ನವದೆಹಲಿ: ಭೌಗೋಳಿಕ ರಾಜಕೀಯ ಘಟನೆಗಳ ನಡುವೆ ಚಿನ್ನದ ಬೆಲೆ ಗಗನಮುಖಿಯಾಗುತ್ತಲೇ ಇದೆ. ಈ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ಸೆಪ್ಟೆಂಬರ್ 30ರ ವರೆಗೆ 854.73 ಮೆಟ್ರಿಕ್ ಟನ್ ಚಿನ್ನವನ್ನು ಹೊಂದಿದ್ದು, ಇದರಲ್ಲಿ 510 ಮೆಟ್ರಿಕ್ ಟನ್ ದೇಶಿಯವಾಗಿದೆ.
ಈ ವರ್ಷ 510.46 ಮೆಟ್ರಿಕ್ ಟನ್ ಚಿನ್ನ ಸಂಗ್ರಹವಾಗಿದ್ದು, ಏಪ್ರಿಲ್ ಮತ್ತು ಸೆಪ್ಟೆಂಬರ್ ಮಧ್ಯದಲ್ಲಿ ದೇಶಿಯವಾಗಿ ಚಿನ್ನ 102 ಟನ್ ಹೆಚ್ಚಾಗಿದ್ದು, ಮಾರ್ಚ್ ಅಂತ್ಯದಲ್ಲಿ 408 ಮೆಟ್ರಿಕ್ ಟನ್ ಸಂಗ್ರಹವಾಗಿತ್ತು.
324.01 ಮೆಟ್ರಿಕ್ ಟನ್ ಚಿನ್ನವನ್ನು ಸುರಕ್ಷತೆ ದೃಷ್ಟಿಯಿಂದ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಅಫ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ (ಬಿಐಎಸ್)ನಲ್ಲಿ ಇರಿಸಲಾಗಿದೆ. 20.26 ಮೆಟ್ರಿಕ್ ಟನ್ ಚಿನ್ನವನ್ನು ಠೇವಣಿ ರೂಪದಲ್ಲಿ ಇರಲಿಸಲಾಗಿದೆ ಎಂದು ಆರ್ಬಿಐ ಪ್ರಕಾರ, ವಿದೇಶಿ ವಿನಿಮಯ ಮೀಸಲು ನಿರ್ವಹಣೆ ಏಪ್ರಿಲ್- ಸೆಪ್ಟೆಂಬರ್ 2024 ಅರ್ಥವರ್ಷದ ವರದಿ ತಿಳಿಸಿದೆ.
ಮೌಲ್ಯದ ಪರಿಭಾಷೆಯಲ್ಲಿ (ಅಮೆರಿಕನ್ ಡಾಲರ್) ಒಟ್ಟು ವಿದೇಶಿ ವಿನಿಮಯ ಮೀಸಲುಗಳಲ್ಲಿ ಚಿನ್ನದ ಪಾಲು ಮಾರ್ಚ್ 2024 ರ ಅಂತ್ಯದ ವೇಳೆಗೆ ಶೇ 8.15 ರಿಂದ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇ 9.32 ಏರಿಕೆ ಕಂಡಿದೆ.