ನವದೆಹಲಿ:ಮೂರನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಒಟ್ಟಾರೆ ಮತದಾನದ ಪ್ರಮಾಣ ಶೇಕಡಾ 65.68 ರಷ್ಟಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ. ಇದು ಅಂತಿಮ ಮತದಾನದ ಅಂಕಿ - ಅಂಶವಾಗಿದ್ದು, ಆಯೋಗವು ಶನಿವಾರ ಈ ಮಾಹಿತಿ ಬಿಡುಗಡೆ ಮಾಡಿದೆ.
ಮೂರನೇ ಹಂತದ ಮತದಾನ ನಡೆದ ಒಂದು ದಿನದ ನಂತರ ಮೇ 8 ರಂದು ಚುನಾವಣಾ ಸಮಿತಿಯು ಇದೇ ರೀತಿಯ ಮತದಾನದ ಅಂಕಿ - ಅಂಶವನ್ನು ನೀಡಿತ್ತು. 66.89 ರಷ್ಟು ಪುರುಷರು, 64.4 ರಷ್ಟು ಮಹಿಳೆಯರು ಮತದಾನ ಮಾಡಿದ್ದಾರೆ. 8.85 ಕೋಟಿ ಪುರುಷರು ಮತ್ತು 8.39 ಕೋಟಿ ಮಹಿಳೆಯರು ಸೇರಿದಂತೆ ಒಟ್ಟು 17.24 ಕೋಟಿ ನಾಗರಿಕರು ತಮ್ಮ ಮತದಾನದ ಹಕ್ಕು ಚಲಾಯಿಸಿರುವುದಾಗಿ ಚುನಾವಣಾ ಆಯೋಗ ಶನಿವಾರ ತಿಳಿಸಿದೆ.