Top 10 Cheapest Cars In India: ಹೊಸ ಕಾರು ಖರೀದಿಸಬೇಕು ಎಂಬುದು ಬಹತೇಕ ಜನರ ಕನಸಾಗಿರುತ್ತದೆ. ಅದರಲ್ಲೂ ಮಧ್ಯಮ ವರ್ಗದ ಹೆಚ್ಚಿನ ಜನರು ಬಜೆಟ್ ಫ್ರೆಂಡ್ಲಿ ಕಾರುಗಳನ್ನು ಖರೀದಿಸಬೇಕು ಎಂದು ಬಯಸುತ್ತಾರೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಅಂತಹ ಉತ್ತಮ ಕಾರುಗಳನ್ನು ಆಯ್ಕೆ ಮಾಡುವುದು ಕೊಂಚ ಕಷ್ಟವೇ ಸರಿ. ಅದಕ್ಕಾಗಿಯೇ ಈ ಪ್ರಮುಖ ಆಟೋಮೊಬೈಲ್ ಕಂಪನಿಗಳು ಕಡಿಮೆ ಬೆಲೆಯಲ್ಲಿ ಉತ್ತಮ ಕಾರುಗಳನ್ನು ನೀಡುತ್ತಿವೆ. ಹಾಗಾದರೆ 4 ಲಕ್ಷ ರೂ. ನಿಂದ ಹಿಡಿದು 6 ಲಕ್ಷದ ವರೆಗಿನ ಬಜೆಟ್ ಫ್ರೆಂಡ್ಲಿ ಟಾಪ್ 10 ಕಾರುಗಳು ಯಾವವು ಎಂಬುದರ ಬಗ್ಗೆ ತಿಳಿಯೋಣ.
ಕಡಿಮೆ ಬೆಲೆಯ ಕಾರು ಹುಡುಕುತ್ತಿದ್ದೀರಾ?: ಹಾಗಾದರೆ ಇವೇ ನೋಡಿ ಭಾರತದ ಟಾಪ್ 10 ಕಾರುಗಳು - Cheapest Cars In India - CHEAPEST CARS IN INDIA
ಕಡಿಮೆ ಬೆಲೆಯ ಕಾರು ಖರೀದಿಸಬೇಕು ಎನ್ನುವವರಿಗೆ ಈ 10 ಕಾರುಗಳು ಉತ್ತಮ ಆಯ್ಕೆಯಾಗಲಿವೆ.
ಇವೇ ನೋಡಿ ಭಾರತದ ಟಾಪ್ 10 ಅಗ್ಗದ ಕಾರುಗಳು
Published : Mar 25, 2024, 3:17 PM IST
|Updated : Mar 27, 2024, 11:38 AM IST
ಇದನ್ನೂ ಓದಿ:ನಿಮ್ಮ ಬೈಕ್ ಕಡಿಮೆ ಮೈಲೇಜ್ ನೀಡುತ್ತಿದೆಯೇ? ಈ ಸರಳ ಉಪಾಯಗಳನ್ನು ಅನುಸರಿಸಿ - Bike Mileage Increase Tips
- Maruti Suzuki Alto 800:ಮಾರುತಿ ಸುಜುಕಿ ಭಾರತದಲ್ಲಿ ವಿಶ್ವಾಸರ್ಹತೆಯ ಬ್ರಾಂಡ್ಗಳಲ್ಲಿ ಒಂದಾಗಿದೆ. ನೀವು ಆಲ್ಟೋ 800 ಕಾರನ್ನು ಖರೀದಿಸಲು ಬಯಸಿದಲ್ಲಿ ಇದು ನಿಮ್ಮ ಬಜೆಟ್ಗೆ ಉತ್ತಮ ಆಯ್ಕೆಯಾಗಲಿದೆ. ಇದರಲ್ಲಿ 4 ಆಸನಗಳು ಇರಲಿದ್ದು, 796 ಸಿಸಿ ಎಂಜಿನ್ ಹೊಂದಿದೆ. ಇದರ ಫ್ಯೂಲ್ ಟ್ಯಾಂಕ್ ಸಾಮರ್ಥ್ಯದ ಬಗ್ಗೆ ತಿಳಿಯುವುದಾದರೆ ಪೆಟ್ರೋಲ್ ವೇರಿಯಂಟ್ 35 ಲೀಟರ್ ಇಂಧನ ಸಾಮರ್ಥ್ಯ ಹೊಂದಿದ್ದರೆ CNG (ಗ್ಯಾಸ್ ವೆರಿಯಂಟ್) 60 ಲೀಟರ್ ಸಾಮರ್ಥ್ಯ ಹೊಂದಿರಲಿದೆ. ಪ್ರತಿ ಲೀಟರ್ಗೆ 22.05 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ. 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಈ ಕಾರಿನಲ್ಲಿ ಪಾರ್ಕಿಂಗ್ ಸೆನ್ಸಾರ್, ಏರ್ ಕಂಡಿಷನರ್, ಪವರ್ ವಿಂಡೋ, ಕೀ ಲೆಸ್ ಎಂಟ್ರಿ, ಟಚ್ಸ್ಕ್ರೀನ್ ವೈಶಿಷ್ಟ್ಯಗಳು ಇರಲಿದೆ. ಆಲ್ಟೋ 800 ಆರಂಭಿಕ ಬೆಲೆ ರೂ.3.54 ಆಗಿದ್ದರೆ ಹೈ - ಎಂಡ್ ವೇರಿಯಂಟ್ ಬೆಲೆ 5.13 ಲಕ್ಷ ರೂ. ಆಗಿದೆ.
- Maruti Alto K10: ಎಂಜಿನ್: 998 cc, ಬಣ್ಣ: 7 ಗೇರ್ಬಾಕ್ಸ್: ಮ್ಯಾನುವಲ್ ಮತ್ತು ಆಟೋಮೆಟಿಕ್, ಆಸನಗಳು: 4 ರಿಂದ 5, ಫ್ಯೂಲ್ ಟೈಪ್: ಪೆಟ್ರೋಲ್ ಮತ್ತು ಸಿಎನ್ಜಿ, ಫ್ಯೂಲ್ ಸಾಮರ್ಥ್ಯ: 27 ಲೀಟರ್, ಮೈಲೇಜ್: 24.39 to 33.85 kmpl, ಬೆಲೆ: ₹4.84 ಲಕ್ಷ.
- Maruti S-Presso:ಎಂಜಿನ್: 998 cc, ಬಣ್ಣ: 7, ಗೇರ್ಬಾಕ್ಸ್: ಮ್ಯಾನುವಲ್ ಮತ್ತು ಆಟೋಮೆಟಿಕ್, ಆಸನಗಳು: 4 ರಿಂದ 5, ಫ್ಯೂಲ್ ಟೈಪ್: ಪೆಟ್ರೋಲ್ ಮತ್ತು ಸಿಎನ್ಜಿ, ಫ್ಯೂಲ್ ಸಾಮರ್ಥ್ಯ: 55 ಲೀಟರ್, ಮೈಲೇಜ್: 24.12 - 25.3 kmpl, ಬೆಲೆ: ₹ 4.26 ಲಕ್ಷ.
- Renault Kwid:ಎಂಜಿನ್: 999 cc, ಬಣ್ಣ: 7, ಗೇರ್ಬಾಕ್ಸ್: ಮ್ಯಾನುವಲ್ ಮತ್ತು ಆಟೋಮೆಟಿಕ್, ಆಸನಗಳು: 5, ಫ್ಯೂಲ್ ಟೈಪ್: ಪೆಟ್ರೋಲ್, ಫ್ಯೂಲ್ ಸಾಮರ್ಥ್ಯ: 28 ಲೀಟರ್, ಮೈಲೇಜ್: 22.3 kmpl, ಬೆಲೆ: ₹4.69 ಲಕ್ಷ.
- Maruti Cellario:ಎಂಜಿನ್: 998 cc, ಬಣ್ಣ: 7, ಗೇರ್ಬಾಕ್ಸ್: ಮ್ಯಾನುವಲ್ ಮತ್ತು ಆಟೋಮೆಟಿಕ್, ಆಸನಗಳು: 5, ಫ್ಯೂಲ್ ಟೈಪ್: ಪೆಟ್ರೋಲ್ ಮತ್ತು ಸಿಎನ್ಜಿ, ಫ್ಯೂಲ್ ಸಾಮರ್ಥ್ಯ: 32 ಲೀಟರ್ ಮೈಲೇಜ್: 24.97 - 26.68 kmpl, ಬೆಲೆ: ₹5.37 ಲಕ್ಷ.
- Maruti Wagon R:ಎಂಜಿನ್: 998 to 1197 cc, ಬಣ್ಣ: 9, ಗೇರ್ಬಾಕ್ಸ್: ಮ್ಯಾನುವಲ್ ಮತ್ತು ಆಟೋಮೆಟಿಕ್, ಆಸನಗಳು: 5, ಫ್ಯೂಲ್ ಟೈಪ್: ಪೆಟ್ರೋಲ್ ಮತ್ತು ಸಿಎನ್ಜಿ, ಫ್ಯೂಲ್ ಸಾಮರ್ಥ್ಯ: 32 ಲೀಟರ್ ಮೈಲೇಜ್: 24.97 - 26.68 kmpl, ಬೆಲೆ: ₹ 5.37 ಲಕ್ಷ.
- Tata Tiago:ಎಂಜಿನ್: 1199 cc, ಬಣ್ಣ: 6, ಗೇರ್ಬಾಕ್ಸ್: ಮ್ಯಾನುವಲ್ ಮತ್ತು ಆಟೋಮೆಟಿಕ್, ಆಸನಗಳು: 5, ಫ್ಯೂಲ್ ಟೈಪ್: ಪೆಟ್ರೋಲ್ ಮತ್ತು ಸಿಎನ್ಜಿ, ಫ್ಯೂಲ್ ಸಾಮರ್ಥ್ಯ: 32 ಲೀಟರ್, ಮೈಲೇಜ್: 19 to 28.06 kmpl, ಬೆಲೆ: ₹5.6 ಲಕ್ಷ.
- Hyundai Grand i10 Nios:ಎಂಜಿನ್: 1197 cc, ಬಣ್ಣ: 7, ಗೇರ್ಬಾಕ್ಸ್: ಮ್ಯಾನುವಲ್ ಮತ್ತು ಆಟೋಮೆಟಿಕ್, ಆಸನಗಳು: 5, ಫ್ಯೂಲ್ ಟೈಪ್: ಪೆಟ್ರೋಲ್ ಮತ್ತು ಸಿಎನ್ಜಿ, ಫ್ಯೂಲ್ ಸಾಮರ್ಥ್ಯ: 32 ಲೀಟರ್, ಮೈಲೇಜ್: 16-18 kmpl, ಬೆಲೆ: ₹5.92 ಲಕ್ಷ.
- Maruti Suzuki Ignis:ಎಂಜಿನ್: 1197 cc, ಬಣ್ಣ: 9, ಗೇರ್ಬಾಕ್ಸ್: ಮ್ಯಾನುವಲ್ ಮತ್ತು ಆಟೋಮೆಟಿಕ್, ಆಸನಗಳು: 5, ಫ್ಯೂಲ್ ಟೈಪ್: ಪೆಟ್ರೋಲ್, ಫ್ಯೂಲ್ ಸಾಮರ್ಥ್ಯ: 32 ಲೀಟರ್, ಮೈಲೇಜ್: 20.89 kmpl, ಬೆಲೆ: ₹5.84 ಲಕ್ಷ.
- Tata Punch:ಎಂಜಿನ್: 1199 cc, ಬಣ್ಣ: 7, ಗೇರ್ಬಾಕ್ಸ್: ಮ್ಯಾನುವಲ್ ಮತ್ತು ಆಟೋಮೆಟಿಕ್, ಆಸನಗಳು: 5, ಫ್ಯೂಲ್ ಟೈಪ್: ಪೆಟ್ರೋಲ್, ಫ್ಯೂಲ್ ಸಾಮರ್ಥ್ಯ: 32 ಲೀಟರ್, ಮೈಲೇಜ್: 18.8 - 20.09 kmpl, ಬೆಲೆ: ₹ 6.13 ಲಕ್ಷ
ಇದನ್ನೂ ಓದಿ:ನಿಮ್ಮ ಕಾರಿಗೆ ಹೊಸ ಟೈರ್ ಖರೀದಿಸಬೇಕೇ? ಸೂಕ್ತ ಆಯ್ಕೆ ಹೇಗೆ? ಈ ವಿಷಯಗಳನ್ನು ಮರೆಯಬೇಡಿ - Right Tyres For Cars
Last Updated : Mar 27, 2024, 11:38 AM IST