ಕರ್ನಾಟಕ

karnataka

ETV Bharat / bharat

ಜಾರ್ಖಂಡ್‌ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಯೋ, ಏಕಾಂಗಿಯೋ ಎಂಬುದು ಶೀಘ್ರವೇ ನಿರ್ಧಾರ: ಚಿರಾಗ್ ಪಾಸ್ವಾನ್ - Chirag Paswan On Jharkhand Polls

ಜಾರ್ಖಂಡ್‌ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಬೇಕೇ ಅಥವಾ ಮೈತ್ರಿ ಧರ್ಮ ಪಾಲಿಸಬೇಕೇ ಎಂಬುದನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಲೋಕ ಜನಶಕ್ತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

CHIRAG PASWAN ON JHARKHAND POLLS
ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ (IANS)

By ANI

Published : Sep 23, 2024, 12:46 PM IST

ರಾಂಚಿ(ಜಾರ್ಖಂಡ್): "ಜಾರ್ಖಂಡ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಯೊಂದಿಗೆ ಸ್ಪರ್ಧಿಸಬೇಕೇ ಅಥವಾ ಸ್ವತಂತ್ರವಾಗಿ ಸ್ಪರ್ಧಿಸಬೇಕೇ ಎಂಬುದನ್ನು ಪಕ್ಷ ಶೀಘ್ರದಲ್ಲೇ ನಿರ್ಧರಿಸಲಿದೆ" ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಮತ್ತು ಲೋಕ ಜನಶಕ್ತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ (ರಾಮ್ ವಿಲಾಸ್) ಹೇಳಿದರು.

ಚುನಾವಣಾಪೂರ್ವ ಸಿದ್ಧತೆಯ ಭಾಗವಾಗಿ ಅವರು ಸೋಮವಾರ ಬೆಳಗ್ಗೆ ರಾಂಚಿಗೆ ಭೇಟಿ ನೀಡಿದ್ದು, ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

"ಪಕ್ಷ ತನ್ನ ಸಂಘಟನಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವತ್ತ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪೂರ್ವಯೋಜನೆಯಂತೆ ಜಾರ್ಖಂಡ್‌ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಿದೆ" ಎಂದು ಹೇಳಿದರು.

"ಇನ್ನು ಚುನಾವಣೆಗೆ ಪಕ್ಷವನ್ನು ಬಲಪಡಿಸುವ ಕೆಲಸ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಏಕಾಂಕಿಯಾಗಿ ಸ್ಪರ್ಧಿಸಬೇಕೇ ಅಥವಾ ಎನ್​ಡಿಎ ಮೈತ್ರಿಯೊಂದಿಗೆ ಸ್ಪರ್ಧಿಸಬೇಕೇ ಎಂಬುದರ ಕುರಿತು ಶೀಘ್ರದಲ್ಲೇ ನಿರ್ಧರಿಸಲಾಗುವುದು" ಎಂದರು.

ಜಾರ್ಖಂಡ್‌ನಲ್ಲಿ ಇತರ ರಾಜ್ಯಗಳ ನಾಯಕರು ರಣಹದ್ದುಗಳಂತೆ ಸುಳಿದಾಡುತ್ತಿದ್ದಾರೆ ಎಂಬ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಹೇಳಿಕೆಗೆ, "ಮುಖ್ಯಮಂತ್ರಿಗಳ ಇಂತಹ ಭಾಷೆಗೆ ಜನರು ಉತ್ತರ ನೀಡುತ್ತಾರೆ. ಮುಂಬರುವ ಚುನಾವಣೆಯಲ್ಲಿ ಜನರ ತೀರ್ಪು ಎಲ್ಲವನ್ನೂ ಹೇಳುತ್ತದೆ" ಎಂದು ಸೂಚ್ಯವಾಗಿ ನುಡಿದರು.

ಇದನ್ನೂ ಓದಿ:2ನೇ ಹಂತದ ಮತದಾನಕ್ಕೂ ಮುನ್ನ ಇಂದು ಜಮ್ಮು ಕಾಶ್ಮೀರದಲ್ಲಿ ರಾಹುಲ್​ ಗಾಂಧಿ ಪ್ರಚಾರ - Rahul Gandhi Election Campaign

ABOUT THE AUTHOR

...view details