ಕರ್ನಾಟಕ

karnataka

ETV Bharat / bharat

ಸಚಿನ್​ ತೆಂಡೂಲ್ಕರ್​ ಭದ್ರತೆಗೆ ನಿಯೋಜಿಸಿದ್ದ ಸಿಬ್ಬಂದಿ ಆತ್ಮಹತ್ಯೆಗೆ ಶರಣು - VVIP security of Sachin Tendulkar

ಪ್ರಕಾಶ್​ ಕಪ್ಡೆ ಆತ್ಮಹತ್ಯೆಗೆ ಒಳಗಾದ ಯೋಧ. ಈತ ರಜೆ ಮೇಲೆ ಪೂರ್ವಜರ ಊರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ.

VVIP security of Sachin Tendulkar shot himself at his native home
VVIP security of Sachin Tendulkar shot himself at his native home (File Photo)

By IANS

Published : May 15, 2024, 2:46 PM IST

Updated : May 15, 2024, 4:34 PM IST

ಹೈದರಾಬಾದ್​: ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​​ಗೆ ಭದ್ರತೆಗೆ ನೇಮಕವಾಗಿದ್ದ ರಾಜ್ಯ ಮೀಸಲು ಪೊಲೀಸ್​ ಪಡೆಯ 39 ವರ್ಷ ವಯಸ್ಸಿನ ಜವಾನ (ಎಸ್​ಆರ್​ಪಿಎಫ್​) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಜಾಮ್ನರ್​​ ಪಟ್ಟಣಕ್ಕೆ ರಜೆ ಮೇಲೆ ತೆರಳಿದ್ದ ಜವಾನ ತಮ್ಮ ನಿವಾಸದಲ್ಲಿ ಸಾವಿಗೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕಾಶ್​ ಕಾಪ್ಡೆ ಆತ್ಮಹತ್ಯೆಗೆ ಶರಣಾದ ಎಸ್​ಆರ್​​ಪಿಎಫ್ ಭದ್ರತಾ​ ಸಿಬ್ಬಂದಿ. ಈತ ರಜೆ ಮೇಲೆ ಪೂರ್ವಜರ ಊರಿಗೆ ತೆರಳಿದ್ದಾಗ, ಘಟನೆ ನಡೆದಿದೆ. ಇವರು ಹೆಂಡತಿ, ಇಬ್ಬರು ಮಕ್ಕಳು, ಸೋದರ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಪ್ರಕರಣದ ಕುರಿತು ಮಾತನಾಡಿರುವ ಜಾಮ್ನರ್​​ ಹಿರಿಯ ಪೊಲೀಸ್​ ಇನ್ಸ್​ಪೆಕ್ಟರ್​​ ಕಿರಣ್​ ಶಿಂಧೆ, ಬೆಳಗಿನಜಾವ 1.30 ಗಂಟೆಗೆ ಈ ಘಟನೆ ಸಂಭವಿಸಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುವುದು. ಪ್ರಾಥಮಿಕ ತನಿಖೆ ಪ್ರಕಾರ, ವೈಯಕ್ತಿಕ ಕಾರಣಗಳಿಂದ ಜವಾನ ಈ ರೀತಿಯ ಕಠಿಣ ನಿರ್ಧಾರ ಕೈಗೊಂಡಿರುವುದು ಕಂಡು ಬಂದಿದೆ. ಆದರೆ, ಸಂಪೂರ್ಣ ವಿಚಾರಣೆ ಬಳಿಕವೇ ಈ ಕುರಿತು ತಿಳಿಯಲಿದೆ ಎಂದಿದ್ದಾರೆ.

ಜವಾನನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ತನಿಖೆ ಬಾಕಿ ಇದೆ ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇತ್ತ ಜವಾನನ ವಿವಿಐಪಿ ಭದ್ರತೆಗೆ ನೇಮಿಸಿದ ಹಿನ್ನೆಲೆಯಲ್ಲಿ ರಾಜ್ಯ ಮೀಸಲು ಪೊಲೀಸ್​ ಪಡೆ ಕೂಡ ಘಟನೆ ಸಂಬಂಧ ಸ್ವತಂತ್ರ ತನಿಖೆ ನಡೆಸಲು ಮುಂದಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: 51ನೇ ವಸಂತಕ್ಕೆ ಕಾಲಿಟ್ಟ 'ಕ್ರಿಕೆಟ್​ ದೇವರು' ಸಚಿನ್ ತೆಂಡೂಲ್ಕರ್

Last Updated : May 15, 2024, 4:34 PM IST

ABOUT THE AUTHOR

...view details