ETV Bharat / state

ಮೈಸೂರು: ಭಾವಿ ಪತ್ನಿ ಕೊಂದು, ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಆರೋಪಿ ಪೊಲೀಸರಿಗೆ ಶರಣು - MURDER CASE

ವ್ಯಕ್ತಿಯೊಬ್ಬ ತನ್ನ ಭಾವಿ ಪತ್ನಿಯನ್ನು ಕೊಂದು‌ ನೇಣು ಹಾಕಿರುವ ಘಟನೆ ಹೆಚ್.ಡಿ. ಕೋಟೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ.

author img

By ETV Bharat Karnataka Team

Published : 1 hours ago

ಕೊಲೆ ಆರೋಪಿ
ಕೊಲೆ ಆರೋಪಿ (ETV Bharat)

ಮೈಸೂರು: ತನ್ನ ಜೊತೆ ಮದುವೆ ನಿಶ್ಚಯವಾಗಿದ್ದ ಯುವತಿಯನ್ನೇ ಕೊಂದು ಆರೋಪಿ ಪೊಲೀಸರಿಗೆ ಶರಣಾದ ಘಟನೆ ಹೆಚ್. ಡಿ. ಕೋಟೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ಕವಿತಾ (20) ಕೊಲೆಯಾದ ಯುವತಿ. ನಿರಂಜನ್‌ ಅಲಿಯಾಸ್‌ ಜಗ್ಗ ಕೊಲೆ ಆರೋಪಿ.

ಹತ್ಯೆಗೀಡಾದ ಕವಿತಾಳಿಗೆ ಅ. 21ಕ್ಕೆ ನಿರಂಜನ ಜೊತೆಗೆ ಮದುವೆ ನಿಗದಿಯಾಗಿತ್ತು. ಶುಕ್ರವಾರ ಕವಿತಾ ಪೋಷಕರು ಜಮೀನಿಗೆ ಹೋದಾಗ ನಿರಂಜನ ಮನೆಗೆ ಬಂದು ಆಕೆಯನ್ನು ಕೊಲೆಗೈದು ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಲು ಮನೆಯ ಮೇಲ್ಛಾವಣಿ ತೆಗೆದು ಪರಾರಿಯಾಗದ್ದ. ಈ ದೃಶ್ಯವನ್ನು ಕಂಡ ನೆರೆಹೊರೆಯವರು ತಕ್ಷಣ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕವಿತಾಳ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಪೋಷಕರು ಮನೆ ಬಂದು ನೋಡಿದಾಗ ಕವಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಆರೋಪಿ ಶುಕ್ರವಾರ ಸಂಜೆ ಕವಿತಾಳ ಮನೆಯಿಂದ ನೇರವಾಗಿ ಅಂತರಸಂತೆ ಪೊಲೀಸ್​ ಠಾಣೆಗೆ ಬಂದು, ನಡೆದ ಘಟನೆಯನ್ನು ಪೊಲೀಸರಿಗೆ ವಿವರಿಸಿ ನನಗೆ ಜನರಿಂದ ರಕ್ಷಣೆ ಕೊಡಿ ಮನವಿ ಮಾಡಿದ್ದ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಕವಿತಾಳ ತಂದೆ ಪುಟ್ಟಮಲ್ಲಪ್ಪ, ನನ್ನ ಮಗಳನ್ನು ನಿರಂಜನ್‌ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ ಎಂದು ದೂರು ನೀಡಿದ್ದಾರೆ. ನಿನ್ನೆ(ಶನಿವಾರ) ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಈ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಷ್ಣುವರ್ಧನ್‌ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, "ಈ ಪ್ರಕರಣ ಸಂಬಂಧ ಕೊಲೆಯಾದ ಕವಿತಾಳ ತಂದೆ ಪುಟ್ಟಮಲ್ಲಪ್ಪ ನೀಡಿದ ದೂರಿನ ಮೇರೆಗೆ ನಿರಂಜನ್‌ನನ್ನು ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದೇವೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು : ವಿವಾಹಿತ ಮಹಿಳಾ ಟೆಕ್ಕಿ ಶವವಾಗಿ ಪತ್ತೆ - female techie dead

ETV Bharat Logo

Copyright © 2024 Ushodaya Enterprises Pvt. Ltd., All Rights Reserved.