ETV Bharat / bharat

ತೊರೆದು ಹೋದ ಹೆಂಡತಿ, 14 ತಿಂಗಳ ಅವಳಿ ಮಕ್ಕಳಿಗೆ ವಿಷವಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಪತಿ - FATHER KILLED 14 MONTH TWIN GIRLS

ಹೆಂಡತಿ ಬಿಟ್ಟು ಹೋದ ಹಿನ್ನೆಲೆ ಒಬ್ಬಂಟಿಯಾಗಿದ್ದ ಆತ ಮಾನಸಿಕ ಒತ್ತಡಕ್ಕೆ ಒಳಗಾಗಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

father-killed-14-month-old-twin-girls-by-mixing-poison-in-milk-then-committed-suicide-himself-in-bhadohi
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Nov 25, 2024, 3:33 PM IST

ಲಖನೌ, ಉತ್ತರಪ್ರದೇಶ: ಹೆಂಡತಿ ತೊರೆದು ಹೋದ ಕಾರಣದಿಂದ ಮನನೊಂದ ವ್ಯಕ್ತಿಯೊಬ್ಬ 14 ತಿಂಗಳ ಅವಳಿ ಹೆಣ್ಣು ಮಕ್ಕಳನ್ನು ಕೊಂದು, ತಾನು ಆತ್ಮಹತ್ಯೆಗೆ ಒಳಗಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಬದೋಯಿಯಲ್ಲಿ ನಡೆದಿದೆ.

ಓಂ ಪ್ರಕಾಶ್​ ಯಾದವ್​ (27) ಸಾವನ್ನಪ್ಪಿದ ತಂದೆ. ಆಶಿ ಮತ್ತು ಪ್ರಿಯಾಶಿ ಎಂಬ 14 ತಿಂಗಳ ಮಕ್ಕಳಿಗೆ ಹಾಲಿನಲ್ಲಿ ವಿಷ ಬೆರಸಿ ಹತ್ಯೆ ಮಾಡಲಾಗಿದೆ ಎಂದು ಎಸ್​ಎಚ್​ಒ ಅಜಿತ್​ ಕುಮಾರ್​ ಶ್ರೀವಾತ್ಸವ್​ ತಿಳಿಸಿದ್ದಾರೆ.

ಯಾದವ್​ ಹೆಂಡತಿ ಕಣ್ಮರೆಯಾಗಿರುವ ಕುರಿತು ನವೆಂಬರ್​ 21ರಂದು ಪೊಲೀಸ್​ ಪ್ರಕರಣ ದಾಖಲಿಸಿದ್ದ. ಸಣ್ಣ ಮಕ್ಕಳನ್ನು ತೊರೆದು ಆಕೆ ಹೊರಟು ಹೋಗಿದ್ದು, ಆತನನ್ನು ಒಬ್ಬಂಟಿಯಾಗಿ ಮಾಡಿದ್ದಳು. ಇದರಿಂದ ಆತ ತೀವ್ರ ಮಾನಸಿಕ ಸಮಸ್ಯೆಗೆ ಗುರಿಯಾಗಿ ಇಂತಹ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ ಎಂದು ಶ್ರೀವಾತ್ಸವ ತಿಳಿಸಿದರು.

ಮಕ್ಕಳಿಗೆ ವಿಷವಿಕ್ಕಿದ ಬಳಿಕ ಯಾದವ್​​ ಮೊದಲಿಗೆ ಮನೆಯಲ್ಲಿಯೇ ನೇಣಿಗೆ ಶರಣಾಗುವ ಪ್ರಯತ್ನ ನಡೆಸಿದ್ದ. ಬಳಿಕ ನಿರ್ಧಾರ ಬದಲಾಯಿಸಿ ಇಂದು ಬೆಳಗ್ಗೆ 7ಕ್ಕೆ ಮನೆ ತೊರೆದು, ಅಲ್ಲಿಂದ 500 ಮೀ ದೂರವಿರುವ ಗಣೇಶ್​ ಚಂದ್ರ ಲೌಡರ್​ ಇಂಟರ್​ ಕಾಲೇಜ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಗ್ಗೆ ಕಾಲೇಜಿನಲ್ಲಿ ಓಡಾಡುವಾಗ ಈತನ ನಡೆ ಬಗ್ಗೆ ಯಾರಿಗೂ ಅನುಮಾನ ಬಂದಿಲ್ಲ. ಕಾಲೇಜ್​ ಆರಂಭವಾದ ಬಳಿಕ ಆವರಣದಲ್ಲಿ ಈತನ ಶವ ಪತ್ತೆಯಾಗಿದ್ದು, ಕುಟುಂಬಸ್ಥರಿಗೆ ಮಾಹಿತಿ ನೀಡಲಾಯಿತು. ಮನೆಗೆ ಹೋಗಿ ಪರಿಶೀಲಿಸಿದಾಗ ಅವಳಿ ಮಕ್ಕಳ ಮೃತ ದೇಹವೂ ದೊರೆಯಿತು. ಇದಾದ ಬಳಿಕ ತಕ್ಷಣಕ್ಕೆ ಈ ಕುರಿತು ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದರು.

ಮೂವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಹಣದ ಮಾಲೆಯನ್ನೇ ಕದ್ದೊಯ್ದ ಕಳ್ಳ: ಚಲಿಸುತ್ತಿದ್ದ ವಾಹನದೊಳಗೆ ನುಗ್ಗಿ ಹಿಡಿದ ಮದುಮಗ- ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.