ETV Bharat / state

ಮೈಸೂರು ಪ್ರವಾಸೋದ್ಯಮ ಅಭಿವೃದ್ದಿಗೆ ವಿಮಾನಯಾನ ಸಂಸ್ಥೆಗಳ ಜತೆ ಮಾತುಕತೆ: ಸಂಸದ ಯದುವೀರ್‌ ಒಡೆಯರ್ - MP YADUVEER WADIYAR

ಸಂಸದ ಯದುವೀರ್ ಒಡೆಯರ್ ಅವರು ಇದೇ ಮಾರ್ಚ್​ ತಿಂಗಳಿನಿಂದ ಕೇರಳದಿಂದ ಮೈಸೂರಿಗೆ ವಿಮಾನಯಾನದ ಸಂಪರ್ಕ ಆರಂಭವಾಗಲಿದೆ ಎಂದಿದ್ದಾರೆ.

mp-yaduveer-wadiyar
ಸಂಸದ ಯದುವೀರ್‌ ಒಡೆಯರ್ (ETV Bharat)
author img

By ETV Bharat Karnataka Team

Published : Jan 3, 2025, 10:29 PM IST

ಮೈಸೂರು : ಮೈಸೂರು ಪ್ರವಾಸೋದ್ಯಮ ಕೇಂದ್ರ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ವಿಮಾನಯಾನ ಸಂಪರ್ಕ ಅಗತ್ಯ. ಈ ನಿಟ್ಟಿನಲ್ಲಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಸುಮಾರು 18 ರಿಂದ 20 ವಿಮಾನ ಯಾನ ಸಂಸ್ಥೆಗಳು ಒಂದಾಗಿದ್ದು, ಇದೇ ಮಾರ್ಚ್‌ ತಿಂಗಳಿನಿಂದ ಕೇರಳದಿಂದ ಮೈಸೂರಿಗೆ ವಿಮಾನಯಾನ ಸಂಪರ್ಕ ಆರಂಭವಾಗಲಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದರು.

ಮೈಸೂರು ವಿಮಾನ ನಿಲ್ದಾಣದಲ್ಲಿ ಇಂದು ಏರ್ ಕೇರಳ ಹಾಗೂ ಮೈಸೂರು ಏರ್ಪೋರ್ಟ್ಸ್ ಅಥಾರಿಟಿ ಅಧಿಕಾರಿಗಳ ಸಭೆ ನಡೆಸಿದರು. ನಂತರ ಮಾತನಾಡಿದ ಅವರು, ಮೈಸೂರಿನಲ್ಲಿ ಪ್ರವಾಸೋದ್ಯಮ ಹಾಗೂ ವ್ಯಾಪಾರಕ್ಕೆ ಹೆಚ್ಚಿನ ಅವಕಾಶಗಳಿವೆ. ಆದರೆ, ಮೈಸೂರಿನಿಂದ ಬೇರೆ ಕಡೆ ಹಾಗೂ ಹಲವು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹಲವು ವಿಮಾನ ಯಾನಗಳು, ಹಲವಾರು ಕಾರಣಗಳಿಂದ ರದ್ದಾಗಿದೆ ಎಂದರು.

ಸಂಸದ ಯದುವೀರ್‌ ಒಡೆಯರ್ ಅವರು ಮಾತನಾಡಿದರು (ETV Bharat)

ಮುಂದಿನ ದಿನಗಳಲ್ಲಿ ದೇಶದ ಇತರ ಕಡೆಗಳಿಂದ ವಿಮಾನಯಾನ ಸೇವೆ ಆರಂಭಿಸುವ ಬಗ್ಗೆ ಹಲವು ವಿಮಾನಯಾನ ಸಂಸ್ಥೆಗಳ ಜತೆ ಸಂಪರ್ಕ ಇದೆ. ಇದಕ್ಕಾಗಿ ಮೈಸೂರಿನ ಟ್ರಾವೆಲ್ಸ್‌ ಅಸೋಸಿಯೇಟ್ಸ್‌ , ಹೋಟೆಲ್‌ ಮಾಲೀಕರ ಸಂಘ ಹಾಗೂ ಇತರ ಸಂಸ್ಥೆಗಳ ಜತೆ ಮಾತುಕತೆ ನಡೆಸಿದ್ದು, ಪ್ರವಾಸೋದ್ಯಮದ ದೃಷ್ಟಿಯಿಂದ ಹೆಚ್ಚಿನ ವಿಮಾನಯಾನ ಸಂಪರ್ಕ ಸೇವೆ ಆರಂಭಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಮೈಸೂರು ವಿಮಾನ ನಿಲ್ದಾಣದ ರನ್‌ ವೇ ವಿಸ್ತರಣೆಯಾಗಲಿದ್ದು, ಈಗಾಗಲೇ ಕೆಪಿಟಿಸಿಎಲ್‌, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಯದುವೀರ್‌ ತಿಳಿಸಿದರು.

ಇತ್ತೀಚೆಗೆ ಮೈಸೂರು ವಿಮಾನ ನಿಲ್ದಾಣದಿಂದ ಹಾರಾಟ ನಡೆಸುತ್ತಿದ್ದ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ವಿಮಾನಗಳು ಪ್ರಯಾಣಿಕರ ಕೊರತೆಯಿಂದ ರದ್ದಾಗಿವೆ. ಈ ಹಿನ್ನೆಲೆ ಸಂಸದ ಯದುವೀರ್‌ ಒಡೆಯರ್‌ ಮತ್ತೆ ವಿಮಾನ ಹಾರಾಟ ಸೇವೆಗಳನ್ನ ಪ್ರಾರಂಭಿಸುವ ನಿಟ್ಟಿನಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳ ಜತೆ ಮಾತುಕತೆ ನಡೆಸುತ್ತಿದ್ದು, ಜತೆಗೆ ಮೈಸೂರು ವಿಮಾನ ನಿಲ್ದಾಣದ ರನ್‌ ವೇ ವಿಸ್ತರಣೆಗೂ ಸಹ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಇದನ್ನೂ ಓದಿ : ಮೈಸೂರಿನಿಂದ ವಿಮಾನ ಮಾರ್ಗ ವಿಸ್ತರಿಸುವಂತೆ ಕೇಂದ್ರ ಸಚಿವರಿಗೆ ಯದುವೀರ್ ಮನವಿ - MP Yaduveer Wadiyar - MP YADUVEER WADIYAR

ETV Bharat Logo

Copyright © 2025 Ushodaya Enterprises Pvt. Ltd., All Rights Reserved.