ಬೆಂಗಳೂರು:ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗಿಯೇ ಸಾಗುತ್ತಿದೆ. ನಿನ್ನೆಗಿಂತ ಇಂದು ಪ್ರತಿಗ್ರಾಂ ಆಭರಣ ಚಿನ್ನದ ಮೇಲೆ 70 ರೂ ಏರಿಕೆ ಕಂಡಿದೆ. ಇದೇ 10 ಗ್ರಾಂ ಬರೋಬ್ಬರಿ 700 ರೂ ಏರಿಕೆ ಕಂಡಿದೆ. ಅದೇ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಒಂದು ಗ್ರಾಂಗೆ 76 ರೂ ಹೆಚ್ಚಳವಾಗಿದ್ದರೆ, ಅದೇ ಕ್ರಮದಲ್ಲಿ 10 ಗ್ರಾಂಗೆ ಸುಮಾರು 760 ರೂಪಾಯಿ ಏರಿಕೆ ದಾಖಲಿಸಿದೆ.
ಇಂದಿನ ಚಿಲ್ಲರೆ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ತಲಾ ಗ್ರಾಂಗೆ ₹ 7,095 ಮತ್ತು ಅದೇ ರೀತಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ ₹ 7,740 ಆಗಿದೆ.
ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತಿರುತ್ತದೆ ಎಂಬುದು ಗಮನದಲ್ಲಿಡಬೇಕಿದೆ.
ಸ್ಪಾಟ್ ಚಿನ್ನದ ಬೆಲೆ?:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ದರಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಗುರುವಾರ ಒಂದು ಔನ್ಸ್ ಚಿನ್ನದ ಬೆಲೆ 2614 ಡಾಲರ್ ಇತ್ತು ಆದರೆ, ಶುಕ್ರವಾರದ ವೇಳೆಗೆ 31 ಡಾಲರ್ ಏರಿಕೆಯಾಗಿ 2645 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 31.30 ಡಾಲರ್ ತಲುಪಿದೆ.
ಕ್ರಿಪ್ಟೋಕರೆನ್ಸಿ : ಕ್ರಿಪ್ಟೋಕರೆನ್ಸಿ ವ್ಯಾಪಾರವು ಶುಕ್ರವಾರ ಭಾರೀ ನಷ್ಟದೊಂದಿಗೆ ಮುಂದುವರಿಯುತ್ತಿದೆ. ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಪ್ರಸ್ತುತ ಮೌಲ್ಯಗಳು ಹೀಗಿವೆ?
ಕ್ರಿಪ್ಟೋ ಕರೆನ್ಸಿಯ ಪ್ರಸ್ತುತ ಬೆಲೆ
ಬಿಟ್ ಕಾಯಿನ್: ರೂ.43,15,498
ಎಥೆರಿಯಂ: ರೂ.1,55,500