ಲಕ್ನೋ (ಉತ್ತರ ಪ್ರದೇಶ): ಇಲ್ಲಿನ ಶಾಮ್ಲಿ ಜಿಲ್ಲೆಯಲ್ಲಿ ಉತ್ತರ ಪ್ರದೇಶದ ಪೊಲೀಸ್ ವಿಶೇಷ ಕಾರ್ಯಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ವಾಂಟೆಡ್ ಅಪರಾಧಿ ಹಾಗೂ ಆತನ ಮೂವರು ಸಹಚರರನ್ನು ಎನ್ಕೌಂಟರ್ ಮಾಡಿರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಎನ್ಕೌಂಟರ್ ವೇಳೆ ಎಸ್‌ಟಿಎಫ್ ಇನ್ಸ್ಪೆಕ್ಟರ್ ಕೂಡ ಗಾಯಗೊಂಡಿರುವುದಾಗಿ ವರದಿಯಾಗಿದೆ. ಸೋಮವಾರ ತಡ ರಾತ್ರಿ ಜಿಂಜಿನಾ ಪ್ರದೇಶದಲ್ಲಿ ಈ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಸ್ತಫಾ ಕಗ್ಗ ಗ್ಯಾಂಗ್ ಸದಸ್ಯ ಅರ್ಷದ್ ಮತ್ತು ಆತನ ಮೂವರು ಸಹಚರರಾದ ಮಂಜೀತ್, ಸತೀಶ್ ಹಾಗೂ ಮತ್ತೊಬ್ಬ ವ್ಯಕ್ತಿ ನಡುವೆ ಎಸ್‌ಟಿಎಫ್ ಮೀರತ್ ತಂಡ ಎನ್ಕೌಂಟರ್ ನಡೆಸಿದೆ. ಈ ವೇಳೆ ಈ ಆರೋಪಿಗಳು ಸಾವನ್ನಪ್ಪಿದ್ದು, ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶ ಎಸ್‌ಟಿಎಫ್, ಕಾನೂನು ಮತ್ತು ಸುವ್ಯವಸ್ಥೆ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಬ್ ಯಶ್ ಹೇಳಿದ್ದಾರೆ.