಲೋಕಲ್ ಎಸ್ಎಮ್ಎಸ್ 1 ರೂ. ಮತ್ತು ಪ್ರತಿ STD ಎಸ್ಎಮ್ಎಸ್ಗೆ 1.5 ರೂ. ಶುಲ್ಕ ವಿಧಿಸುತ್ತದೆ. ಕಂಪನಿಯು ಶೀಘ್ರದಲ್ಲೇ ತನ್ನ ಬಳಕೆದಾರರಿಗಾಗಿ ಇನ್ನೂ ಕೆಲವು ಹೊಸ ಯೋಜನೆಗಳನ್ನು ಪ್ರಾರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಓದಿ: ಆಪಲ್ - ಆಂಡ್ರಾಯ್ಡ್ ಬಳಕೆದಾರರಿಗೆ ವಿಭಿನ್ನ ದರಗಳ ನಿಗದಿ ಆರೋಪ: ಉಬರ್ ಪ್ರತಿಕ್ರಿಯೆ ಏನು?