IPL Mega Auction: 13 ವರ್ಷದ ಪ್ರತಿಭಾನ್ವಿತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ₹1.10 ಕೋಟಿಗೆ ಖರೀದಿಸಿ, ಕ್ರಿಕೆಟ್ ಲೋಕದಲ್ಲಿ ಅಚ್ಚರಿ ಮೂಡಿಸಿದೆ. ಈ ಮೂಲಕ ವೈಭವ್, ಐಪಿಎಲ್‌ನಲ್ಲಿ ಆಡುತ್ತಿರುವ ಅತೀ ಕಿರಿಯ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ.
ಬಿಹಾರದ ಸಮಸ್ತಿಪುರದವರಾದ ವೈಭವ್, ಇತ್ತೀಚಿಗೆ ಅಂಡರ್ 19 ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸಿ ಗಮನ ಸೆಳೆದಿದ್ದರು. ಆಸ್ಟ್ರೇಲಿಯಾ ತಂಡದೆದುರು 58 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.
𝙏𝙖𝙡𝙚𝙣𝙩 𝙢𝙚𝙚𝙩𝙨 𝙤𝙥𝙥𝙤𝙧𝙩𝙪𝙣𝙞𝙩𝙮 𝙞𝙣𝙙𝙚𝙚𝙙 🤗
— IndianPremierLeague (@IPL) November 25, 2024
13-year old Vaibhav Suryavanshi becomes the youngest player ever to be sold at the #TATAIPLAuction 👏 🔝
Congratulations to the young𝙨𝙩𝙖𝙧, now joins Rajasthan Royals 🥳#TATAIPL | @rajasthanroyals | #RR pic.twitter.com/DT4v8AHWJT
ಇನ್ನು, ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಎರಡನೇ ದಿನದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕೆಲವು ಸ್ಟಾರ್ ಆಟಗಾರರು ಅನ್‌ಸೋಲ್ಡ್ ಆಗಿದ್ದು ಅಚ್ಚರಿ ಮೂಡಿಸಿತು. ಕೇನ್ ವಿಲಿಯಮ್ಸ್, ಗ್ಲೆನ್ ಫಿಲಿಪ್ಸ್, ಕೇಶವ್ ಮಹರಾಜ್, ಅಜಿಂಕ್ಯಾ ರಹಾನೆ, ಶಾರ್ದೂಲ್ ಠಾಕೂರ್ ಮತ್ತು ಫೃಥ್ವಿ ಶಾ ಅನ್‌ಸೋಲ್ಡ್ ಆದ ಪ್ರಮುಖರು.
ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟರ್ ಆಗಿದ್ದ ಟಿಮ್ ಡೇವಿಡ್ ಆರ್ಸಿಬಿ ಪಾಲಾಗಿದ್ದಾರೆ. ಇವರನ್ನು ₹3 ಕೋಟಿಗೆ ಖರೀದಿಸಲಾಗಿದೆ. ವೆಸ್ಟ್ ಇಂಡೀಸ್ನ ರೊಮೆರಿಯೋ ಶೆಫಾರ್ಡ್ ಅವರನ್ನು ₹1.50 ಕೋಟಿಗೆ ಬಿಕರಿಯಾದರು. ಆರ್ಸಿಬಿಯ ಮಾಜಿ ಬ್ಯಾಟರ್ ವಿಲ್ ಜಾಕ್ಸ್ ₹5.25 ಕೋಟಿಗೆ ಮುಂಬೈ ಸೇರ್ಪಡೆಗೊಂಡಿದ್ದಾರೆ.
ಸ್ವಿಂಗ್ ಕಿಂಗ್ ಆರ್ಸಿಬಿಗೆ: ಭಾರತದ ಸ್ಟಾರ್ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಆರ್ಸಿಬಿ ಪಾಲಾಗಿದ್ದಾರೆ. ಕ್ರಿಕೆಟ್ ಲೋಕದಲ್ಲಿ ಹಲವಾರು ದಾಖಲೆಗಳನ್ನು ಬರೆದಿರುವ ಸ್ವಿಂಗ್ ಕಿಂಗ್ ಒಟ್ಟು 176 ಐಪಿಎಲ್ ಪಂದ್ಯಗಳನ್ನು ಆಡಿದ್ದು 181 ವಿಕೆಟ್ಗಳನ್ನು ಉರುಳಿಸಿದ್ದಾರೆ. 19 ರನ್ಗಳಿಗೆ 5 ವಿಕೆಟ್ ಪಡೆದಿರುವುದು ಇವರ ಶ್ರೇಷ್ಠ ಬೌಲಿಂಗ್ ಪ್ರದರ್ಶನ. ಭುವಿ ಅವರನ್ನು ಆರ್ಸಿಬಿ ₹10.75 ಕೋಟಿಗೆ ಖರೀದಿಸಿದೆ.
ಹರಾಜಾದ ಆಟಗಾರರು:
- ರೋವೆನ್ ಪೋವೆಲ್
ತಂಡ: ಕೆಕೆಆರ್
ಮೊತ್ತ: ₹1.50 ಕೋಟಿ
- ಫಾಫ್ ಡುಪ್ಲೆಸಿಸ್
ತಂಡ: ಡೆಲ್ಲಿ ಕ್ಯಾಪಿಟಲ್ಸ್
ಮೊತ್ತ: ₹2 ಕೋಟಿ
- ವಾಷಿಂಗ್ಟನ್ ಸುಂದರ್
ತಂಡ: ಗುಜರಾತ್ ಟೈಟಾನ್ಸ್
ಮೊತ್ತ: ₹3.20 ಕೋಟಿ
- ಸ್ಯಾಮ್ ಕರ್ರನ್
ತಂಡ: CSK
ಮೊತ್ತ: ₹2.40 ಕೋಟಿ
- ಮಾರ್ಕೋ ಜಾನ್ಸೆನ್
ತಂಡ: ಪಂಜಾಬ್ ಕಿಂಗ್ಸ್
ಮೊತ್ತ: ₹7 ಕೋಟಿ
- ಕೃನಾಲ್ ಪಾಂಡ್ಯ
ತಂಡ: RCB
ಮೊತ್ತ: ₹5.75 ಕೋಟಿ
- ನಿತೀಶ್ ರಾಣಾ
ತಂಡ: RR
ಮೊತ್ತ: ₹4.20 ಕೋಟಿ
- ಜಾಸ್ ಇಂಗ್ಲಿಸ್
ತಂಡ: PCB
ಮೊತ್ತ:₹2 ಕೋಟಿ
- ತುಷಾರ್ ದೇಶ್ಪಾಂಡೆ
ತಂಡ: RR
ಮೊತ್ತ: ₹6.50 ಕೋಟಿ
- ಕೋಯೆಟ್ಝೆ
ತಂಡ: GT
ಮೊತ್ತ: ₹2.40 ಕೋಟಿ
- ಭುವನೇಶ್ವರ್ ಕುಮಾರ್
ತಂಡ: RCB
ಮೊತ್ತ: ₹10.75 ಕೋಟಿ
- ಮುಕೇಶ್ ಕುಮಾರ್
ತಂಡ: DC (RTM)
ಮೊತ್ತ: ₹8 ಕೋಟಿ
- ದೀಪಕ್ ಚಹಾರ್
ತಂಡ: CSK
ಮೊತ್ತ: ₹9.25 ಕೋಟಿ
- ಆಕಾಶ್ ದೀಪ್
ತಂಡ: LSG
ಮೊತ್ತ: ₹8 ಕೋಟಿ
ಲ್ಯೂಕ್ ಫೆರ್ಗ್ಯೂಸನ್
ತಂಡ: PBKS
ಮೊತ್ತ: ₹2 ಕೋಟಿ
- ಘಝಾನ್ಫಾರ್
ತಂಡ: ಮುಂಬೈ ಇಂಡಿಯನ್ಸ್
ಮೊತ್ತ: ₹4.80 ಕೋಟಿ
- ಅನ್ಶುಲ್ ಕಂಭೋಜ್
ತಂಡ: CSK
ಮೊತ್ತ: ₹3.40 ಕೋಟಿ
ಇದನ್ನೂ ಓದಿ: IPL Auction: 184 ಐಪಿಎಲ್ ಪಂದ್ಯ 4 ಶತಕ 62 ಅರ್ಧಶತಕ ಸಿಡಿಸಿದ್ದ ಸ್ಪೋಟಕ ಬ್ಯಾಟರ್ Unsold!