ಕರ್ನಾಟಕ

karnataka

ETV Bharat / bharat

ಮನೆಗೆ ನುಗ್ಗಿದ ಕೋತಿಗಳು: ಜಾಣ್ಮೆ ತೋರಿ ತಂಗಿಯನ್ನು ರಕ್ಷಿಸಿದ ಅಕ್ಕ - Alexa device

ಅಕ್ಕ ನಿಕಿತಾ ಬುದ್ದಿವಂತಿಕೆ ತೋರಿಸಿ ತಂಗಿಯ ಪ್ರಾಣ ಉಳಿಸಿದ್ದಾಳೆ. ಬಾಲಕಿ ನಿಕಿತಾ, ಅಲೆಕ್ಸಾ ಸಾಧನಕ್ಕೆ ನಾಯಿಯ ಶಬ್ದವನ್ನು ಮಾಡಲು ತಿಳಿಸಿದ್ದಳು. ಅಲೆಕ್ಸಾ ಸಾಧನವು ನಾಯಿಯ ಶಬ್ದವನ್ನು ಮಾಡಿದ ತಕ್ಷಣವೇ, ಈ ಶಬ್ದವನ್ನು ಕೇಳಿದ ಮಂಗಗಳು ಸ್ಥಳದಿಂದ ಓಡಿಹೋಗಿವೆ. ಮನೆಯಲ್ಲಿ ನಾಯಿಗಳಿದ್ದು, ಅವುಗಳ ಮೇಲೆ ದಾಳಿ ಮಾಡಬಹುದು ಎಂದು ತಿಳಿದ ಕೋತಿಗಳು ಗುಂಪು ಅಲ್ಲಿಂದ ಓಡಿ ಹೋಗಿವೆ.

ALEXA Uttar Pradesh ALEXA DEVICE
ಅಲೆಕ್ಸಾ, ನಾಯಿಗಳ ಸದ್ದು ಮಾಡಿದ್ದಕ್ಕೆ ಉಳಿಯಿತು ಸಹೋದರಿಯ ಉಳಿದ ಜೀವ; ಬುದ್ಧಿವಂತಿಕೆ ಪ್ರದರ್ಶಿಸಿದ ಬಾಲಕಿ ನಿಕಿತಾ

By ETV Bharat Karnataka Team

Published : Apr 6, 2024, 11:58 AM IST

Updated : Apr 6, 2024, 3:11 PM IST

ಲಖನೌ (ಉತ್ತರ ಪ್ರದೇಶ): ತಂತ್ರಜ್ಞಾನದ ಯುಗದಲ್ಲಿ ಮಕ್ಕಳೂ ಬಹಳ ಮುಂದುವರೆದಿದ್ದಾರೆ. ಮೊಬೈಲ್ ಮತ್ತು ಇಂಟರ್‌ನೆಟ್ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎನ್ನುವುದು ಹಿರಿಯರ ಮಾತು. ಹಾಗೂ ಎಲೆಕ್ಟ್ರಿಕ್​ ಸಾಧನಗಳಲ್ಲಿ ಅಲ್ಟ್ರಾ ವೈಲಟ್​​​​​​​​ ತರಂಗಗಳು ಮಕ್ಕಳ ಮೇಲೆ ಪ್ರಭಾವ ಬೀರುವ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ಸಹ ಅವುಗಳಿಂದ ದೂರ ಇರುವಂತೆ ಸಲಹೆ ನೀಡುತ್ತಾರೆ.

ಇದು ಇಂದಿನ ಮಕ್ಕಳು ಅಂತರ್ಜಾಲದ ಯುಗದಲ್ಲಿ ಪ್ರತಿಕೂಲ ಸಂದರ್ಭಗಳಲ್ಲಿ ಸುಧಾರಿತ ಮತ್ತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಅಪಾಯಕ್ಕೆ ತಮ್ಮ ಕುಟುಂಬದ ಸದಸ್ಯರ ಜೀವ ಉಳಿಸಲು ಬಾಲಕಿಯೊಬ್ಬಳು ತಂತ್ರಜ್ಞಾನವನ್ನು ಬಳಸಿಕೊಂಡಿರುವ ಅಪರೂಪದ ಘಟನೆ ಲಖನೌದಲ್ಲಿ ನಡೆದಿದೆ.

ಬುದ್ಧಿವಂತಿಕೆ ಪ್ರದರ್ಶಿಸಿದ ಬಾಲಕಿಯ ಕಾರ್ಯಕ್ಕೆ ಮೆಚ್ಚುಗೆ: ಉತ್ತರ ಪ್ರದೇಶದ ಬಸ್ತಿಯಲ್ಲಿ ಕುಟುಂಬಯೊಂದು ಆತಂಕಕ್ಕೆ ಒಳಗಾಗಿತ್ತು. ಇಲ್ಲಿನ ಮನೆಯೊಂದಕ್ಕೆ ಮಂಗಗಳ ಗುಂಪು ನುಗ್ಗಿತ್ತು. ಮಂಗಗಳ ಗುಂಪು ಮನೆಗೆ ಪ್ರವೇಶಿಸಿದಾಗ, ಅಲ್ಲಿ ಮುಗ್ಧ ಹುಡುಗಿಯೊಬ್ಬಳು ಆಟವಾಡುತ್ತಿದ್ದಳು. ಈ ಪರಿಸ್ಥಿತಿಯಲ್ಲಿ ಅವರ ಅಕ್ಕ, 10 ರಿಂದ 12 ವಯಸ್ಸಿನ ನಿಕಿತಾ ಕೇವಲ ಎಲೆಕ್ಟ್ರಾನಿಕ್ ಸಾಧನದ ಸಹಾಯದಿಂದ ತನ್ನ ಜಾಣ್ಮೆ ಉಪಯೋಗಿಸಿ ತಂಗಿಯನ್ನು ಮಂಗಗಳ ಗುಂಪಿನಿಂದ ರಕ್ಷಣೆ ಮಾಡಿದ್ದಾಳೆ.

ಅಲೆಕ್ಸಾ ಸಾಧನದಿಂದ ಸಹೋದರಿಯ ಜೀವ ಉಳಿಸಿದ ಅಕ್ಕ: ಅಲೆಕ್ಸಾ ಸಾಧನದ ಸಹಾಯದಿಂದ ಅಕ್ಕ ತನ್ನ ತಂಗಿಯ ಜೀವ ಉಳಿಸಿದ್ದಾಳೆ. ಕ್ರೂರ ಮಂಗಗಳು ಮನೆಗೆ ಪ್ರವೇಶಿಸಿದಾಗ, ಅವು ವಸ್ತುಗಳನ್ನು ಎಲ್ಲೆಡೆ ಎಸೆಯಲು ಪ್ರಾರಂಭಿಸಿದ್ದವು. ನಿಕಿತಾ ಅವರ ತಂಗಿ ಕೂಡ ಕೋತಿಗಳ ಗುಂಪಿನಲ್ಲಿ ಸಿಲುಕಿಕೊಂಡು ಸಂಕಷ್ಟ ಎದುರಿಸುತ್ತಿದ್ದಳು. ಅಂತಹ ಪರಿಸ್ಥಿತಿಯಲ್ಲಿ ಮಂಗಗಳು ಬಾಲಕಿಗೆ ಹಾನಿ ಮಾಡುವ ಎಲ್ಲ ಸಾಧ್ಯತೆಗಳಿದ್ದವು. ದಾಳಿ ಮಾಡಿದರೆ ಪ್ರಾಣ ಕಳೆದುಕೊಳ್ಳುವ ಆತಂಕವೂ ಇತ್ತು.

ಇಂತಹ ಪರಿಸ್ಥಿತಿಯಲ್ಲಿ ಅಕ್ಕ ನಿಕಿತಾ ಬುದ್ಧಿವಂತಿಕೆ ಪ್ರದರ್ಶಿಸಿ ತಂಗಿಯ ಪ್ರಾಣ ಉಳಿಸಿದ್ದಾಳೆ. ನಿಕಿತಾ, ಅಲೆಕ್ಸಾ ಸಾಧನಕ್ಕೆ ನಾಯಿಯ ಶಬ್ದವನ್ನು ಮಾಡಲು ಆಜ್ಞೆ ನೀಡಿದ್ದಾಳೆ. ಅಲೆಕ್ಸಾ ಸಾಧನವು ನಿಕಿತಾಳ ಆಜ್ಞೆಯನ್ನು ಅನುಸರಿಸಿ ನಾಯಿಯ ಶಬ್ದವನ್ನು ಮಾಡಿದೆ. ಈ ಶಬ್ದವನ್ನು ಕೇಳಿದ ಮಂಗಗಳು ತಕ್ಷಣವೇ ಅಲ್ಲಿಂದ ಓಡಿಹೋದವು. ಮನೆಯಲ್ಲಿ ನಾಯಿಗಳಿದ್ದು ಅವುಗಳು ನಮ್ಮ ಮೇಲೆ ದಾಳಿ ಮಾಡಬಹುದೆಂದು ಕೋತಿಗಳ ಗುಂಪು ಭಾವಿಸಿದ್ದರಿಂದ ಇಡೀ ಗುಂಪು ಅಲ್ಲಿಂದ ಓಡಿ ಹೋಗಿದೆ. ಹೀಗಾಗಿ ಆಟವಾಡುತ್ತಿದ್ದ ಪುಟ್ಟ ಕಂದಮ್ಮ ಮುಂದೆ ಎದುರಾಗಬಹುದಿದ್ದ ಅಪಾಯದಿಂದ ಪಾರಾಗಿದೆ.

ಇದನ್ನೂ ಓದಿ:ಅಪರೂಪದ ಕ್ಯಾನ್ಸರ್​ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ; ರೋಗಿ ಜೀವ ಉಳಿಸಿದ ಕೆ ಆರ್ ಆಸ್ಪತ್ರೆ ವೈದ್ಯರು

Last Updated : Apr 6, 2024, 3:11 PM IST

For All Latest Updates

ABOUT THE AUTHOR

...view details