ETV Bharat / state

ವಕ್ಫ್ ಒತ್ತುವರಿ ಮಾಹಿತಿ ಸಂಗ್ರಹಕ್ಕೆ ಬಿಜೆಪಿ ಜಿಲ್ಲಾ ಪ್ರವಾಸ: 'ಯತ್ನಾಳ್ ಹೋರಾಟಕ್ಕೆ ನಾಯಕರ ಅನುಮತಿ ಪಡೆದಿಲ್ಲ'- ಪಿ.ರಾಜೀವ್ - P RAJEEV PRESS MEET

ವಕ್ಫ್ ಆಸ್ತಿ ವಿಚಾರ ಸಂಬಂಧ ಮುಂಬರುವ ಅಧಿವೇಶನಕ್ಕೂ ಮುನ್ನ ಬಿಜೆಪಿಯಿಂದ ಮೂರು ತಂಡಗಳನ್ನು ರಚಿಸಿ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ತಿಳಿಸಿದರು.

p rajeev
ಪಿ.ರಾಜೀವ್ (ETV Bharat)
author img

By ETV Bharat Karnataka Team

Published : Nov 25, 2024, 3:35 PM IST

ಬೆಂಗಳೂರು: ''ಕಾಂಗ್ರೆಸ್​​ ಸರ್ಕಾರದ ಅಕ್ರಮಗಳ ದೃಢೀಕರಣಕ್ಕೆ ಮುಖ್ಯಮಂತ್ರಿಗಳು ಮತ್ತು ಸಚಿವರು ಮತದಾರರನ್ನು ಬಳಸಿಕೊಳ್ಳುವುದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾಡುವ ಅಪಮಾನ'' ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ್ ಆರೋಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಉಪಚುನಾವಣೆಯಲ್ಲಿ 3 ಕ್ಷೇತ್ರಗಳನ್ನು ಗೆದ್ದ ಮಾತ್ರಕ್ಕೆ ಕಾಂಗ್ರೆಸ್ ಸರ್ಕಾರ ಹಗರಣ ಮುಕ್ತ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ತಮ್ಮ ಮೇಲಿನ ಆರೋಪಗಳು ಸುಳ್ಳು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ನೀವು ಮಾಡಿರುವ ಹಗರಣ, ಅಕ್ರಮಗಳು ಅಕ್ಷಮ್ಯ ಅಪರಾಧಗಳು. ಇದರ ಬಗ್ಗೆ ಬಿಜೆಪಿ ಇನ್ನಷ್ಟು ಉಗ್ರವಾಗಿ ಹೋರಾಟ ಮಾಡಲಿದೆ'' ಎಂದು ಎಚ್ಚರಿಸಿದರು.

ನ್ಯಾಯಾಲಯಗಳ ಪ್ರಕರಣಗಳ ರದ್ಧತಿಗೆ ಅಫಿಡವಿಟ್ ಹಾಕಲು ಸವಾಲು: ''3 ಕ್ಷೇತ್ರಗಳ ಗೆಲುವಿನ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿರುವ ಎಲ್ಲ ಪ್ರಕರಣಗಳ ರದ್ಧತಿಗೆ ಸ್ವತಃ ವಕೀಲರಾದ ಸಿದ್ದರಾಮಯ್ಯ ಅಫಿಡವಿಟ್ ಹಾಕಲಿ ಎಂದು ಪಿ.ರಾಜೀವ್ ಅವರು ಸವಾಲೆಸೆದರು. ಹಣ, ಹೆಂಡ, ಅಧಿಕಾರದ ದುರ್ಬಳಕೆ ಇವೆಲ್ಲ ಮಾಡಿ ಗೆದ್ದಿದ್ದಾರೆ. ಚುನಾವಣಾ ಗೆಲುವನ್ನು ನ್ಯಾಯಾಂಗ ವ್ಯವಸ್ಥೆಗೆ ನೆರಳಾಗಿ ಬಳಸುವುದು ಅಕ್ಷಮ್ಯ ಅಪರಾಧ'' ಎಂದು ಹೇಳಿದರು.

''ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದದ ಬಗ್ಗೆ ಬಿಜೆಪಿಯು ಸಮರ್ಥವಾಗಿ ಎದುರಿಸಿ, ಕಾಂಗ್ರೆಸ್ ಸರ್ಕಾರವು ತುಷ್ಟೀಕರಣ ನೀತಿಯ ಮೂಲಕ ಅಮಾಯಕ ರೈತರನ್ನು ಕೂಡ ಯಾವ ರೀತಿ ಬಲಿ ಕೊಡುತ್ತಿದೆ ಎಂಬ ಬಗ್ಗೆ ರಾಜ್ಯಾದ್ಯಂತ ಯಶಸ್ವಿ ಹೋರಾಟ ಕೈಗೊಂಡಿದ್ದೇವೆ. ನಮ್ಮ ಹೋರಾಟದ ಫಲವಾಗಿ ರೈತರು, ಕಾಂಗ್ರೆಸ್​​ನ ಈ ನೀತಿಯನ್ನು ಅತ್ಯುಗ್ರವಾಗಿ ಖಂಡಿಸುತ್ತಿದ್ದಾರೆ'' ಎಂದರು.

3 ತಂಡ ರಚಿಸಿ ಪ್ರವಾಸ : ''ಡಿ.9ರಂದು ಅಧಿವೇಶನ ಪ್ರಾರಂಭವಾಗಲಿದ್ದು, ಸದನದೊಳಗೆ ರೈತರ ಪರವಾಗಿ ಬಿಜೆಪಿ ತನ್ನ ಹೋರಾಟವನ್ನು ಉಗ್ರವಾಗಿ ಮುಂದುವರೆಸಲಿದೆ. ಸದನಕ್ಕೆ ಪ್ರವೇಶ ಆಗುವುದಕ್ಕೆ ಮೊದಲು ರಾಜ್ಯಾದ್ಯಂತ 3 ತಂಡಗಳನ್ನು ರಚಿಸಿ ಸಂಬಂಧಿತ ಜಿಲ್ಲೆಗಳಲ್ಲಿ ಡಿ.4ರಿಂದ 6ರವರೆಗೆ ಪ್ರವಾಸ ಮಾಡಿ ಸದನಕ್ಕೆ ಬರಲಿವೆ. 'ನಮ್ಮ ಭೂಮಿ ನಮ್ಮ ಹಕ್ಕು' ಎಂಬ ಹೋರಾಟದ ಅಡಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಈ ತಂಡಗಳನ್ನು ರಚಿಸಲಾಗಿದೆ. ವಕ್ಫ್ 'ತುಘಲಕ್ ನೀತಿ'ಯನ್ನು ಖಂಡಿಸಲಿದ್ದೇವೆ'' ಎಂದು ಹೇಳಿದರು.

ಯತ್ನಾಳ್ ಅವರದ್ದು ಅನುಮತಿ ರಹಿತ ಹೋರಾಟ: ''ಬಿಜೆಪಿ ಶಿಸ್ತಿನ ಪಕ್ಷ. ರಾಜ್ಯಾಧ್ಯಕ್ಷರು ರಾಜ್ಯ ಕೋರ್ ಕಮಿಟಿ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು, ಪಕ್ಷದ ನಿಯಮ, ಶಿಸ್ತನ್ನು ಉಲ್ಲಂಘಿಸಿ ಹೇಳಿಕೆ ಕೊಟ್ಟರೆ, ಹೋರಾಟ ಮಾಡಿದರೆ ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ'' ಎಂದು ಪ್ರಶ್ನೆಯೊಂದಕ್ಕೆ ಪಿ.ರಾಜೀವ್ ಉತ್ತರಿಸಿದರು.

''ಯತ್ನಾಳ್ ಮಾಡುವ ಹೋರಾಟಕ್ಕೆ ರಾಷ್ಟ್ರೀಯ ನಾಯಕರ ಅನುಮತಿ ಪಡೆದಿಲ್ಲ. ರಾಜ್ಯ ನಾಯಕರಿಂದ, ಜಿಲ್ಲಾ ನಾಯಕರಿಂದಲೂ ಅನುಮತಿ ಪಡೆದಿಲ್ಲ. ಹಾಗಾಗಿ, ಅದು ಪಕ್ಷದ ಹೋರಾಟ ಆಗುವುದಿಲ್ಲ. ಅದು ಪಕ್ಷದ ಅಶಿಸ್ತು ಕೂಡ ಆಗುತ್ತದೆ. ಇಲ್ಲಿನವರೆಗೆ ರಾಜ್ಯದ ಹಂತದಲ್ಲೇ ಸಮಸ್ಯೆ ಸರಿಪಡಿಸುವ ಪ್ರಯತ್ನ ಮಾಡಿದ್ದೆವು. ಅದನ್ನು ಅವರು ಒಪ್ಪಿಕೊಳ್ಳಲಿಲ್ಲ. ಯತ್ನಾಳರ ಈ ಕ್ರಮದ ಕುರಿತು ರಾಷ್ಟ್ರನಾಯಕರ ಗಮನಕ್ಕೆ ತರುತ್ತೇವೆ. ಅವರ ವಿರುದ್ಧ ರಾಷ್ಟ್ರೀಯ ನಾಯಕರಿಗೆ ವರದಿ ಕೊಡುತ್ತೇವೆ'' ಎಂದು ಸ್ಪಷ್ಟಪಡಿಸಿದರು. ಬಿಜೆಪಿ ರಾಜ್ಯ ವಕ್ತಾರರಾದ ಅಶೋಕ್ ಗೌಡ, ವೆಂಕಟೇಶ್ ದೊಡ್ಡೇರಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಬಿಜೆಪಿ ಅವಧಿಯಲ್ಲೇ ರೈತರಿಗೆ ಹೆಚ್ಚು ವಕ್ಫ್ ನೋಟಿಸ್ ಜಾರಿ: ಸಚಿವ ಜಿ.ಪರಮೇಶ್ವರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.