ಕರ್ನಾಟಕ

karnataka

ETV Bharat / bharat

ವಾಟರ್​ಟ್ಯಾಂಕ್​ ಕುಸಿದು ಐವರ ಸಾವು: ಹಲವರಿಗೆ ಗಾಯ, ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಮಹಾರಾಷ್ಟ್ರದ ಪಿಂಪ್ರಿ ಚಿಂಚ್​ವಾಡ್​ನ ಬೋಸರಿಯಲ್ಲಿ ಕುಸಿತಗೊಂಡ ನೀರಿನ ಟ್ಯಾಂಕ್​ ಮುನ್ಸಿಪಲ್​​​ ಕಾರ್ಪೊರೇಷನ್​ಗೆ ಸಂಬಂಧಿಸಿದ್ದಲ್ಲ ಎಂದು ಆಯುಕ್ತರಾದ ಶೇಖರ್​ ಸಿಂಗ್​ ಸ್ಪಷ್ಟನೆ ನೀಡಿದ್ದಾರೆ

water-tank-collapse-in-pune-pimpri-chinchwad-5-died
ಪುಣೆಯಲ್ಲಿ ವಾಟರ್​ಟ್ಯಾಂಕ್​ ಕುಸಿತ (ಈಟಿವಿ ಭಾರತ್​)

By ETV Bharat Karnataka Team

Published : 5 hours ago

ಪುಣೆ, ಮಹಾರಾಷ್ಟ್ರ: ನೀರಿನ ಟ್ಯಾಂಕ್​ ಕುಸಿತದಿಂದಾಗಿ ಐದು ಜನ ಸಾವನ್ನಪ್ಪಿದ್ದು, ಅನೇಕ ಮಂದಿ ಗಾಯಗೊಂಡಿರುವ ಆಘಾತಕಾರಿ ಘಟನೆ ಪಿಂಪ್ರಿ ಚಿಂಚ್​ವಾಡ್​ನ ಬೋಸರಿಯಲ್ಲಿ ನಡೆದಿದೆ. ಇಂದು ಬೆಳಗ್ಗೆ 7 ಗಂಟೆಗೆ ಈ ದುರ್ಘಟನೆ ನಡೆದಿದ್ದು, ಅನೇಕ ಮಂದಿ ಅವಶೇಷಗಳ ಅಡಿ ಸಿಲುಕಿದ್ದಾರೆ.

ಈ ಕುಸಿತ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಗ್ನಿ ಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಅವಶೇಷಗಳ ಅಡಿಯಲ್ಲಿ ಸಿಲುಕಿದವರ ರಕ್ಷಣೆ ಮಾಡಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳಪೆ ಕಾಮಗಾರಿಯಿಂದಾಗಿ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಾರ್ಮಿಕರ ಕ್ಯಾಂಪ್​ ಬಳಿ ನಿರ್ಮಾಣ ವಾಗಿರುವ ಕುಸಿತಗೊಂಡ ನೀರಿನ ಟ್ಯಾಂಕ್​ ಮುನ್ಸಿಪಲ್​​​​ ಕಾರ್ಪೊರೇಷನ್​ಗೆ ಸಂಬಂಧಿಸಿದ್ದಲ್ಲ ಎಂದು ಆಯುಕ್ತರಾದ ಶೇಖರ್​ ಸಿಂಗ್​ ಸ್ಪಷ್ಟನೆ ನೀಡಿದ್ದಾರೆ. ಇದೀಗ ಈ ವಾಟರ್​ ಟ್ಯಾಂಕ್​ ನಿರ್ಮಾಣ ಮಾಡಿದವರು ಯಾರು ಎಂಬ ಪ್ರಶ್ನೆ ಎದ್ದಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಇನ್ನು ಈ ನಡುವೆ ಈ ಅನಾಹುತದಿಂದ ಮೃತರಾದ ಕುಟುಂಬಸ್ಥರು ಈ ಸಾವಿಗೆ ನ್ಯಾಯ ದೊರೆಯುವವರೆಗೂ ಮೃತ ದೇಹಗಳನ್ನು ನಾವು ಪಡೆದು ಕೊಳ್ಳುವುದಿಲ್ಲ ಎಂದು ಧರಣಿಗೆ ಮುಂದಾಗಿದ್ದಾರೆ. ಸಾರ್ವಜನಿಕರು ಮತ್ತು ಮೃತರ ಕುಟುಂಬಸ್ಥರು ಪ್ರತಿಭಟನೆ ಮಾಡುತ್ತಿರುವುದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ರಾಜಸ್ಥಾನ ಉಪ ಚುನಾವಣೆಗೆ ಕೈ ಅಭ್ಯರ್ಥಿ ಪಟ್ಟಿ ಪ್ರಕಟ: ಉ.ಪ್ರದೇಶದಲ್ಲಿ ಸೈಕಲ್​ ಚಿಹ್ನೆಯಡಿ ಮೈತ್ರಿ ಅಭ್ಯರ್ಥಿಗಳು ಸ್ಪರ್ಧೆ

ABOUT THE AUTHOR

...view details