ಕರ್ನಾಟಕ

karnataka

ETV Bharat / bharat

ವಿವಾದಿತ ಟ್ರೇನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್​ 'ಎಲ್ಲ ಸರ್ಕಾರಿ ಹುದ್ದೆಗಳಿಂದ ಶಾಶ್ವತ ನಿಷೇಧ' - PROBATIONARY IAS PUJA KHEDKAR - PROBATIONARY IAS PUJA KHEDKAR

ನಕಲಿ ದಾಖಲೆ ನೀಡಿ ಅಕ್ರಮವಾಗಿ ಐಎಎಸ್​ ಹುದ್ದೆಗೆ ನೇಮಕವಾಗಿದ್ದ ಮಹಾರಾಷ್ಟ್ರ ಟ್ರೇನಿ ಐಎಎಸ್​​ ಅಧಿಕಾರಿ ಪೂಜಾ ಖೇಡ್ಕರ್​​ಗೆ ಎಲ್ಲಾ ಸರ್ಕಾರಿ ಹುದ್ದೆಗಳಿಂದ ಶಾಶ್ವತ ನಿಷೇಧ ಹೇರಿ ಕೇಂದ್ರ ಲೋಕಸೇವಾ ಆಯೋಗ ಆದೇಶಿಸಿದೆ.

ವಿವಾದಿತ ಟ್ರೇನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್
ವಿವಾದಿತ ಟ್ರೇನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್ (ETV Bharat)

By PTI

Published : Jul 31, 2024, 6:06 PM IST

ನವದೆಹಲಿ:ಆಡಳಿತ ದುರುಪಯೋಗ ಮತ್ತು ನಕಲಿ ದಾಖಲೆ ನೀಡಿ ಅಕ್ರಮ ನೇಮಕ ಆರೋಪ ಎದುರಿಸುತ್ತಿದ್ದ ಪೂಜಾ ಖೇಡ್ಕರ್ ಅವರನ್ನು ಪ್ರೊಬೇಷನರಿ ಐಎಎಸ್ ಹುದ್ದೆಯಿಂದ ಕಿತ್ತು ಹಾಕಲಾಗಿದೆ. ಜೊತೆಗೆ ಮುಂದಿನ ಎಲ್ಲ ಪರೀಕ್ಷೆಗಳಿಂದ ಶಾಶ್ವತವಾಗಿ ನಿಷೇಧಿಸಿ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​​ಸಿ) ಬುಧವಾರ (ಜುಲೈ 31) ಆದೇಶಿಸಿದೆ.

ಪೂಜಾ ಖೇಡ್ಕರ್​ ಅವರು ಐಎಎಸ್​ ಪರೀಕ್ಷೆ ಮತ್ತು ನೇಮಕಾತಿ ವೇಳೆ ನೀಡಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ ನಕಲಿ ದಾಖಲೆಗಳು ಕಂಡು ಬಂದಿರುವುದು ಸಾಬೀತಾಗಿದೆ. ಈ ಬಗ್ಗೆ ಅವರ ಪ್ರತಿಕ್ರಿಯೆಯನ್ನೂ ಕೋರಿದ್ದು, ಅವರು ಈವರೆಗೂ ಯಾವುದೇ ಉತ್ತರ ನೀಡಿಲ್ಲ. ಹೀಗಾಗಿ ಅವರ ವಿರುದ್ಧ ನಿಷೇಧ ಹೇರಲಾಗಿದೆ ಎಂದು ಯುಪಿಎಸ್​ಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪೂಜಾ ಖೇಡ್ಕರ್​ ಅವರು ಸಲ್ಲಿಸಿದ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗಿದೆ. ಇದರಲ್ಲಿ ನಾಗರಿಕ ಸೇವಾ ಪರೀಕ್ಷೆಗಳ ಎಲ್ಲ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ಕಂಡುಬಂದಿದೆ. ಹೀಗಾಗಿ ಅವರನ್ನು ತಕ್ಷಣದಿಂದಲೇ ಅನ್ವಯಯವಾಗುವಂತೆ ಪ್ರೊಭೇಷನರಿ ಐಎಎಸ್​​ ಹುದ್ದೆ ಮತ್ತು ಭವಿಷ್ಯದಲ್ಲಿ ಯಾವುದೇ ಪರೀಕ್ಷೆಗಳಿಗೆ ಅರ್ಹರಾಗದಂತೆ ಶಾಶ್ವತ ನಿರ್ಬಂಧ ಹೇರಲಾಗಿದೆ ಎಂದಿದೆ.

'ಮಿತಿ' ಮೀರಿದ ಪೂಜಾ:ಪರೀಕ್ಷೆಗಳಿಗೆ ಹಾಜರಾಗಲು ಇದ್ದ ಎಲ್ಲ ಮಿತಿಗಳನ್ನು ಪೂಜಾ ಖೇಡ್ಕರ್​ ಅವರು ಉಲ್ಲಂಘನೆ ಮಾಡಿದ್ದಾರೆ. ಅವರ ಗುರುತನ್ನು ಮರೆಮಾಚುವ ಮೂಲಕ ಅಕ್ರಮವಾಗಿ ಪರೀಕ್ಷೆ ಬರೆದು ನೇಮಕಾತಿಯಾಗಿದ್ದಾರೆ. ಮೋಸದ ಎಲ್ಲ ಪರಿಧಿಯನ್ನು ಅವರು ದಾಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವಂತೆ ಅವರಿಗೆ ಜುಲೈ 18 ರಂದು ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಆಯೋಗ ಹೇಳಿದೆ.

ಜುಲೈ 25 ರೊಳಗೆ ಶೋಕಾಸ್​ ನೋಟಿಸ್​​ಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಬೇಕಾಗಿತ್ತು. ನಕಲಿ ದಾಖಲೆಗಳನ್ನು ನೀಡಿದ ಆರೋಪಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಆಗಸ್ಟ್ 4ರ ವರೆಗೆ ಸಮಯ ಕೋರಿದ್ದರು. ಜುಲೈ 30 ರಂದು ಮಧ್ಯಾಹ್ನ 3:30 ರೊಳಗೆ ಪ್ರತಿಕ್ರಿಯೆ ಸಲ್ಲಿಸಲು ಯುಪಿಎಸ್​ಸಿ ಅವರಿಗೆ ಅಂತಿಮ ಗಡುವು ನೀಡಿತ್ತು. ಆದರೆ, ಅವರು ನಿಗದಿತ ಸಮಯದೊಳಗೆ ತಮ್ಮ ವಿವರಣೆಯನ್ನು ಸಲ್ಲಿಸಲು ವಿಫಲರಾಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಪೂಜಾ ವಿರುದ್ಧದ ಆರೋಪವೇನು?:ಟ್ರೇನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್​, ತಮ್ಮ ವೈಯಕ್ತಿಕ ಕಾರಿನ ಮೇಲೆ 'ಮಹಾರಾಷ್ಟ್ರ ಸರ್ಕಾರ' ಎಂದು ಅನಧಿಕೃತವಾಗಿ ಬರೆದುಕೊಂಡಿದ್ದಲ್ಲದೇ, ಕೆಂಪು ದ್ವೀಪವನ್ನು ಅಳವಡಿಸಿಕೊಂಡಿದ್ದರು. ಜೊತೆಗೆ ಅಧಿಕಾರಿಯೊಬ್ಬರ ಕಚೇರಿಯನ್ನು ಅಕ್ರಮವಾಗಿ ತಮ್ಮ ವಶದಲ್ಲಿರಿಸಿಕೊಂಡಿದ್ದರು. ಕಚೇರಿಗೆ ದುಬಾರಿ ವಸ್ತುಗಳನ್ನು ಅಳವಡಿಸಿದ್ದರು. ಇದಾದ ಬಳಿಕ ಅವರು ತಮ್ಮ ಗುರುತನ್ನು ಬದಲಿಸಿ ಹಲವು ಬಾರಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದಲ್ಲದೇ, ನೇಮಕಾತಿ ವೇಳೆ ನಕಲಿ ದಾಖಲೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ: 'ರೇಸ್‌ಗೆ ಸಿದ್ಧ' : ಬೈಕ್‌ ಹಿಂಬದಿ ಬರಹವೇ ಮೊಬೈಲ್ ಕಳ್ಳರ ಪತ್ತೆಗೆ ನೀಡಿತ್ತು ಸುಳಿವು! - Cell Phone Thieves arrested

ABOUT THE AUTHOR

...view details