ETV Bharat / bharat

ಏರ್​​ ಇಂಡಿಯಾ ಮಹಿಳಾ ಪೈಲಟ್​​​ ಆತ್ಮಹತ್ಯೆಯಲ್ಲ, ಕೊಲೆ: ಕುಟುಂಬಸ್ಥರ ಅನುಮಾನ - SRISHTI TULI DEATH

ಏರ್​ ಇಂಡಿಯಾ ಮಹಿಳಾ ಪೈಲಟ್​​​ ಸೃಷ್ಟಿ ತುಲಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್​ ಸಿಕ್ಕಿದೆ. ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ಬಂಧಿತ ಸ್ನೇಹಿತನ ಮೇಲೆ ಶಂಕಿಸಲಾಗಿದೆ.

ಏರ್​ ಇಂಡಿಯಾ ಮಹಿಳಾ ಪೈಲಟ್​​
ಏರ್​ ಇಂಡಿಯಾ ಮಹಿಳಾ ಪೈಲಟ್​​ (ETV Bharat)
author img

By ETV Bharat Karnataka Team

Published : Nov 28, 2024, 7:42 PM IST

ಗೋರಖ್‌ಪುರ, ಉತ್ತರಪ್ರದೇಶ : ಏರ್​​ ಇಂಡಿಯಾದ ಮಹಿಳಾ ಪೈಲಟ್​ ಸೃಷ್ಟಿ ತುಲಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದು ಕೊಲೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಸೃಷ್ಟಿ ಪ್ರಾಣ ಕಳೆದುಕೊಳ್ಳುವಷ್ಟು ಅಶಕ್ತಳಲ್ಲ ಎಂದು ಅವರು ಹೇಳಿದ್ದಾರೆ.

ಮಹಿಳಾ ಪೈಲಟ್​​ ಸೃಷ್ಟಿ ಅವರ ಮೃತದೇಹ ಸೋಮವಾರ ಮುಂಬೈನ ಫ್ಲಾಟ್‌ನಲ್ಲಿ ಸಿಕ್ಕಿತ್ತು. ಪೊಲೀಸರು ಪ್ರಾಥಮಿಕ ತನಿಖೆಯನ್ನು ಇದನ್ನು ಆತ್ಮಹತ್ಯೆ ಎಂದು ತಿಳಿಸಿದ್ದರು. ಇದೀಗ, ಅವರ ಕುಟುಂಬಸ್ಥರು ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಮಹಿಳಾ ಪೈಲಟ್​​ನ ಸಂಬಂಧಿ ವಿವೇಕ್ ಈ ಬಗ್ಗೆ ಮಾತನಾಡಿದ್ದು, ಸೃಷ್ಟಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಮಾಡಲಾಗಿದೆ. ಆಕೆ ತುಂಬಾ ಗಟ್ಟಿಗಿತ್ತಿ. ಪೈಲಟ್ ತರಬೇತಿಯ ವೇಳೆ ಮಾನಸಿಕ ದೃಢತೆಯನ್ನೂ ಬೆಳೆಸಿಕೊಂಡವಳು. ಅಂತಹ ತರಬೇತುದಾರೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಸೃಷ್ಟಿಯ ಸಾವಿಗೂ ಮೊದಲು ಆಕೆಯ ಪ್ರಿಯಕರ ಆದಿತ್ಯ ಪಂಡಿತ್ ಮತ್ತು ಇನ್ನೊಬ್ಬ ಸ್ನೇಹಿತೆ ಜೊತೆಗೆ ಮಾತುಕತೆ ನಡೆಸಿದ್ದಾಳೆ. ಬಳಿಕ ತನ್ನ ಮನೆಗೆ ಹೋಗಿದ್ದಾಳೆ. ಇದಾದ 15 - 20 ನಿಮಿಷಗಳಲ್ಲಿ ಏನಾಯ್ತು ಎಂಬುದು ಪ್ರಶ್ನೆಯಾಗಿದೆ. ಸೃಷ್ಟಿ ಆತ್ಮಹತ್ಯೆಯಿಂದ ಯಾಕೆ ಸಾಯಬೇಕಿತ್ತು? ಆಕೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಹೀಗಾಗಿ ಇದೊಂದು ಕೊಲೆ. ಬಂಧನಕ್ಕೊಳಗಾಗಿರುವ ಆದಿತ್ಯ ಪಂಡಿತ್‌ನನ್ನು ಕಟ್ಟುನಿಟ್ಟಾಗಿ ವಿಚಾರಣೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಆದಿತ್ಯನಿಂದ ಸೃಷ್ಟಿಗೆ ಕಿರುಕುಳ: ಮೃತ ಸೃಷ್ಟಿಗೆ ಬಾಲ್ಯದಿಂದಲೂ ಪೈಲಟ್ ಆಗಬೇಕು ಎಂಬ ಕನಸು ಕಂಡಿದ್ದಳು. ಅದರಂತೆ ಆಕೆ ಪೈಲಟ್​ ಆಗಿದ್ದಳು. ಬಳಿಕ ಆದಿತ್ಯನ ಸಂಪರ್ಕ ಬೆಳೆಸಿಕೊಂಡಿದ್ದಳು. ಕೆಲ ದಿನಗಳ ಬಳಿಕ ಈತ ಸೃಷ್ಟಿಗೆ ಕಿರುಕುಳ ನೀಡಲು ಆರಂಭಿಸಿದ. ಆಕೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಆತನೂ ಪೈಲಟ್ ಆಗಲು ತಯಾರಿ ನಡೆಸುತ್ತಿದ್ದ. ಸಾರ್ವಜನಿಕವಾಗಿ ಸೃಷ್ಟಿಯ ಮೇಲೆ ಕೂಗಾಡಿದ್ದ. ಈ ಘಟನೆ ಆದಿತ್ಯನ ಮೇಲೆ ಅನುಮಾನ ಮೂಡಿಸುತ್ತಿದೆ ಎಂದು ವಿವೇಕ್ ಹೇಳಿದ್ದಾರೆ.

ಆಸ್ಪತ್ರೆಗೆ ಕರೆದೊಯ್ದ ಸ್ನೇಹಿತ: ಮಹಿಳಾ ಪೈಲಟ್​ ತನ್ನ ಮನೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಗ, ಸ್ನೇಹಿತ ಆದಿತ್ಯ ಆಕೆಯನ್ನು ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದ. ವೈದ್ಯರು ಮೃತಪಟ್ಟಿದ್ದಾಗಿ ಘೋಷಿಸಿದರು. ಬಳಿಕ ಪೊಲೀಸರು ಆತನನ್ನು ನಾಲ್ಕು ದಿನಗಳವರೆಗೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆದಿತ್ಯನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ. ಸೃಷ್ಟಿಯ ಫೋನ್ ಅನ್ನು ತನಿಖೆಗಾಗಿ ಲ್ಯಾಬ್‌ಗೆ ಕಳುಹಿಸಲಾಗಿದೆ.

ಯೋಧನ ಕುಟುಂಬದ ಕುಡಿ: ಮೃತ ಸೃಷ್ಟಿ ಅವರದ್ದು ಸೇನಾ ಕುಟುಂಬ. ಅವರ ಅಜ್ಜ ಸೇನೆಯಲ್ಲಿದ್ದರು. 1971 ರಲ್ಲಿ ಭಾರತ-ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ಅತ್ಯುನ್ನತ ತ್ಯಾಗ ಮಾಡಿದ್ದರು. ಸೃಷ್ಟಿ 23 ನೇ ವಯಸ್ಸಿನಲ್ಲಿ ಪೈಲಟ್ ಆಗಿದ್ದರು. ದೇಶ - ವಿದೇಶದಲ್ಲಿ ವಿಮಾನಗಳನ್ನು ಹಾರಿಸಿದ್ದಾರೆ. ಗೋರಖ್‌ಪುರದ ಮೊದಲ ಮಹಿಳಾ ಪೈಲಟ್‌ ಆದ ಕಾರಣ ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಸನ್ಮಾನಿಸಿದ್ದರು.

ಇದನ್ನೂ ಓದಿ: ಚುನಾವಣೆ ಮುಗಿದು 9 ದಿನ ಕಳೆದರೂ, ಜಾರ್ಖಂಡ್​​ನಲ್ಲೇ ಸಿಲುಕಿದ 80 ಯೋಧರು; ಊಟಕ್ಕೂ ಪರದಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.