ಆಗ್ರಾ, ಉತ್ತರಪ್ರದೇಶ: ಕಾಶಿಯ ಗಂಗಾ ಆರತಿ ಮಾದರಿಯಲ್ಲಿಯೇ ಇದೀಗ ಯಮುನಾಗೆ ಮಹಾ ಆರತಿ ಸಾಗಿದೆ. ಬೆಲಂಗಂಜ್ನ ಯಮುನಾ ನದಿ ತಟದಲ್ಲಿ ಈ ಆರತಿ ಸಾಗುತ್ತಿದೆ. ಇದಕ್ಕಾಗಿ ನದಿ ತೀರದಲ್ಲಿ ನೂರಾರೂ ಜ್ಯೋತಿಗಳನ್ನು ಬೆಳಗಿಸಲಾಗಿದೆ. ಕಾಶಿಯಿಂದ ಬಂದ ಪಂಡಿತರು ಮಂತ್ರಗಳ ಘೋಷಣೆಯೊಂದಿಗೆ ಆರತಿ ಮಾಡಲಾಗಿದೆ. ಈ ಅದ್ಬುತ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ಆಗ್ರಾದಲ್ಲಿ ಕಾಶಿ ಮತ್ತು ಹರಿದ್ವಾರ ಮಾದರಿಯಲ್ಲಿ ಪ್ರತಿನಿತ್ಯ ಸಂಜೆ 6 ರಿಂದ 8.30ಕ್ಕೆ ಈ ಯಮುನಾ ಆರತಿ ನಡೆಯಲಿದೆ.
ವಿಶ್ವವಿಖ್ಯಾತ ತಾಜ್ಮಹಲ್ ನಗರವಾದ ಆಗ್ರಾದಲ್ಲಿ ಅಂತಾರಾಷ್ಟ್ರೀಯ ತಾಜ್ ಮಹೋತ್ಸವ ಸಾಗುತ್ತಿದೆ. ನಿತ್ಯ ಸಾವಿರಾರು ಜನರು ಶಿಲ್ಪಗ್ರಾಮ್, ಸುರ್ ಸದಮ್ಗೆ ಆಗಮಿಸುತ್ತಿದ್ದಾರೆ. ಇದರ ಜೊತೆಗೆ ಬೆಲಂಗಂಜ್ನಲ್ಲಿ ನಡೆಯುತ್ತಿರುವ ಈ ಯಮುನಾ ಆರತಿ ನೋಡಲು ಸೇರುತ್ತಿದ್ದಾರೆ.
ಎರಡನೇ ವರ್ಷದ ತಾಜ್ ಮಹೋತ್ಸವ ಫೆ. 18 ರಿಂದ ಆರಂಭವಾಗಿದ್ದು, ಆಗ್ರಾ ಮೇಯರ್ ಹೇಮಲತಾ ದಿವಾಕರ್ ಕುಶ್ವಹ ಯಮುನಾ ಮಹಾ ಆರತಿಯನ್ನು ವೇದ - ಮಂತ್ರಗಳ ಪಠಣೆಯೊಂದಿಗೆ ಪ್ರಾರಂಭಿಸಿದ್ದಾರೆ.
ಮಹಾ ಆರತಿ ಜೊತೆಗೆ ಭಜನೆ: ಈ ಕುರಿತು ಮಾಹಿತಿ ನೀಡಿದ ಮಹಂತ್ ಜುಗಲ್ ಕಿಶೋರ್ ಶ್ರೋತ್ರಿಯ, 2024ರಲ್ಲಿ ಮೊದಲ ಬಾರಿಗೆ ಯಮುನಾ ದಡದಲ್ಲಿ ಮಹಾ ಆರತಿಯನ್ನು ಪಾಲಿಕೆ ವತಿಯಿಂದ ಪ್ರಾರಂಭಿಸಲಾಗಿತ್ತು. ಎರಡನೇ ಬಾರಿಗೆ ಯಮುನಾ ಮಹಾ ಆರತಿಯನ್ನು ಆಯೋಜಿಸಲಾಗಿದ್ದು, ಇದು ಕಾಶಿಯಲ್ಲಿನ ಮಹಾ ಆರತಿಯನ್ನೇ ನೋಡಿದಂತೆ ಭಾಸವಾಗುತ್ತದೆ.