ಹೈದರಾಬಾದ್: ಆಹಾರದ ವಿಷಯಕ್ಕೆ ಬಂದರೆ ಮನುಷ್ಯ ಮೂಲತಃ ಮಿಶ್ರಹಾರಿ. ಮನುಷ್ಯರು ಸಸ್ಯಾಹಾರ ಮತ್ತು ಮಾಂಸಾಹಾರಗಳೆರಡನ್ನು ರೂಢಿಸಿಕೊಂಡಿದ್ದಾರೆ. ಆದರೆ ವಿವಿಧ ಕಾರಣಗಳಿಂದಾಗಿ ಬಹಳಷ್ಟು ಮಂದಿ ಸಸ್ಯಾಹಾರಿಗಳಾಗಿದ್ದಾರೆ. ಹೀಗಾಗಿ ಪ್ರತಿ ವರ್ಷ ಅಕ್ಟೋಬರ್ 1 ಅನ್ನು ವಿಶ್ವ ಸಸ್ಯಾಹಾರಿಗಳ ದಿನವೆಂದು ಆಚರಿಸಲಾಗುತ್ತದೆ.
ಈ ದಿನ ಮಹತ್ವ:ವಿಶ್ವ ಸಸ್ಯಾಹಾರಿ ದಿನವು ಪ್ರತ್ಯೇಕವಾಗಿ ಸಸ್ಯ ಆಧಾರಿತ ಆಹಾರವನ್ನು ಅಳವಡಿಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸುವುದಾಗಿದೆ.
ಈ ದಿನದ ಇತಿಹಾಸ:ಉತ್ತರ ಅಮೆರಿಕನ್ ವೆಜಿಟೇರಿಯನ್ ಸೊಸೈಟಿ (NAVS) ಅಕ್ಟೋಬರ್ 1, 1977 ರಂದು ವಿಶ್ವ ಸಸ್ಯಾಹಾರಿ ದಿನವನ್ನು ಪ್ರಾರಂಭಿಸಿತು. 1978 ರಲ್ಲಿ ಇಂಟರ್ನ್ಯಾಷನಲ್ ವೆಜಿಟೇರಿಯನ್ ಯೂನಿಯನ್ ಇದನ್ನು ಅನುಮೋದಿಸಿತು.
ಎಷ್ಟು ಬಗೆಯ ಸಸ್ಯಾಹಾರಗಳು?( Vegetarians):
ಲ್ಯಾಕ್ಟೋ-ಓವೊ ಸಸ್ಯಾಹಾರಿಗಳು: ಇವರು ಮಾಂಸವನ್ನು ತಿನ್ನುವುದಿಲ್ಲ ಆದರೆ ಮೊಟ್ಟೆ ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸುತ್ತಾರೆ.
ಸಸ್ಯಾಹಾರಿ (ವೇಗನ್): ಇವರು ಮಾಂಸ ಸೇರಿದಂತೆ ಯಾವುದೇ ಪ್ರಾಣಿಗಳಿಂದ ಬರುವ ಯಾವುದೇ ಉತ್ಪನ್ನಗಳನ್ನು ತಿನ್ನುವುದಿಲ್ಲ.
ರಾ ವೇಗನ್:ಇವರು 115 ಡಿಗ್ರಿ ಎಫ್ ಗಿಂತ ಹೆಚ್ಚು ಬೇಯಿಸಿದ ಆಹಾರವನ್ನು ಸೇವಿಸುವುದಿಲ್ಲ.
ಮ್ಯಾಕ್ರೋಬಯೋಟಿಕ್: ಇವರು ಸಂಸ್ಕರಿಸದ ಸಸ್ಯಾಹಾರಿ ಆಹಾರಗಳನ್ನು ಹಾಗೂ ಧಾನ್ಯಗಳು ಮತ್ತು ಅಪರೂಪಕ್ಕೆ ಮೀನನ್ನು ಮಾತ್ರ ತಿನ್ನುತ್ತಾರೆ.
ಪೆಸ್ಕಟೇರಿಯನ್: ಅವರು ತಿನ್ನುವ ಏಕೈಕ ಮಾಂಸಾಹಾರವೆಂದರೆ ಅದು ಮೀನು
ಫ್ಲೆಕ್ಸಿಟೇರಿಯನ್: ಹೆಚ್ಚಾಗಿ ಸಸ್ಯಾಹಾರಿ ಆಹಾರವನ್ನು ಸೇವಿಸುತ್ತಾರೆ. ಆದರೆ ಕೆಲವೊಮ್ಮೆ ಮಾಂಸವನ್ನು ತಿನ್ನುತ್ತಾರೆ.
ಈ ದಿನವನ್ನು ಹೀಗೆ ಆಚರಿ:
- ಈ ದಿನ ಸಸ್ಯಾಹಾರಿ ಊಟವನ್ನು ಸೇವಿಸಿ
- ವಿವಿಧ ರೀತಿಯ ಸಸ್ಯಾಹಾರಿ ಆಹಾರ ಕ್ರಮಗಳು ಮತ್ತು ಸಸ್ಯ ಆಧಾರಿತ ಆಹಾರವನ್ನು ಸೇವಿಸುವುದರಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ
- ನಿಮ್ಮ ಕುಟುಂಬಸ್ಥರಿಗೆ ಸಸ್ಯಾಹಾರಿ ಊಟವನ್ನು ಉಣಬಡಿಸಿ ಅಥವಾ ಸಸ್ಯಾಹಾರಿ ಔತಣಕೂಟವನ್ನು ಆಯೋಜಿಸಿ
- #WorldVegetarianDay ಜೊತೆಗೆ ನಿಮ್ಮ ಸಸ್ಯಾಹಾರಿ ಪಾಕವಿಧಾನಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ
- ಸಸ್ಯಾಹಾರಿ ಸಾಕ್ಷ್ಯಚಿತ್ರವನ್ನು ವೀಕ್ಷಿಸಿ. ಕೆಲವು ಪ್ರಸಿದ್ಧ ಸಾಕ್ಷ್ಯಚಿತ್ರಗಳು ಇಲ್ಲಿವೆ: Cowspiracy: The Sustainability Secret (2014), Earthlings (2005), Forks Over Knives (2011), Game Changers (2018)
ಆರೋಗ್ಯ ಪ್ರಯೋಜನೆಗಳು:
ತೂಕ ನಷ್ಟ: ಹಣ್ಣುಗಳು ಮತ್ತು ತರಕಾರಿಗಳು, ದ್ವಿದಳ ಧಾನ್ಯಗಳು, ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಹೇರಳವಾಗಿ ತಿನ್ನುವುದು ಆರೋಗ್ಯಕರ ದೇಹದ ತೂಕಕ್ಕೆ ಉಪಯುಕ್ತ.
ಹೃದ್ರೋಗ:ಸಸ್ಯಾಹಾರಿ ಆಹಾರವನ್ನು ಸೇವಿಸುವ ಮೂಲಕ, ನೀವು ಹೃದ್ರೋಗದ ಅಪಾಯವನ್ನು ಸುಮಾರು 50 ಪ್ರತಿಶತದಷ್ಟು ಕಡಿಮೆ ಮಾಡಬಹುದು.
ಮಧುಮೇಹ: ಸಸ್ಯ ಆಧಾರಿತ ಆಹಾರಗಳಲ್ಲಿ ಫೈಬರ್ ಅಧಿಕವಾಗಿರುತ್ತದೆ, ಸ್ಯಾಚುರೇಟೆಡ್ ಕೊಬ್ಬುಗಳು ಕಡಿಮೆ ಮತ್ತು ಉತ್ಕರ್ಷಣ ನಿರೋಧಕಗಳಿಂದ(antioxidants) ಸಮೃದ್ಧವಾಗುತ್ತದೆ. ಇದು ಮಧುಮೇಹವನ್ನು ತಡೆಯುತ್ತದೆ ಮತ್ತು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
ಸಸ್ಯಾಹಾರಿಯಾಗಿ ಅಗತ್ಯವಾದ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಪಡೆಯುವುದು ಹೇಗೆ?:
- ಸೋಡಿಯಂ, ಹೆಚ್ಚುವರಿ ಸಕ್ಕರೆಗಳು ಮತ್ತು ಕೊಬ್ಬುಗಳು ಹೆಚ್ಚಿರುವ ಆಹಾರಗಳನ್ನು ತಪ್ಪಿಸಿ
- ಹೆಚ್ಚಿನ ಪ್ರೋಟೀನ್ ಇರುವ ಆಹಾರಗಳನ್ನು ತಿನ್ನಿ
- ಹೆಚ್ಚು ಕಾರ್ಬೋಹೈಡ್ರೇಟ್ಗಳನ್ನು ತಿನ್ನಬೇಡಿ
- ಸಾಕಷ್ಟು ವಿಟಮಿನ್ ಬಿ 12 ಆಹಾರ ಸೇವಿಸಿ
- ಸಸ್ಯಾಹಾರದಿಂದ ಕ್ಯಾಲ್ಸಿಯಂ ಅವಶ್ಯಕತೆಗಳನ್ನು ಪೂರೈಸಿಕೊಳ್ಳಿ
- ವಿಟಮಿನ್ ಡಿ-ಬಲವರ್ಧಿತ ಆಹಾರಗಳನ್ನು ತಿನ್ನಿ
- ಆಹಾರ ತಜ್ಞರನ್ನು ಭೇಟಿ ಮಾಡಿ ಅಗತ್ಯ ಸಲಹೆ, ಸೂಚನೆ ಪಡೆಯಿರಿ
ಕೆಲವು ಪ್ರಸಿದ್ಧ ಭಾರತೀಯ ಸಸ್ಯಾಹಾರಿ ಭಕ್ಷ್ಯಗಳು:ಚೋಲೆ ಭಾಟೂರೆ, ಪನೀರ್ ಟಿಕ್ಕಾ, ದಾಲ್ ಮಖಾನಿ, ಬೈಂಗನ್ ಭರ್ತಾ, ಚಿಲ್ಲಿ ಪನೀರ್, ಪುಲಾವ್, ಸಮೋಸಾ, ದೋಸೆ, ಪಾಲಕ್ ಪನೀರ್, ಮಲೈ ಕೋಫ್ತಾ, ಪನೀರ್ ಮಖಾನಿ, ಪಾವ್ ಭಾಜಿ, ದಮ್ ಆಲೂ, ಖಾಂಡ್ವಿ, ಪನೀರ್ ಭುರ್ಜಿ, ಇಡ್ಲಿ ಸಾಂಬಾರ್, ಉಂಧಿಯು, ಸಾಬುದಾನ ವಡಾ, ವಡಾ ಪಾವ್ ಮತ್ತು ಪಾನಿ ಪುರಿ.
ಇದನ್ನೂ ಓದಿ:ತೂಕ ಮತ್ತು ಶುಗರ್ ನಿಯಂತ್ರಿಸುವ ಸೂಪರ್ ಫುಡ್: ರುಚಿಕರ 'ಜೋಳದ ದೋಸೆ' ಮಾಡೋದು ಹೀಗೆ - Jowar Dosa Recipe