ಕರ್ನಾಟಕ

karnataka

ETV Bharat / business

ಬಜಾಜ್ 'ಫ್ರೀಡಂ 125' ಸಿಎನ್​ಜಿ ಬೈಕ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ? - CNG motorcycle - CNG MOTORCYCLE

ಬಜಾಜ್ ಆಟೋ ಭಾರತದ ಮಾರುಕಟ್ಟೆಗೆ ಸಿಎನ್​ಜಿ ಬೈಕ್ ಅನ್ನು ಬಿಡುಗಡೆ ಮಾಡಿದೆ.

ಬಜಾಜ್ 'ಫ್ರೀಡಂ 125' ಸಿಎನ್​ಜಿ ಬೈಕ್
ಬಜಾಜ್ 'ಫ್ರೀಡಂ 125' ಸಿಎನ್​ಜಿ ಬೈಕ್ (IANS)

By ETV Bharat Karnataka Team

Published : Jul 5, 2024, 6:24 PM IST

ನವದೆಹಲಿ: ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ಶುಕ್ರವಾರ ವಿಶ್ವದ ಮೊದಲ ಸಿಎನ್ ಜಿ ಮೋಟಾರ್ ಸೈಕಲ್ ಫ್ರೀಡಂ 125 ಅನ್ನು ಮೂರು ಮಾಡೆಲ್​ಗಳಲ್ಲಿ ಬಿಡುಗಡೆ ಮಾಡಿದೆ. 95,000 ರೂ. ಎಕ್ಸ್ ಶೋರೂಂ ಬೆಲೆಯಿಂದ ಪ್ರಾರಂಭವಾಗುವ ಈ ಬೈಕ್ 125 ಸಿಸಿ ಎಂಜಿನ್ ಹೊಂದಿದೆ. ಪೆಟ್ರೋಲ್ ಮತ್ತು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಹೀಗೆ ಯಾವುದು ಬೇಕೋ ಆ ಮೋಡ್​ಗೆ ಬೈಕ್ ಅನ್ನು ಸ್ವಿಚ್ ಮಾಡಬಹುದು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಉಪಸ್ಥಿತಿಯಲ್ಲಿ ಬಜಾಜ್ ಆಟೋದ ಎಂಡಿ ರಾಜೀವ್ ಬಜಾಜ್ ಅವರು ಸಿಎನ್ ಜಿ ಮೋಟಾರ್ ಸೈಕಲ್ ಅನ್ನು ಪುಣೆಯಲ್ಲಿ ಅನಾವರಣಗೊಳಿಸಿದರು.

ವಾಹನದಲ್ಲಿ ಸಿಎನ್ ಜಿ ಟ್ಯಾಂಕ್ ಅನ್ನು ಸೀಟಿನ ಕೆಳಗೆ ಅಳವಡಿಸಲಾಗಿದ್ದು, ಇದು ಎರಡು ಕೆಜಿ ಸಿಎನ್​ಜಿ ಅನಿಲವನ್ನು ತುಂಬಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಎರಡು ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಕೂಡ ವಾಹನದಲ್ಲಿದೆ. ಒಂದು ಬಾರಿಗೆ ಈ ಎರಡೂ ಟ್ಯಾಂಕ್​ಗಳನ್ನು ತುಂಬಿಸಿ ಗರಿಷ್ಠ 330 ಕಿಲೊಮೀಟರ್ ಚಲಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಬಜಾಜ್ ಫ್ರೀಡಂ ಸಿಎನ್ ಜಿ ಪ್ರತಿ ಕೆಜಿ ಸಿಎನ್​ಜಿಗೆ 102 ಕಿ.ಮೀ ಮೈಲೇಜ್ ನೀಡುತ್ತದೆ. ಅಂದರೆ ಒಂದು ಬಾರಿ ಸಿಎನ್​ಜಿ ಟ್ಯಾಂಕ್ ತುಂಬಿಸಿದರೆ ಸುಮಾರು 200 ಕಿ.ಮೀ ವರೆಗೆ ಚಲಿಸಬಹುದು. ಇದರ ಎಂಜಿನ್ 9.5 ಬಿ ಹೆಚ್ ಪಿ ಪವರ್ ಹಾಗೂ 9.7 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ.

"ಬಜಾಜ್ ಫ್ರೀಡಂನೊಂದಿಗೆ ಸವಾರರು ತಮ್ಮ ಪ್ರಯಾಣದ ವೆಚ್ಚದಲ್ಲಿ ಶೇಕಡಾ 50 ರಷ್ಟು ಕಡಿಮೆ ಮಾಡಬಹುದು. ಇದರ ಲಾಂಗ್-ಇನ್-ಕ್ಲಾಸ್ ಸೀಟ್ ಮತ್ತು ಮೊನೊ-ಲಿಂಕ್ಡ್ ಟೈಪ್ ಸಸ್ಪೆನ್ಷನ್ ಉತ್ತಮ ಆರಾಮವನ್ನು ನೀಡುತ್ತದೆ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯೂ ಇದರಲ್ಲಿದೆ" ಎಂದು ಬಜಾಜ್ ಹೇಳಿದರು.

ಕಂಪ್ರೆಸ್ಡ್​ ನ್ಯಾಚುರಲ್ ಗ್ಯಾಸ್ (ಸಿಎನ್ ಜಿ) ವಾಹನಗಳು ಪೆಟ್ರೋಲ್ ಚಾಲಿತ ವಾಹನಗಳಂತೆ ಸ್ಪಾರ್ಕ್-ಪ್ರಜ್ವಲಿತ ಆಂತರಿಕ ದಹನ ಎಂಜಿನ್ ಹೊಂದಿರುತ್ತವೆ. ಇದರ ಎಂಜಿನ್ ಪೆಟ್ರೋಲ್ ಎಂಜಿನ್ ನಂತೆಯೇ ಕಾರ್ಯನಿರ್ವಹಿಸುತ್ತದೆ. ನೈಸರ್ಗಿಕ ಅನಿಲವನ್ನು ಇಂಧನ ಟ್ಯಾಂಕ್ ಅಥವಾ ಸಿಲಿಂಡರ್​ನಲ್ಲಿ ತುಂಬಿಸಲಾಗುತ್ತದೆ. ಸಿಎನ್​ಜಿ ವಾಹನಗಳು ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳಿಗಿಂತ ಕಡಿಮೆ ಮಾಲಿನ್ಯಕಾರಕವಾಗಿವೆ.

ಇದನ್ನೂ ಓದಿ : 37.5 ಕೋಟಿ ಗ್ರಾಹಕರ ಡೇಟಾ ಸೋರಿಕೆ ಆರೋಪ ಅಲ್ಲಗಳೆದ ಏರ್​ಟೆಲ್ - Airtel Denies Data Breach

For All Latest Updates

ABOUT THE AUTHOR

...view details