ಕರ್ನಾಟಕ

karnataka

ETV Bharat / bharat

ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶ: ಮಾಜಿ ಕುಸ್ತಿಪಟು ವಿನೇಶ್​ ಫೋಗಟ್​​ಗೆ ಜಯ

ರಾಜಕೀಯ ಅಖಾಡದಲ್ಲೂ ಮಾಜಿ ಕುಸ್ತಿ ಪಟು ವಿನೇಶ್​ ಫೋಗಟ್​ ಜಯ ಸಾಧಿಸಿದ್ದಾರೆ.

vinesh-phogat-trails-in-her-maiden-contest-from-julana
ವಿನೇಶ್​ ಫೋಗಟ್ (ANI)

By PTI

Published : Oct 8, 2024, 11:49 AM IST

Updated : Oct 8, 2024, 12:46 PM IST

ಚಂಢೀಗಢ:ಹರಿಯಾಣದ ಜಿಂದ್ ಜಿಲ್ಲೆಯ ಜೂಲಾನಾ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಮಾಜಿ ಕುಸ್ತಿ ಪಟು ವಿನೇಶ್​ ಫೋಗಟ್​ ಜಯದ ಮಾಲೆ ಧರಿಸಿದ್ದಾರೆ.

ಚುನಾವಣಾ ಆಯೋಗದ ಜಾಲತಾಣದ ಪ್ರಕಾರ, ವಿನೇಶ್​​ ಫೋಗಟ್​​ ತಮ್ಮ ಎದುರಾಳಿ ಬಿಜೆಪಿಯ ಯೋಗೇಶ್​ ಕುಮಾರ್​ ಅವರ ವಿರುದ್ಧ 6 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಹರಿಯಾಣದಲ್ಲಿ ಬದಲಾದ ಟ್ರೆಂಡ್​​:ಹರಿಯಾಣ ವಿಧಾನಸಭಾ ಚುನಾವಣೆಯ ಆರಂಭಿಕ ಮತ ಎಣಿಕೆ ವೇಳೆ ಕಾಂಗ್ರೆಸ್​​ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರೂ ಇದೀಗ ಬಿಜೆಪಿ ಮುನ್ನಡೆ ಸಾಧಿಸಿದೆ.

ಬೆಳಗ್ಗೆ 8ಗಂಟೆಗೆ ಮತ ಏಣಿಕೆ ಆರಂಭವಾದಾಗ ಮೊದಲ ಎರಡು ಗಂಟೆ ಅವಧಿಯಲ್ಲಿ ಕಾಂಗ್ರೆಸ್​ ಮುನ್ನಡೆ ಸಾಧಿಸಿತ್ತು. ಆದರೆ ಇದೀಗ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಸದ್ಯ ಅಲ್ಲಿನ ಟ್ರೆಂಡ್​ ಬದಲಾಗಿದೆ.

ಚುನಾವಣಾ ಆಯೋಗದ ದತ್ತಾಂಶ ಪ್ರಕಾರ, ಬಿಜೆಪಿ ತನ್ನ ಎದುರಾಳಿ ಪಕ್ಷದ ಮತಗಳ ಅರ್ಧಕ್ಕಿಂತ ಹೆಚ್ಚಿನ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ, 90 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 48 ಕ್ಷೇತ್ರಗಳಲ್ಲಿ ಮುನ್ನಡೆ ಕಂಡಿದೆ. ಕಾಂಗ್ರೆಸ್​ 34 ಕ್ಷೇತ್ರದಲ್ಲಿ ಮುನ್ನಡೆ ಕಂಡಿದೆ.

ಇನ್ನು ರಾಷ್ಟ್ರೀಯ ಲೋಕ​ ದಳ, ಜನನಾಯಕ್​ ಜನತಾ ಪಕ್ಷ ಮತ್ತು ಬಹುಜನ ಸಮಾಜ್​ ಪಕ್ಷ ಕೇವಲ ತಲಾ ಒಂದು ಸೀಟು ಗಳಿಸಿವೆ.

ಗೆಲುವಿನ ವಿಶ್ವಾಸದಲ್ಲಿ ಹೂಡ: ಮುಖ್ಯಮಂತ್ರಿ ನಯಾಬ್​ ಸಿಂಗ್​ ಸೈನಿ ಕರುಕ್ಷೇತ್ರ ಜಿಲ್ಲೆಯ ಲಾಡ್ವಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್​ ನಾಯಕ ಭೂಪಿಂದರ್​ ಸಿಂಗ್​ ಹೂಡ ರೋಹ್ಟಗಿ ಜಿಲ್ಲೆಯ ಸಂಪಲ- ಕಿಲೊಯಿಯಲ್ಲಿ ಮುನ್ನಡೆ ಕಂಡಿದ್ದಾರೆ. ಬಿಜೆಪಿ ನಾಯಕ ಅನಿಲ್​ ವಿಜ್​ ಅಂಬಾಲ ಕಂಟೋನ್ಮೆಟ್​ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಈ ನಡುವೆ ಮಾತನಾಡಿರುವ ಭೂಪೇಂದರ್​ ಸಿಂಗ್​ ಹೂಡ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ಹರಿಯಾಣದಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ. ಈ ಗೆಲುವು ದೇಶಾದ್ಯಂತ ರಾಜಕೀಯ ಪರಿಣಾಮ ಬೀರಲಿದೆ. ಈ ಗೆಲುವಿನೊಂದಿಗೆ ದೇಶಾದ್ಯಂತ ಸಂದೇಶ ರವಾನೆಯಾಗಲಿದೆ ಎಂದಿದ್ದಾರೆ.

ಹರಿಯಾಣ ವಿಧಾನಸಭಾ 90 ಕ್ಷೇತ್ರಗಳಿಗೆ ಅಕ್ಟೋಬರ್​ 5ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. ಶೇ. 74.66 ಮತದಾನ ಆಗಿತ್ತು.

ಇದನ್ನೂ ಓದಿ: ವಿಧಾನಸಭೆ ಚುನಾವಣೆ ಫಲಿತಾಂಶ; ಹರಿಯಾಣದಲ್ಲಿ ಬಿಜೆಪಿ ಮುನ್ನಡೆ, ಕಾಶ್ಮೀರದಲ್ಲಿ ಇಂಡಿಯಾ ಮೈತ್ರಿ ಕಮಾಲ್​

Last Updated : Oct 8, 2024, 12:46 PM IST

ABOUT THE AUTHOR

...view details