ETV Bharat / state

ಶಿರೂರು ದುರಂತ, ಬಾಣಂತಿಯರ ಸಾವು: ರಾಜ್ಯದಲ್ಲಿ ಈ ವರ್ಷ ನಡೆದ ಪ್ರಮುಖ ಘಟನಾವಳಿಗಳು - KARNATAKA MAJOR EVENTS IN 2024

2024ರಲ್ಲಿ ರಾಜ್ಯದಲ್ಲಿ ಪ್ರಾಕೃತಿಕ ವಿಕೋಪ, ಭೂಕುಸಿತ ಉಂಟಾಗಿ ಅಪಾರ ಪ್ರಮಾಣದಲ್ಲಿ ಸಾವು, ನೋವು, ಆಸ್ತಿ ನಷ್ಟವಾಗಿದೆ. ಜೊತೆಗೆ ಪ್ರಮುಖ ಆರೋಪ ಪ್ರಕರಣಗಳೂ ನಡೆದಿವೆ. ಕೆಲವು ಪ್ರಮುಖ ಘಟನೆಗಳ ವಿವರ ಇಲ್ಲಿದೆ.

MAJOR HAPPENINGS IN KARNATAKA  BENGALURU  2024ರ ಪ್ರಮುಖ ಘಟನಾವಳಿಗಳು  KARNATAKA YEARENDER 2024
ರಾಜ್ಯದಲ್ಲಿ ಈ ವರ್ಷ ನಡೆದ ಪ್ರಮುಖ ಘಟನಾವಳಿಗಳು (ETV Bharat)
author img

By ETV Bharat Karnataka Team

Published : 16 hours ago

ಬೆಂಗಳೂರು: ಹೊಸ ಸಂವತ್ಸರಕ್ಕೆ ದಿನಗಣನೆ ಶುರುವಾಗಿದೆ. ಕೆಲವೇ ದಿನಗಳಲ್ಲಿ 2025ನೇ ಹೊಸ ವರ್ಷ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ 2024ರಲ್ಲಿ ಭೂಕುಸಿತ, ಪ್ರಾಕೃತಿಕ ವಿಕೋಪ, ಸರಣಿ ಬಾಣಂತಿಯರ ಸಾವು ಪ್ರಕರಣ ಸೇರಿದಂತೆ ಹಲವು ಪ್ರಮುಖ ಘಟನಾವಳಿಗಳು ನಡೆದಿವೆ.

ಇತ್ತೀಚಿನ ವರ್ಷಗಳಲ್ಲಿ ಮಳೆಗಾಲ ಬಂದರೆ ಸಾಕು ಕರಾವಳಿ ಮತ್ತು ಪಶ್ಚಿಮ ಘಟ್ಟಗಳು ಭಾರೀ ಪ್ರಾಕೃತಿಕ ವಿಕೋಪಕ್ಕೆ ಸಾಕ್ಷಿಯಾಗುತ್ತಿವೆ. ಬಹುತೇಕ ಎಲ್ಲ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತವೆ. ಬಯಲು ಪ್ರದೇಶಗಳು ಪ್ರವಾಹಕ್ಕೆ ಸಾಕ್ಷಿಯಾದರೆ, ಕರಾವಳಿ ಪ್ರದೇಶಗಳು ಹೆಚ್ಚುತ್ತಿರುವ ಸಮುದ್ರದ ಸವೆತ ಹಾಗೂ ಘಟ್ಟ ಪ್ರದೇಶಗಳು ಭೂಕುಸಿತಕ್ಕೆ ಒಳಗಾಗುವುದನ್ನು ಈ ವರ್ಷದಲ್ಲಿ ನೋಡಿದ್ದೇವೆ.

MAJOR HAPPENINGS IN KARNATAKA  BENGALURU  2024ರ ಪ್ರಮುಖ ಘಟನಾವಳಿಗಳು  KARNATAKA YEARENDER 2024
ಶಿರೂರಿನಲ್ಲಿ ಗುಡ್ಡ ಕುಸಿತ (ETV Bharat)

ಶಿರೂರು ದುರಂತ: 2024ರ ಜುಲೈನಲ್ಲಿ ಉತ್ತರ ಕನ್ನಡದ ಅಂಕೋಲಾದ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ಈ ವರ್ಷದ ಅತ್ಯಂತ ತೀವ್ರವಾದ ವಿಪತ್ತು. ಭಾರಿ ಗುಡ್ಡ ಕುಸಿತದಿಂದಾಗ ಹೆದ್ದಾರಿ ಬಳಿ ನಿಲ್ಲಿಸಿದ್ದ ವಾಹನಗಳೂ ಕೊಚ್ಚಿಕೊಂಡು ಹೋಗಿದ್ದಲ್ಲದೆ, ಪಕ್ಕದ ಹೋಟೆಲ್​​ನಲ್ಲಿದ್ದವರು ಸೇರಿ 11 ಜನರು ಕಣ್ಮರೆಯಾಗಿದ್ದರು. ಘಟನೆಯಲ್ಲಿ ಒಂದೆರಡು ಟ್ರಕ್‌ಗಳು ಮಣ್ಣಿನ ಜೊತೆಗೆ ಗಂಗಾವಳಿ ನದಿಯಲ್ಲಿ ತೇಲಿಹೋಗಿದ್ದವು. 8 ಮಂದಿಯ ಶವಗಳು ಪತ್ತೆಯಾಗಿದ್ದು, ಮೂವರ ಸುಳಿವು ಸಿಗಲೇ ಇಲ್ಲ.

ಟಿಬಿ ಡ್ಯಾಂ ಕ್ರಸ್ಟ್‌ಗೇಟ್ ಚೈನ್ ಲಿಂಕ್ ಕಟ್ (ETV Bharat)

ಟಿಬಿ ಡ್ಯಾಂ ಕ್ರಸ್ಟ್‌ಗೇಟ್ ಚೈನ್ ಲಿಂಕ್ ಕಟ್: ಆಗಸ್ಟ್ 10ರಂದು ರಾತ್ರಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಕೊಚ್ಚಿಹೋದ ದುರಂತ ಸರ್ಕಾರವನ್ನು ತಬ್ಬಿಬ್ಬುಗೊಳಿಸಿತ್ತು. ಟಿಬಿ ಡ್ಯಾಂ ವ್ಯಾಪ್ತಿಯ ರೈತರನ್ನು ಚಿಂತೆಗೀಡು ಮಾಡಿಸಿತ್ತು. ಆದರೆ, ಸರ್ಕಾರ ತಾತ್ಕಾಲಿಕವಾಗಿ ಚೈನ್ ಲಿಂಕ್ ಅಳವಡಿಸಿ, ಕ್ರಸ್ಟ್ ಗೇಟ್ ರಿಪೇರಿ ಮಾಡಿ ಹೆಚ್ಚಿನ ನೀರು ಪೋಲಾಗದಂತೆ ತಡೆಯಿತು. ಜೊತೆಗೆ ರೈತರಿಗೆ ನೀರು ಕೊಡುವಲ್ಲಿ ಯಶಸ್ವಿಯಾಯಿತು. ನಂತರ ಮತ್ತೆ ಟಿಬಿ ಡ್ಯಾಂ ಭರ್ತಿಯಾಗಿದೆ. ಆದರೆ, ದುರ್ಬಲವಾಗಿರುವ ಎಲ್ಲಾ ಗೇಟ್‌ಗಳ ಬದಲಾವಣೆಗೆ ಚಿಂತಿಸಲಾಗಿದೆ. ಇದೇ ವಿಚಾರಕ್ಕೆ ಸರ್ಕಾರದ ಮೇಲೆ ಪ್ರತಿಪಕ್ಷಗಳು ವಾಗ್ದಾಳಿಯನ್ನೂ ಮಾಡಿದ್ದವು.

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ಅಕ್ರಮವಾಗಿ ಮುಡಾ ನಿವೇಶನ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಪ್ರಕರಣದಲ್ಲಿ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರ್ಕಾರವನ್ನು ಪ್ರತಿಪಕ್ಷಗಳು ಇಕ್ಕಟ್ಟಿಗೆ ಸಿಲುಕಿಸಿದವು. ಅಲ್ಲದೇ ಪರಿಹಾರ 62 ಕೋಟಿ ಆಗುತ್ತದೆ. ಅದನ್ನು ಕೊಟ್ಟು ಬಿಡಲಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಯಿತು. ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದರಿಂದ, ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ಪ್ರಸ್ತುತ ವಿಚಾರಣೆ ಜಾರಿಯಲ್ಲಿದ್ದು, ಬಿಜೆಪಿಯು ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ತನಿಖೆ ಎದುರಿಸುತ್ತಿದ್ದು, ರಾಜೀನಾಮೆ ಕೊಡುವುದಿಲ್ಲ ಎಂದಿದ್ದಾರೆ. ಅಲ್ಲದೇ ಈ ನಡುವೆಯೂ ಕಾಂಗ್ರೆಸ್​ ಪಕ್ಷ ರಾಜ್ಯದ ಮೂರೂ ಉಪಚುನಾವಣೆಗಳನ್ನು ಗೆದ್ದು ಬೀಗಿತು. ಉಪ ಚುನಾವಣೆ ಸೋಲಿನಿಂದ ವಿಪಕ್ಷಗಳು ಸ್ವಲ್ಪ ತಣ್ಣಗಾಗಿರುವಂತೆ ಕಂಡು ಬಂದಿದ್ದು, ಇದು ಸಿಎಂ ಹಾಗೂ ಸರ್ಕಾರಕ್ಕೆ ಪ್ಲಸ್ ಆಗಿದೆ.

ಎತ್ತಿನಹೊಳೆ ಯೋಜನೆ (ETV Bharat)

ಎತ್ತಿನಹೊಳೆ ಯೋಜನೆ ಮೊದಲ ಹಂತ ಉದ್ಘಾಟನೆ: ಕರ್ನಾಟಕದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಪೂರೈಕೆ ಯೋಜನೆಯ ಮೊದಲ ಹಂತದ ಕಾಮಗಾರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸೆಪ್ಟೆಂಬರ್ 6ರಂದು ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ವಿತರಣಾ ತೊಟ್ಟಿ 4ರಲ್ಲಿ ಉದ್ಘಾಟಿಸಿದರು. ಎತ್ತಿನಹೊಳೆ ಯೋಜನೆ ಹಲವಾರು ವರ್ಷಗಳಿಂದ ಕುಂಟುತ್ತಾ ಸಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯೋಜನೆಯ ಕಾಮಗಾರಿಗೆ ವೇಗ ನೀಡಿತ್ತು.

ತೀವ್ರ ಸ್ವರೂಪ ಪಡೆದ ವಕ್ಫ್ ಬೋರ್ಡ್ ನೋಟಿಸ್ ವಿವಾದ: ರಾಜ್ಯದಲ್ಲಿ ವಕ್ಫ್ ಬೋರ್ಡ್ ಆಸ್ತಿ ವಿವಾದ ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ರೈತರ ಪಹಣಿಯಲ್ಲೂ ವಕ್ಫ್ ಜಮೀನು ಎಂದು ಬದಲಾವಣೆ ಆಗಿರುವುದು ರೈತರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು. ವಿಜಯಪುರದಲ್ಲಿ ರೈತರಿಗೆ ವಕ್ಫ್ ನೋಟಿಸ್ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ವಕ್ಫ್ ವಿವಾದ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈ ನಡುವೆ ಎಚ್ಚೆತ್ತುಕೊಂಡ ಸರ್ಕಾರ ರೈತರಿಗೆ ನೀಡಿದ್ದ ನೋಟಿಸ್ ವಾಪಸ್ ಪಡೆದುಕೊಂಡಿತು. ನವೆಂಬರ್ 2ರಂದು ವಕ್ಫ್ ಆಸ್ತಿಯ ವಿವಾದಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡಲಾಗಿರುವ ನೋಟಿಸ್​​ಗಳನ್ನು ತಕ್ಷಣ ವಾಪಸ್ ಪಡೆಯಲು ಸಿಎಂ ಸಿದ್ದರಾಮಯ್ಯ ಆದೇಶ ನೀಡಿದರು. ಸದ್ಯಕ್ಕೆ ವಕ್ಫ್ ಆಸ್ತಿ ವಿವಾದ ತಟಸ್ಥವಾಗಿದೆ.

ಬಳ್ಳಾರಿ ಜಿಲ್ಲಾಸ್ಪತ್ರೆ (ETV Bharat)

ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಾಣಂತಿಯರ ಸಾವು ಪ್ರಕರಣ: ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸಿಸೇರಿಯನ್‌ ಹೆರಿಗೆ ಬಳಿಕ ಮೂರು ದಿನಗಳ ಅಂತರದಲ್ಲಿ ನಾಲ್ವರು ಬಾಣಂತಿಯರು ಮೃತಪಟ್ಟರು. ಈ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಆ ಬಳಿಕ ಚಿತ್ರದುರ್ಗ, ಬೀದರ್‌, ರಾಯಚೂರು, ದಾವಣಗೆರೆ ಇತರೆ ಜಿಲ್ಲೆಗಳಲ್ಲಿಯೂ ನವೆಂಬರ್, ಡಿಸೆಂಬರ್ ಬಾಣಂತಿಯರ ಸಾವಾಗಿದೆ. ಈ ಪ್ರಕರಣ ವಿಧಾನಸಭೆಯಲ್ಲೂ ಭಾರೀ ಚರ್ಚೆ ನಡೆದು, ಪ್ರತಿಪಕ್ಷಗಳು ಇದು ಸರ್ಕಾರಿ ಕೊಲೆ ಎಂದು ಟೀಕಿಸಿದವು. ರಾಜ್ಯದಲ್ಲಿ ಕಳೆದ 8 ತಿಂಗಳಲ್ಲಿ ಬರೋಬ್ಬರಿ 348 ಬಾಣಂತಿಯರ ಸಾವಾಗಿದೆ ಎಂದು ಆರೋಗ್ಯ ಇಲಾಖೆಯ ಅಂಕಿ - ಅಂಶಗಳು ಹೇಳುತ್ತವೆ.

ರಾದ್ದಾಂತವಾಗಿದ್ದ ಅನರ್ಹರ ಬಿಪಿಎಲ್ ಪಡಿತರ ರದ್ದು: ಅನರ್ಹರು ಎಂಬ ಆಧಾರದಲ್ಲಿ 22 ಲಕ್ಷ ಬಿಪಿಎಲ್‌ ಕಾರ್ಡುಗಳನ್ನು ಕರ್ನಾಟಕದಲ್ಲಿ ರದ್ದು ಮಾಡಲಾಯಿತು. ಇನ್ನೊಂದೆಡೆ, ಯಾವುದೇ ಕಾರಣಕ್ಕೂ ಅರ್ಹ ಫಲಾನುಭವಿಗಳಿಗೆ ಬಿಪಿಎಲ್‌ ಕಾರ್ಡ್‌ ತಪ್ಪಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಇಷ್ಟೆಲ್ಲ ಬೆಳವಣಿಗೆಗಳ ನಡುವೆ, ಗ್ಯಾರಂಟಿ ಫಲಾನುಭವಿಗಳ ಪರಿಷ್ಕರಣೆಗೋಸ್ಕರ ಸರ್ಕಾರ ಬಿಪಿಎಲ್‌ ಕಾರ್ಡುಗಳ ಪರಿಷ್ಕರಣೆ ನಡೆಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು. ನಂತರ ರದ್ದು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿತು. ಅಲ್ಲದೆ, ಅರ್ಹರಿಗೆ ಮತ್ತೆ ಬಿಪಿಎಲ್ ನೀಡುವಂತೆ ಸೂಚಿಸಿತು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನ: ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ ಎಸ್‌.ಎಂ.ಕೃಷ್ಣ ಅವರು ನಿಧನರಾದರು. ಬೆಂಗಳೂರಿನ ಸದಾಶಿವನಗರದಲ್ಲಿ ತಮ್ಮ ನಿವಾಸದಲ್ಲಿ ಡಿಸೆಂಬರ್ 10ರಂದು ಬೆಳಗಿನಜಾವ ಕೊನೆಯುಸಿರೆಳೆದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಕರ್ನಾಟಕದ ಮುಖ್ಯಮಂತ್ರಿಯಾಗಿ 1999ರಿಂದ 2004ರವರೆಗೂ ಅಧಿಕಾರ ನಡೆಸಿದ ಅವರು, ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಕೆಲಸ ಮಾಡಿದ್ದರು. ಬೆಂಗಳೂರನ್ನು ಸಿಲಿಕಾನ್​ ಸಿಟಿ ಮಾಡಿದ ಕೀರ್ತಿ ಎಸ್.ಎಂ.ಕೆಗೆ ಸಲ್ಲುತ್ತದೆ. ಹುಟ್ಟೂರು ಮಂಡ್ಯ ಜಿಲ್ಲೆ, ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

ಇದನ್ನೂ ಓದಿ: ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ ಟಾಪ್​ 10 ಮಹಿಳಾ ಸಾಧಕಿಯರು

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅವಾಚ್ಯ ಪದ ಬಳಕೆ ಆರೋಪ: ಬೆಳಗಾವಿ ಸುವರ್ಣಸೌಧದ ವಿಧಾನಪರಿಷತ್ ಅಧಿವೇಶನದ ಕೊನೆಯ ದಿನವಾದ ಡಿಸೆಂಬರ್ 19ರಂದು ಭಾರಿ ಹೈಡ್ರಾಮವೇ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತಾಗಿ ನೀಡಿರುವ ಹೇಳಿಕೆ ಉಭಯ ಸದನದಲ್ಲೂ ಗದ್ದಲಕ್ಕೆ ಕಾರಣವಾಯ್ತು. ಆದರೆ ವಿಧಾನಪರಿಷತ್‌ನಲ್ಲಿ ಮಾತ್ರ ಇದು ಕೋಲಾಹಲವನ್ನೇ ಸೃಷ್ಟಿ ಮಾಡಿತು. ಚರ್ಚೆ ವೇಳೆ ಬಿಜೆಪಿ ಸದಸ್ಯ ಸಿ.ಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತಾಗಿ ಅವಾಚ್ಯ ಪದ ಬಳಸಿದ್ದಾರೆ ಎಂಬ ಆರೋಪವವು ಭಾರಿ ವಿವಾದಕ್ಕೆ ಕಾರಣವಾಯಿತು. ಈ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಸುವರ್ಣಸೌಧದ ಆವರಣದಲ್ಲಿ ಹೈಡ್ರಾಮವೇ ನಡೆಯಿತು. ಹಲ್ಲೆ ಯತ್ನ ಖಂಡಿಸಿ ಬಿಜೆಪಿಯವರು ಪ್ರತಿಭಟನೆ ನಡೆಸಿದರು. ಆದರೆ ಇದಕ್ಕೆ ಅವಕಾಶ ಕೊಡದ ಪೊಲೀಸರು ಸಿ.ಟಿ.ರವಿ ಅವರನ್ನು ವಶಕ್ಕೆ ಪಡೆದುಕೊಂಡರು. ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ದೂರಿನಂತೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿ.ಟಿ.ರವಿ ವಿರುದ್ಧ ಎಫ್‌ಐಆರ್ ದಾಖಲಾಯಿತು. ಅದರ ಅಧಾರದಲ್ಲಿ ಸಿ.ಟಿ ರವಿ ಅವರನ್ನು ಬಂಧಿಸಲಾಯಿತು. ಮರುದಿನ ಸ್ಥಳೀಯ ನ್ಯಾಯಲಯಕ್ಕೆ ಹಾಜರುಪಡಿಸಲಾಯಿತು. ನಂತರ ಸಿ.ಟಿ.ರವಿ ಅವರಿಗೆ ಹೈಕೋರ್ಟ್​ನಲ್ಲಿ ಜಾಮೀನು ದೊರೆಯಿತು.

ಇದನ್ನೂ ಓದಿ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ 2024ರ ಹಿನ್ನೋಟ ಹೀಗಿದೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.