ಕರ್ನಾಟಕ

karnataka

ETV Bharat / bharat

ಎರಡಕ್ಕಿಂತ ಹೆಚ್ಚು ಮಕ್ಕಳಿದ್ದವರಿಗೆ ಮಾತ್ರ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ; ಆಂಧ್ರ ಸಿಎಂ ಚಂದ್ರಬಾಬು ನಾಯ್ಡು - CHANDRABABU NAIDU

ಒಂದು ಕಾಲದಲ್ಲಿ ಪಂಚಾಯತ್​ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಲವು ಮಕ್ಕಳಿದ್ದವರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರಲಿಲ್ಲ.

Will Allow Only Individuals With More Than Two Children To Contest Local Body Polls
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು (ಐಎಎನ್​ಎಸ್​)

By ETV Bharat Karnataka Team

Published : Jan 16, 2025, 1:48 PM IST

ತಿರುಪತಿ:ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಅಭ್ಯರ್ಥಿಗಳು ಮಾತ್ರ ಸರಪಂಚ್​, ಮುನ್ಸಿಪಲ್​ ಕೌನ್ಸಿಲರ್​​ ಅಥವಾ ಮೇಯರ್​​ ಹುದ್ದೆಗೆ ಸ್ಪರ್ಧೆಸಲು ಅವಕಾಶ ನೀಡಲಾಗುವುದು ಎಂದು ಆಂಧ್ರಪ್ರದೇಶ ಸಿಎಂ ಚಂದ್ರಶೇಖರ್​ ಬಾಬು ನಾಯ್ಡು ಘೋಷಿಸಿದ್ದಾರೆ. ಜನಸಂಖ್ಯೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.

ಒಂದು ಕಾಲದಲ್ಲಿ ಪಂಚಾಯತ್​ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಲವು ಮಕ್ಕಳಿದ್ದವರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರಲಿಲ್ಲ. ಆದರೆ ಈಗ ಕಡಿಮೆ ಮಕ್ಕಳನ್ನು ಹೊಂದಿರುವವರಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲು ಅವಕಾಶ ನೀಡಲಾಗುವುದಿಲ್ಲ. ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮಾತ್ರ ಸರಪಂಚ್​, ಕೌನ್ಸಿಲರ್​ ಅಥವಾ ಮೇಯರ್​ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದು ಇತ್ತೀಚಿಗೆ ನರವರಿಪಲ್ಲೆ ತಿಳಿಸಿದ್ದಾರೆ.

ಈ ಮೊದಲು ಹಳೆಯ ಕಾಲದವರು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುತ್ತಿದ್ದರು. ಆದರೆ, ಈಗಿನ ಪೀಳಿಗೆಯವರು ಒಂದು ಮಗುವಿಗೆ ಬಂದಿದ್ದಾರೆ. ಇನ್ನು ದುಪ್ಪಟ್ಟು ಆದಾಯ ಹೊಂದಿರುವವರು ಮಕ್ಕಳು ಬೇಡ ಎಂದು ಮಜಾ​ ಮಾಡುತ್ತಿದ್ದಾರೆ. ಅವರ ಪೋಷಕರು ಹಾಗೇ ಯೋಚನೆ ಮಾಡಿದ್ದರೆ, ಅವರು ಇಂದು ಜಗತ್ತಿನಲ್ಲಿ ಇರುತ್ತಿರಲಿಲ್ಲ ಎಂದಿದ್ದಾರೆ.

ಎಲ್ಲಾ ದೇಶಗಳು ಇಂದು ಈ ತಪ್ಪು ಮಾಡುತ್ತಿದೆ. ಸರಿಯಾದ ಸಮಯದಲ್ಲಿ ನಾವು ನಿರ್ಧರಿಸಬೇಕಿದೆ. ಹೆಚ್ಚು ಮಕ್ಕಳಿಗೆ ಪ್ರಾಶಸ್ತ್ಯ ನೀಡುವುದು ಒತ್ತಡವಲ್ಲ. ಆದರೆ, ಸಮಯ ನಮ್ಮ ಕೈ ಜಾರುತ್ತಿದೆ ಎಂದು ತಿಳಿಸಿದರು.

ದಕ್ಷಿಣ ಕೊರಿಯಾ, ಜಪಾನ್​ ಮತ್ತು ಯುರೋಪ್​ ಖಂಡಗಳು ಕುಸಿಯುತ್ತಿರುವ ಜನಸಂಖ್ಯೆ ಅಪಾಯದ ಬಗ್ಗೆ ಅರಿವನ್ನು ಹೊಂದಿಲ್ಲ. ಆದರೆ, ಅವರು ಕೇವಲ ಸಂಪತ್ತು ಸೃಷ್ಟಿ, ಆದಾಯ ಹೆಚ್ಚಳ, ದೇಶ ಮುನ್ನಡೆಯತ್ತ ಯೋಚಿಸುತ್ತಿದ್ದಾರೆ. ಇದೀಗ ಅವರಿಗೆ ಜನರ ಅವಶ್ಯಕತೆ ಎದುರಾಗಿದೆ. ಅವರಿಗೆ ನಾವು ಜನರನ್ನು ಕಳುಹಿಸುವಂತೆ ಆಗಿದೆ. ಇದೀಗ ಇಂತಹ ಪರಿಸ್ಥಿತಿಗೆ ನಾವು ಬಂದಿದ್ದೇವೆ ಎಂದರು.

ಈ ತಿಂಗಳ ಆರಂಭದಲ್ಲೂ ಕೂಡ ನಾಯ್ಡು, ಕುಸಿಯುತ್ತಿರುವ ಜನಸಂಖ್ಯೆ ಕುರಿತು ಮಾತನಾಡಿದ್ದು, ದಕ್ಷಿಣ ಕೊರಿಯಾ, ಜಪಾನ್​ ನಂತಹ ದೇಶಗಳು ಮಾಡಿದ ತಪ್ಪು ಮಾಡದಂತೆ ತಿಳಿಸಿದ್ದರು.

ಕಳೆದ ವರ್ಷ ಅಕ್ಟೋಬರ್​​ನಲ್ಲಿ ಮಾತನಾಡಿದ್ದ ಸಿಎಂ, ಇಂದು ದಂಪತಿಗಳು ತಾವು ಗಳಿಸಿದ ಹಣವನ್ನು ಮಕ್ಕಳಿಗೆ ಹಂಚುವುದಕ್ಕೆ ಸಮ್ಮತಿ ಹೊಂದಿಲ್ಲ. ಅವರು ತಮ್ಮ ಖುಷಿಗಾಗಿ ಎಲ್ಲವನ್ನು ವ್ಯಯ ಮಾಡುತ್ತಿದ್ದಾರೆ ಎಂದಿದ್ದರು. ಅಲ್ಲದೇ, ಆಂದ್ರಪ್ರದೇಶದಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದ್ದು ಜನಸಂಖ್ಯೆ ನಿರ್ವಹಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: ಬಾಲಿವುಡ್ ನಟ ಸೈಫ್ ಅಲಿ ಖಾನ್​ಗೆ ಆರು ಬಾರಿ ಇರಿದ ದುಷ್ಕರ್ಮಿ: ಆಸ್ಪತ್ರೆಗೆ ದಾಖಲು

ABOUT THE AUTHOR

...view details