ಕರ್ನಾಟಕ

karnataka

ETV Bharat / bharat

ಯುವತಿ ಮೇಲೆ ಪತಿಯಿಂದ ಅತ್ಯಾಚಾರ; ವಿಡಿಯೋ ಸೆರೆಹಿಡಿದ ಪತ್ನಿ! - law student raped in Tirupati

ತಿರುಪತಿಯಲ್ಲಿ ಕಾನೂನು ವಿದ್ಯಾರ್ಥಿನಿಗೆ ಗಾಂಜಾ ನಶೆ ಹತ್ತಿಸಿ, ಆಕೆಯ ಮೇಲೆ ಅತ್ಯಾಚಾರ ಮಾಡಲಾಗಿದೆ. ಪತಿಯ ಪೈಶಾಚಿಕ ಕೃತ್ಯಕ್ಕೆ ಪತ್ನಿ ಬೆಂಬಲ ನೀಡಿದ್ದಾಳೆ. ಇದೀಗ ಇಬ್ಬರೂ ಜೈಲು ಕಂಬಿ ಎಣಿಸುತ್ತಿದ್ದಾರೆ.

ರುಪತಿಯಲ್ಲಿ ಕಾನೂನು ವಿದ್ಯಾರ್ಥಿನಿ ರೇಪ್​
ರುಪತಿಯಲ್ಲಿ ಕಾನೂನು ವಿದ್ಯಾರ್ಥಿನಿ ರೇಪ್​ (ETV Bharat)

By ETV Bharat Karnataka Team

Published : Jul 27, 2024, 3:38 PM IST

ತಿರುಪತಿ (ಆಂಧ್ರಪ್ರದೇಶ):ಕಾನೂನು ವ್ಯಾಸಂಗ ಮಾಡಿ ಆದರ್ಶ ಜೀವನ ನಡೆಸಬೇಕಿದ್ದ ಯುವ ಜೋಡಿಯೊಂದು ದುಷ್ಕೃತ್ಯ ಎಸಗಿದೆ. ಅವರಿಗಿದ್ದ ಗಾಂಜಾ ಚಟ ಈಗ ಕಂಬಿ ಎಣಿಸುವಂತೆ ಮಾಡಿದೆ. ಸಹ ವಿದ್ಯಾರ್ಥಿನಿಗೂ ಗಾಂಜಾ ನಶೆ ಹತ್ತಿಸಿ, ಆಕೆಯ ಮೇಲೆ ಪತಿ ಅತ್ಯಾಚಾರ ಮಾಡಿದ್ದಾನೆ. ಈ ನೀಚ ಕೃತ್ಯವನ್ನು ಪತ್ನಿ ವಿಡಿಯೋ ಮಾಡಿದ್ದಾಳೆ. ಬಳಿಕ ಆ ಯುವತಿಯನ್ನು ಬ್ಲ್ಯಾಕ್​ಮೇಲ್​ ಮಾಡಿ ಚಿನ್ನ, ಹಣ ಪೀಕಿದ್ದಾರೆ.

ಈ ಪ್ರಕರಣ ನಡೆದಿದ್ದು, ಆಂಧ್ರಪ್ರದೇಶದ ತಿರುಪತಿಯಲ್ಲಿ. ಗೋವಿಂದನ ನಾಮಸ್ಮರಣೆಯಲ್ಲಿ ತೇಲಬೇಕಿದ್ದ ಊರಲ್ಲಿ ಗಾಂಜಾ ಘಾಟು ಜೋರಾಗಿದೆ. ಇದರ ಫಲವಾಗಿಯೇ ಈ ಕೃತ್ಯ ನಡೆದಿದೆ ಎಂಬ ಆರೋಪವೂ ಕೇಳಿ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ದಂಪತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಪ್ರಕರಣದ ವಿವರ:ಕರ್ನೂಲು ಜಿಲ್ಲೆಯ 22ರ ಯುವತಿ ನಾಲ್ಕು ವರ್ಷಗಳ ಹಿಂದೆ ತಿರುಪತಿಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಕೋರ್ಸ್‌ಗೆ ಸೇರಿದ್ದರು. ಕೆಲ ಕಾಲ ಕಾಲೇಜಿನ ಹಾಸ್ಟೆಲ್​​ನಲ್ಲಿ ತಂಗಿದ್ದರು. ಆ ಸಮಯದಲ್ಲಿ ಸದಾಶಿವಂ ಪ್ರಣವಕೃಷ್ಣ (35) ಎಂಬ ಸಹ ವಿದ್ಯಾರ್ಥಿನಿಯ ಪರಿಚಯವಾಗಿದೆ. ಬಳಿಕ ಆಕೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾಳೆ. ವಿವಾಹವಾಗಿದ್ದ ಆಕೆಯ ಮನೆಗೆ ಯುವತಿ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಇದರಿಂದ ಪ್ರಣವಕೃಷ್ಣ ಅವರ ಪತಿ ಕೃಷ್ಣಕಿಶೋರ್ ರೆಡ್ಡಿ ಅವರ ಪರಿಚಯವೂ ಆಗಿತ್ತು.

ತಿರುಪತಿ ಜಿಲ್ಲೆಯ ಭಾಕರಪೇಟೆ ಮೂಲದ ಈ ದಂಪತಿ ಎಸ್‌ವಿಯು ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ಅಂತಿಮ ವರ್ಷ ಓದುತ್ತಿದ್ದಾರೆ. ಗಾಂಜಾ ಚಟಕ್ಕೆ ಬಿದ್ದ ದಂಪತಿಗಳಿಬ್ಬರೂ ಆಗಾಗ ಮನೆಗೆ ಬರುತ್ತಿದ್ದ ಯುವತಿಗೂ ಈ ನಶೆಯ ಚಟ ಹತ್ತಿಸಿದ್ದಾರೆ. ಈ ವೇಳೆ, ಆಕೆ ನಶೆಯಲ್ಲಿದ್ದಾಗ ಕೃಷ್ಣ ಕಿಶೋರ್ ರೆಡ್ಡಿ ಅತ್ಯಾಚಾರವೆಸಗಿದ್ದಾನೆ. ಆತನ ಪತ್ನಿ ಈ ನೀಚ ಕೆಲಸವನ್ನು ವಿಡಿಯೋ ಮಾಡಿದ್ದಾರೆ.

ಹಣಕ್ಕಾಗಿ ವಿಡಿಯೋ ತೋರಿಸಿ ಬ್ಲ್ಯಾಕ್​ಮೇಲ್​:ನಂತರ ವಿಡಿಯೋ ಹಾಗೂ ಫೋಟೋಗಳನ್ನು ಯುವತಿಗೆ ತೋರಿಸಿ ಚಿನ್ನಾಭರಣ ಪೀಕಿದ್ದಾರೆ. ಇಷ್ಟಕ್ಕೆ ಬಿಡದೇ ವಿಡಿಯೋ, ಫೋಟೋಗಳನ್ನು ಸಂತ್ರಸ್ತೆಯ ಸಹೋದರ ಮತ್ತು ಆಕೆಯ ಭಾವಿ ಪತಿಗೆ ಕಳುಹಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಇದರ ವಿರುದ್ಧ ಕುಟುಂಬಸ್ಥರು ತಿರುಪತಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದುಷ್ಕೃತ್ಯ ಎಸಗಿದ ದಂಪತಿ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಅವರನ್ನು ಆಯಾ ಕಾನೂನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ.

ತಿರುಪತಿಯಲ್ಲಿ ಗಾಂಜಾ ಘಾಟು:ಗೋವಿಂದ ನಾಮಸ್ಮರಣೆಗೆ ಹೆಸರಾದ ತಿರುಪತಿ ನಗರದಲ್ಲಿ ಗಾಂಜಾ ಘಾಟು ಹೆಚ್ಚಾಗಿದೆ. ಆಧ್ಯಾತ್ಮಿಕ ನಗರ ಡ್ರಗ್ ಸಿಟಿಯಾಗಿ ಪರಿವರ್ತಿತವಾಗಿದೆ. ಗಾಂಜಾ ನಶೆ ನಗರ ಸೇರಿದಂತೆ ವಿಶ್ವವಿದ್ಯಾಲಯಗಳಿಗೂ ವ್ಯಾಪಿಸಿದೆ. ನಶೆಯಿಂದಾಗಿ ಇಂತಹ ಆಘಾತಕಾರಿ ಅಪರಾಧಗಳು ದಾಖಲಾಗುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ.

ಇದನ್ನೂ ಓದಿ:ಕಾಶ್ಮೀರದಲ್ಲಿ BAT ದಾಳಿ ವಿಫಲಗೊಳಿಸಿದ ಸೇನೆ: ಓರ್ವ ಯೋಧ ಹುತಾತ್ಮ, ನಾಲ್ವರಿಗೆ ಗಾಯ - ಪಾಕ್ ಉಗ್ರನ ಎನ್​ಕೌಂಟರ್ - Army Foils BAT Attack

ABOUT THE AUTHOR

...view details