ಕಾರ-ಬೈಕ್ ಮಧ್ಯೆ ಭೀಕರ ರಸ್ತೆ ಅಪಘಾತ ಡೆಹ್ರಾಡೂನ್ (ಉತ್ತರಾಖಂಡ್) : ಹರಿದ್ವಾರ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಮತ್ತೊಮ್ಮೆ ಅತಿವೇಗದ ಕಾರುಗಳ ಹಾವಳಿ ಕಂಡು ಬಂದಿದೆ. ಇಲ್ಲಿ ವೇಗವಾಗಿ ಬಂದ ಕಾರೊಂದು ಮುಂದೆ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ಈ ರಸ್ತೆ ಅಪಘಾತದ ಸಿಸಿಟಿವಿ ವಿಡಿಯೋ ಕೂಡ ಹೊರಬಿದ್ದಿದೆ.
ಏಪ್ರಿಲ್ 25 ರಂದು ತಡರಾತ್ರಿ ಈ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಹರಿದ್ವಾರ-ಡೆಹ್ರಾಡೂನ್ ಹೆದ್ದಾರಿಯ ಮಂಜ್ರಿ ಗ್ರಾಂಟ್ ಬಳಿ ಅಪಘಾತ ಸಂಭವಿಸಿದೆ. ಮಂಜ್ರಿ ಗ್ರಾಂಟ್ ಪ್ರದೇಶದ ಹರಿದ್ವಾರ-ಡೆಹ್ರಾಡೂನ್ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಮುಂದೆ ಸಾಗುತ್ತಿದ್ದ ಬೈಕ್‌ಗೆ ಏಕಾಏಕಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ಲಾಲ್ತಪ್ಪಾಡ್ ಪೊಲೀಸ್ ಠಾಣೆ ಪ್ರಭಾರಿ ದೇವೇಶ್ ಕುಮಾರ್, ಕಾರು ಹರಿದ್ವಾರ ಕಡೆಯಿಂದ ಬರುತ್ತಿದ್ದಾಗ ಮಜ್ರಿ ಚೌಕ್ ಬಳಿ ತಿರುವು ಪಡೆಯುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಂಬ್ಯುಲೆನ್ಸ್ ಸಹಾಯದಿಂದ ಹಿಮಾಲಯನ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಅಂತಾ ತಿಳಿಸಿದರು.
ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರನ್ನು ಫತೇಪುರ್ ದೋಯಿವಾಲಾ ನಿವಾಸಿ 45 ವರ್ಷದ ಬಿರ್ಪಾಲ್ ಮತ್ತು 50 ವರ್ಷದ ಥರಾಲಿ ಜಿಲ್ಲೆಯ ಚಮೋಲಿ ನಿವಾಸಿ ಹರೀಶ್ ಎಂದು ಗುರುತಿಸಲಾಗಿದೆ. ಕಾರು ಚಾಲಕ ಉತ್ತರ ಪ್ರದೇಶದ ನಜೀಬಾಬಾದ್‌ನ ಆದರ್ಶ್ ನಗರ ನಿವಾಸಿ ವಿಪುಲ್ ಭಟ್ನಾಗರ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಈವರೆಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ:ನೇಹಾ ಹತ್ಯೆ ಪ್ರಕರಣ: ಡಿಎನ್ಎ ಪರೀಕ್ಷೆಗಾಗಿ ಫಯಾಜ್ನನ್ನು ನ್ಯಾಯಾಲಯಕ್ಕೆ ಕರೆತಂದ ಸಿಐಡಿ ಅಧಿಕಾರಿಗಳು - Neha murder case