ತಿರುಪತಿ, ಆಂಧ್ರಪ್ರದೇಶ: ಹಳೆಯ ಟಿಕೆಟ್ ನೀತಿಗಳನ್ನು ನಿಲ್ಲಿಸಿ 3 ತಿಂಗಳ ಮೊದಲೇ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುವ ಮೂಲಕ ಆಂಧ್ರಪ್ರದೇಶದ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರವನ್ನು ಭಕ್ತರು ವಿರೋಧಿಸಿದ್ದರು. ಸದ್ಯ ಎನ್ಡಿಎ ಸಮ್ಮಿಶ್ರ ಸರ್ಕಾರದಲ್ಲಿ ಹೊಸದಾಗಿ ರಚನೆಯಾದ ಟಿಟಿಡಿ ಮಂಡಳಿಗೆ ವೈಎಸ್‌ಆರ್‌ಸಿಪಿ ಸರ್ಕಾರ ಟಿಕೆಟ್ ನೀತಿ ಬದಲಿಗೆ ಹಿಂದಿನ ಟಿಕೆಟ್ ನೀತಿಯನ್ನು ಜಾರಿಗೆ ತರಬೇಕು ಎಂದು ಭಕ್ತರು ಮನವಿ ಮಾಡುತ್ತಿದ್ದಾರೆ.
ವಯೋವೃದ್ಧರು, ವಿಶೇಷಚೇತನರು ಹಾಗೂ ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ತಿರುಮಲದಲ್ಲಿರುವ ಮ್ಯೂಸಿಯಂ ಮುಂಭಾಗದ ಕೌಂಟರ್‌ಗಳಲ್ಲಿ 1,500 ದರ್ಶನ ಟಿಕೆಟ್‌ಗಳನ್ನು ವಿತರಿಸಲಾಗುತ್ತಿತ್ತು. ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ, ಈ ನೀತಿಯನ್ನು ಕೋವಿಡ್ ಹೆಸರಿನಲ್ಲಿ ರದ್ದುಗೊಳಿಸಲಾಯಿತು. ದಿನಕ್ಕೆ ಒಂದು ಸಾವಿರ ಉಚಿತ ದರ್ಶನ ಟಿಕೆಟ್‌ಗಳನ್ನು 3 ತಿಂಗಳ ಮುಂಚಿತವಾಗಿ ಆನ್‌ಲೈನ್‌ನಲ್ಲಿ ನೀಡಲು ನಿರ್ಧರಿಸಲಾಗಿತ್ತು.
ತಮ್ಮ ಇಷ್ಟಾರ್ಥಗಳು ಈಡೇರಿದ ಮೇಲೆ ಭಕ್ತರು ವೆಂಕಟೇಶ್ವರ ಸ್ವಾಮಿಗೆ ಮುಡಿ ಅರ್ಪಿಸುತ್ತಾರೆ. ಇವರಿಗೆ ಸಿಆರ್ಒ ಕಚೇರಿಯಲ್ಲಿ ದಿನಕ್ಕೆ 750 ಟಿಕೆಟ್ ನೀಡಲಾಗುತ್ತಿತ್ತು. ಕೋವಿಡ್ ನಂತರ ಈ ಟಿಕೆಟ್‌ಗಳನ್ನು 3 ತಿಂಗಳ ಮುಂಚಿತವಾಗಿ ಆನ್‌ಲೈನ್‌ನಲ್ಲಿ ನೀಡಲು ಪ್ರಾರಂಭಿಸಿದ್ದರು. ಕೆಲವರು ಆನ್‌ಲೈನ್‌ನಲ್ಲಿ ಟಿಕೆಟ್ ಪಡೆದಿದ್ದರೂ ದೇವರ ದರ್ಶನಕ್ಕೆ ಬರುತ್ತಿರಲಿಲ್ಲ. ಭೂಮನ ಕರುಣಾಕರ್ ರೆಡ್ಡಿ ಟಿಟಿಡಿ ಅಧ್ಯಕ್ಷರಾದ ನಂತರ ಪ್ರತಿ ಶನಿವಾರ ಪ್ರದಕ್ಷಿಣೆಗೆ 250 ಟಿಕೆಟ್ ನೀಡುವುದಾಗಿ ಹೇಳಿ ಅವುಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದರು. ಸದ್ಯ ಈ ವಿಚಾರ ಸಂಬಂಧ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.