ವಾರಾಣಸಿ (ಉತ್ತರಪ್ರದೇಶ):ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಜ್ಞಾನವಾಪಿಯಲ್ಲಿರುವ ವ್ಯಾಸ್ ಜಿ ಅವರ ನೆಲಮಾಳಿಗೆಯ ಮೇಲ್ಛಾವಣಿ ದುರಸ್ತಿ ಮತ್ತು ಮೇಲ್ಛಾವಣಿಯ ಮೇಲೆ ಮುಸ್ಲಿಂ ಸಮುದಾಯದ ಪ್ರವೇಶವನ್ನು ತಡೆಯುವ ಕುರಿತು, ಹಾಗೂ ಒಳಗಿನ ಇತರ ನೆಲಮಾಳಿಗೆಗಳ ವೈಜ್ಞಾನಿಕ ಸಮೀಕ್ಷೆಯ ಬೇಡಿಕೆ ಕುರಿತು ಇಂದು ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.
ರಾಖಿ ಸಿಂಗ್ ಸೇರಿದಂತೆ ವಿಶ್ವನಾಥ ದೇವಾಲಯದ ಟ್ರಸ್ಟ್, ದೇವಾಲಯಕ್ಕೆ ಹಸ್ತಾಂತರಿಸಲಾದ ವ್ಯಾಸ್ ಜಿ ಅವರ ನೆಲಮಾಳಿಗೆ ಶಿಥಿಲವಾದ ಮೇಲ್ಛಾವಣಿ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಇತ್ತೀಚೆಗಷ್ಟೇ ದೇವಸ್ಥಾನವೂ ಈ ಬಗ್ಗೆ ತನ್ನ ಉತ್ತರವನ್ನು ಸಲ್ಲಿಸಿತ್ತು. ಇದಲ್ಲದೇ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿರುವ ಏಳು ಪ್ರತ್ಯೇಕ ಇಂಟಿಗ್ರೇಟೆಡ್ ಪ್ರಕರಣಗಳ ವೇಳಾಪಟ್ಟಿಯನ್ನೂ ಇಂದೇ ತೀರ್ಮಾನಿಸಬಹುದು. ಈ ಬಗ್ಗೆಯೂ ನ್ಯಾಯಾಲಯ ವಿಚಾರಣೆ ನಡೆಯಲಿದೆ.
ಜನವರಿ 31 ರಂದು ವಾರಾಣಸಿಯ ಜ್ಞಾನವಾಪಿ ವ್ಯಾಸ್ ಜಿ ತಹಖಾನಾದಲ್ಲಿ ಪೂಜೆ ಪುನಾರಂಭಿಸಲು ನಿರ್ಧರಿಸಿದ ನಂತರ, ವಾದಿನಿ ರಾಖಿ ಸಿಂಗ್ ಅವರು ಶೃಂಗಾರ್ ಗೌರಿಯನ್ನು ನಿಯಮಿತವಾಗಿ ಪೂಜಿಸುವಂತೆ ಒತ್ತಾಯಿಸಿದರು. ನೆಲಮಾಳಿಗೆಯ ಛಾವಣಿ ಮತ್ತು ಕಂಬಗಳು ಶಿಥಿಲವಾಗಿವೆ ಎಂದು ಹೇಳಿದರು. ಈ ಬಗ್ಗೆ ವಿಶ್ವನಾಥ ದೇವಸ್ಥಾನದ ಆಡಳಿತ ಮಂಡಳಿಯಿಂದ ಮನವಿ ಕೂಡ ಮಾಡಲಾಗಿದ್ದು, ಒಳಗೆ ಪೂಜೆ ಸಲ್ಲಿಸುವ ಅರ್ಚಕರಿಗೆ ಅಪಾಯ ಎದುರಾಗಬಹುದು. ಹೀಗಾಗಿ ಕೂಡಲೇ ದುರಸ್ತಿಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.