ಹೈದರಾಬಾದ್:ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಜೊತೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಅನುಚಿತವಾಗಿ ವರ್ತಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಭದ್ರತಾ ತಪಾಸಣೆಯ ನಂತರ ಗುರುವಾರ ಚಂಡೀಗಢ ವಿಮಾನ ನಿಲ್ದಾಣಕ್ಕೆ ಕಂಗನಾ ತಲುಪಿದ್ದರು. ಸಿಐಎಸ್‌ಎಫ್ ಮಹಿಳಾ ಯೋಧೆ ನಟಿ ಕಂಗನಾಗೆ ಕಪಾಳಮೋಕ್ಷ ಮಾಡಿ ನಿಂದಿಸಿದ್ದಾಳೆ. ಈ ಘಟನೆಯ ನಂತರ ಭಾರಿ ಕೋಲಾಹಲ ಸೃಷ್ಟಿಯಾಗಿತ್ತು.
ಕೂಡಲೇ ಮಹಿಳಾ ಯೋಧೆ ಕುಲ್ವಿಂದರ್ ಕೌರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆ ಬಳಿಕ ಕ್ರಮ ಕೈಗೊಂಡು ಸಿಐಎಸ್‌ಎಫ್ ಮಹಿಳಾ ಯೋಧೆಯನ್ನು ಅಮಾನತು ಮಾಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಯುವತಿ ಯಾರು ಮತ್ತು ಆಕೆ ಯಾಕೆ ಇಂತಹ ಕೃತ್ಯ ಎಸಗಿದಳು ಎಂಬುದನ್ನು ನೋಡುವುದಾದರೆ,
ಮಾಹಿತಿ ಪ್ರಕಾರ ಕಂಗನಾ ರಣಾವತ್ಗೆ ಕಪಾಳಮೋಕ್ಷ ಮಾಡಿದ 35 ವರ್ಷದ ಮಹಿಳಾ ಯೋಧೆ ಹೆಸರು ಕುಲ್ವಿಂದರ್ ಕೌರ್ ಆಗಿದ್ದು, ಆಕೆ ಸುಮಾರು 15 ವರ್ಷಗಳಿಂದ ಸಿಐಎಸ್‌ಎಫ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಮಹಿಳಾ ಸೈನಿಕನ ಪತಿಯೂ ಸಿಐಎಸ್‌ಎಫ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಲ್ವಿಂದರ್ ಕೌರ್ ಪಂಜಾಬ್‌ನ ಕಪುರ್ತಲಾ ನಿವಾಸಿ ಆಗಿದ್ದಾರೆ. ಆದರೆ, ಅವರ ಸಹೋದರ ರೈತ ನಾಯಕ. ಪ್ರಸ್ತುತ, ಕುಲ್ವಿಂದರ್ ಕೌರ್ ಅವರನ್ನು ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆಯಲ್ಲಿ ನಿಯೋಜಿಸಲಾಗಿದೆ.