ಕರ್ನಾಟಕ

karnataka

ETV Bharat / bharat

ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ಶವ ಚರಂಡಿಗೆ ಎಸೆದ ಪತ್ನಿ ಅರೆಸ್ಟ್​ - A WOMAN KILLS HUSBAND

ಪತಿಯನ್ನು ಕೊಂದು ಶವವನ್ನು ಚರಂಡಿಗೆ ಎಸೆದ ಆರೋಪದಡಿ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ಶವವನ್ನು ಚರಂಡಿಗೆ ಎಸೆದ ಪತ್ನಿ
ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ಶವವನ್ನು ಚರಂಡಿಗೆ ಎಸೆದ ಪತ್ನಿ (ETV Bharat)

By PTI

Published : 5 hours ago

ಕೋಟಾ (ರಾಜಸ್ಥಾನ): ಪತಿಯನ್ನು ಕೊಂದು ಶವವನ್ನು ಚರಂಡಿಗೆ ಎಸೆದ ಆರೋಪದಡಿ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಧರ್ಮರಾಜ್ ಬೈರ್ವಾ(40) ಪತ್ನಿ ಮತ್ತು ಆಕೆಯ ಪ್ರಿಯಕರನಿಂದ ಹತ್ಯೆಯಾದ ವ್ಯಕ್ತಿ. ಗುಡ್ಡಿಬಾಯಿ(35) ಮತ್ತು ಸತ್ಯನಾರಾಯಣ ಬೈರ್ವಾ(45) ಬಂಧಿತ ಆರೋಪಿಗಳು.

ಡಿ.13 ರಂದು ಅಂತಾ ಪೊಲೀಸ್ ಠಾಣಾ ವ್ಯಾಪ್ತಿಯ ಚರಂಡಿಯಲ್ಲಿ ತಲೆ ನಜ್ಜುಗುಜ್ಜಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಮೃತ ವ್ಯಕ್ತಿಯನ್ನು ಬರನ್​ನ ಕಾರ್ಮಿಕ ಧರ್ಮರಾಜ್ ಬೈರ್ವಾ(40) ಎಂದು ಗುರುತಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜಕುಮಾರ್ ಚೌಧರಿ ಪ್ರತಿಕ್ರಿಯಿಸಿ, "ನಾಪತ್ತೆಯಾದ ದಿನ ನನ್ನ ತಂದೆಗೆ ಕರೆ ಮಾಡಿ, ತ್ರಿಮೂರ್ತಿ ವೃತ್ತಕ್ಕೆ ಬರುವಂತೆ ತಿಳಿಸಲಾಗಿತ್ತು ಎಂದು ಧರ್ಮರಾಜ್​ ಅವರ 12 ವರ್ಷದ ಮಗಳು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಧರ್ಮರಾಜ್ ಸಿಮ್ಲಿಯಾದ ನಿವಾಸಿ ಸತ್ಯನಾರಾಯಣ ಬೈರ್ವಾ ಎಂಬ ವ್ಯಕ್ತಿಯೊಂದಿಗೆ ಬೈಕ್​ನಲ್ಲಿ ಹೋಗುತ್ತಿರುವುದು ಕಂಡು ಬಂದಿತ್ತು. ಪೊಲೀಸರು ಸತ್ಯನಾರಾಯಣ​ನನ್ನು ವಿಚಾರಣೆಗೆ ಒಳಪಡಿಸಿದಾಗ ಧರ್ಮರಾಜ್​ನನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ" ಎಂದು ಮಾಹಿತಿ ನೀಡಿದರು.

"ಮದುವೆಗೂ ಮುನ್ನವೇ ಸತ್ಯನಾರಾಯಣ, ಧರ್ಮರಾಜ್ ಅವರ ಪತ್ನಿಯನ್ನು ಪ್ರೀತಿಸುತ್ತಿದ್ದ ಎಂಬ ಅಂಶ ಬೆಳಕಿ ಬಂದಿದೆ. ಧರ್ಮರಾಜ್ ಮದ್ಯವ್ಯಸನಿಯಾಗಿದ್ದು, ಆಗಾಗ್ಗೆ ಪತ್ನಿ ಗುಡ್ಡಿಬಾಯಿಗೆ ಹೊಡೆಯುತ್ತಿದ್ದ. ಇದರಿಂದ ಇಬ್ಬರು ಸೇರಿ ಧರ್ಮರಾಜ್​ನನ್ನು ಕೊಲ್ಲಲು ಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ" ಎಂದು ತಿಳಿಸಿದರು.

ಇದನ್ನೂ ಓದಿ:ನ್ಯಾಯ ಸಿಗುವವರೆಗೂ ಮಗನ ಚಿತಾಭಸ್ಮ ವಿಸರ್ಜಿಸಲ್ಲ: ಮೃತ ಟೆಕ್ಕಿ ಅತುಲ್ ಸುಭಾಷ್ ತಂದೆಯ ಮಾತು

ABOUT THE AUTHOR

...view details