ಕರ್ನಾಟಕ

karnataka

ETV Bharat / business

ಪೂರ್ಣಕಾಲಿಕ ನೌಕರರ ನೇಮಕಾತಿ ಕುಸಿತ; ಹೊರಗುತ್ತಿಗೆ ಸೇವೆಗೆ ಹೆಚ್ಚಿದ ಬೇಡಿಕೆ

ಇತ್ತೀಚಿನ ದಿನಗಳಲ್ಲಿ ಸ್ಟಾರ್ಟಪ್​ ಮತ್ತು ಇತರೆ ಉದ್ಯಮಗಳು ಹೊರಗುತ್ತಿಗೆ ಸೇವೆಯತ್ತ ಒಲವು ತೋರುತ್ತಿವೆ ಎಂದು ವರದಿ ತಿಳಿಸಿದೆ.

By ETV Bharat Karnataka Team

Published : Feb 1, 2024, 10:57 AM IST

demand for outsourcing companies increased
demand for outsourcing companies increased

ನವದೆಹಲಿ:ಉದ್ಯೋಗ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳಂತೆ ಉದ್ಯೋಗ ಕಡಿತಗಳೂ ಮುಂದುವರೆದಿವೆ. ಇದೀಗ ಸಂಸ್ಥೆಗಳು ನೇರ ನೇಮಕಾತಿಗೆ ಬದಲಾಗಿ ಹೊರಗುತ್ತಿಗೆ ಸೇವೆಯ ಮೂಲಕ ನೌಕರರ ಭರ್ತಿಗೆ ಮುಂದಾಗಿವೆ. ಈ ಪ್ರವೃತ್ತಿಯಿಂದಾಗಿ ಪೂರ್ಣಕಾಲಿಕ ಉದ್ಯೋಗಿಗಳ ನೇಮಕಾತಿಯಲ್ಲಿ ಶೇ.17.23ರಷ್ಟು ಕುಸಿತವಾಗಿದೆ ಎಂದು ವರದಿ ತಿಳಿಸಿದೆ.

ಹಿರಿಯ ಅಧಿಕಾರಿಗಳ ನೇಮಕದಲ್ಲೂ ಶೇ.37.63ರಷ್ಟು ಕುಸಿತವಾಗಿದೆ ಎಂದು ಬ್ಯುಸಿನೆಸ್​ ಫೈನಾನ್ಸ್​​ ಫ್ಲಾಟ್​​ಫಾರ್ಮ್​ರೊಜರ್​ಪೇಎಕ್ಸ್​​ ದತ್ತಾಂಶದ ವರದಿ ನೀಡಿದೆ. ಸ್ಟಾರ್ಟಪ್​ ಮತ್ತು ಉದ್ಯಮಗಳು ಹೊರ ಗುತ್ತಿಗೆ ಸೇವೆಯತ್ತ ಒಲವು ತೋರುತ್ತಿದ್ದು, ಸಿಎಕ್ಸ್​ಒನಂತಹ ಪೂರ್ಣಕಾಲಿಕ ಹುದ್ದೆಗಳ ಭರ್ತಿ ನೇಮಕಾತಿಯೂ ಕಡಿಮೆಯಾಗಿದೆ. ಉದ್ಯಮಗಳು ವೈವಿಧ್ಯಮಯ ಮೌಲ್ಯಗಳನ್ನು ಪೋಷಿಸುವ ಬದ್ಧತೆ ತೋರಿವೆ ಎಂದು ರೋಜರ್​ಪೇಎಕ್ಸ್​​​ನ ಜನರಲ್​ ಮ್ಯಾನೇಜರ್​​ ಆಯುಷ್​ ಬನ್ಸಾಲ್​ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಏಪ್ರಿಲ್‌ನಿಂದ ಡಿಸೆಂಬರ್ 2023ರವರೆಗೆ ರೋಜರ್​ಪೇಎಕ್ಸ್​​ ವೇತನ ಪಟ್ಟಿ ಬಳಸುತ್ತಿರುವ 20ಕ್ಕೂ ಹೆಚ್ಚು ಉದ್ಯಮ ವಲಯದಲ್ಲಿನ 30,000ಕ್ಕೂ ಮೀರಿದ ಉದ್ಯೋಗಿಗಳ ವೇತನದಾರರ ಡೇಟಾವನ್ನು ವಿಶ್ಲೇಷಿಸಲಾಗಿದೆ. ಕಳೆದ ಒಂಬತ್ತು ತಿಂಗಳುಗಳಲ್ಲಿ ಪೂರ್ಣಕಾಲಿಕ ಹುದ್ದೆಗಳ ನೇಮಕಾತಿ ಬೇಡಿಕೆ ನಿಧಾನವಾಗಿದ್ದು, ಹೊರಗುತ್ತಿಗೆ ಕಂಪನಿಗಳಿಗೆ ಬೇಡಿಕೆ ಏರಿದೆ. ಇದರ ಹಣದ ಒಳಹರಿವು ಶೇ.26.77ರಷ್ಟು ಜಾಸ್ತಿಯಾಗಿದೆ.

ತಂತ್ರಜ್ಞಾನ, ಸೇಲ್ಸ್​ ಆ್ಯಂಡ್​ ಮಾರ್ಕೆಟಿಂಗ್​ ಮತ್ತು ಲಾಜಿಸ್ಟಿಕ್ಸ್​​ ಮತ್ತು ಆಪರೇಷನ್ಸ್​​ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಹೊರಗುತ್ತಿಗೆ ಸೇವೆಗಳ ಬೇಡಿಕೆ ಏರಿಕೆಯಾಗಿದೆ. ಇದಕ್ಕಿಂತ ಹೆಚ್ಚಾಗಿ ಕಳೆದ ಒಂಬತ್ತು ತಿಂಗಳುಗಳಲ್ಲಿ ವಿತರಿಸಲಾದ ಒಟ್ಟು ವೇತನ ಶೇ.8.22ರಷ್ಟು ಹೆಚ್ಚಾಗಿದೆ. ಪೂರ್ಣಕಾಲಿಕ ನೌಕರರ ವೇತನವೂ 6.69ರಷ್ಟು ಹೆಚ್ಚಳ ಕಂಡಿದೆ. ಮಹಿಳಾ ಉದ್ಯೋಗಿಗಳ ವೇತನ ಶೇ.9.13ರಷ್ಟು ಏರಿಕೆಯಾದರೆ, ಪುರುಷ ಉದ್ಯೋಗಿಗಳ ವೇತನ 8.87ರಷ್ಟು ಹೆಚ್ಚಾಗಿದೆ.

ನೇಮಕಾತಿ ಕುಸಿತದ ಹೊರತಾಗಿಯೂ ವಿಶೇಷವಾಗಿ ಮಹಿಳಾ ಉದ್ಯೋಗಿಗಳಿಗೆ ಸಂಬಳದಲ್ಲಿನ ಬೆಳವಣಿಗೆ ಕಂಡಿದೆ. ಕೆಲಸದ ಸ್ಥಳದಲ್ಲಿ ವೈವಿಧ್ಯತೆ ಗೌರವಿಸುವ ಮತ್ತು ಎಲ್ಲಾ ಸದಸ್ಯರ ಕೊಡುಗೆಗಳನ್ನು ಗುರುತಿಸುವ ಕೆಲಸಗಳೂ ಉದ್ಯಮದ ಬದ್ಧತೆಯನ್ನು ತೋರಿಸುತ್ತಿವೆ ಎಂದು ಬನ್ಸಾಲ್​ ತಿಳಿಸಿದರು.

ಪೂರ್ಣಕಾಲಿಕ ಉದ್ಯೋಗಿಗಳ ನೇಮಕಾತಿ ಕುಸಿತದ ಹೊರತಾಗಿ ಸೇಲ್ಸ್​​ ಮತ್ತು ಮಾರ್ಕೆಟಿಂಗ್​ ಮತ್ತು ಫೈನಾನ್ಸ್​​ ವಿಭಾಗಗಳು ಕ್ರಮವಾಗಿ ಶೇ.23.24 ಮತ್ತು ಶೇ.21.45ರಷ್ಟು ಏರಿಕೆಯಾಗಿವೆ. ಫೈನಾನ್ಸ್​​ ಮತ್ತು ಮಾನವ ಸಂಪನ್ಮೂಲ ವಿಭಾಗದಲ್ಲಿ ಪೂರ್ಣಕಾಲಿಕ ನೌಕರರ ವೇತನ ಕ್ರಮವಾಗಿ ಶೇ.11.06ರಷ್ಟು ಮತ್ತು ಶೇ.8.90ರಷ್ಟು ಹೆಚ್ಚಾಗಿದೆ.(ಐಎಎನ್​ಎಸ್​)

ಇದನ್ನೂ ಓದಿ: ಫೆಬ್ರವರಿ 29ರ ನಂತರ ಠೇವಣಿಗಳ ಸ್ವೀಕಾರಕ್ಕೆ ಪೇಟಿಎಂ ಬ್ಯಾಂಕ್​ಗೆ ಆರ್​​ಬಿಐ ನಿರ್ಬಂಧ

ABOUT THE AUTHOR

...view details