ಕರ್ನಾಟಕ

karnataka

ETV Bharat / bharat

40 ವರ್ಷ ನಕ್ಸಲ್​ ಚಟುವಟಿಕೆ; 62 ನೇ ವಯಸ್ಸಿನಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ ಸರ್ಕಾರಕ್ಕೆ ಶರಣಾದ ತಾರಕ್ಕ - MAOIST LEADER TARAKKA

ಗಡ್ಚಿರೋಲಿಯಲ್ಲಿ ವಾಂಟೆಡ್​ ಲಿಸ್ಟ್​ನಲ್ಲಿದ್ದ ನಕ್ಸಲ್​ ನಾಯಕಿ ತಾರಕ್ಕ ಸೇರಿದಂತೆ ಅವರ ಕೆಲ ಸಹಚರರು ಸರ್ಕಾರಕ್ಕೆ ಶರಣಾಗಿದ್ದಾರೆ.

Top Maoist Leader Tarakka Surrenders,
ಸರ್ಕಾರಕ್ಕೆ ಶರಣಾದ ತಾರಕ್ಕ (ETV Bharat)

By ETV Bharat Karnataka Team

Published : Jan 2, 2025, 6:15 PM IST

ಹೈದರಾಬಾದ್:ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಮುಖ ಮಾವೋವಾದಿ ನಾಯಕಿ ಹಾಗೂ ನಕ್ಸಲ್​ ಕೇಂದ್ರ ಸಮಿತಿ ಸದಸ್ಯ ಮಲ್ಲೋಜುಲ ವೇಣುಗೋಪಾಲ್ ಅವರ ಪತ್ನಿ ವಿಮಲಾ ಚಂದ್ರ ಸೀದಂ ಅಲಿಯಾಸ್ ತಾರಕ್ಕ (62) ಅವರು ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಬುಧವಾರ ಶರಣಾದರು. ಅವರ ಜೊತೆಗೆ, ಏಳು ಮಹಿಳೆಯರು ಸೇರಿದಂತೆ 10 ಮಂದಿ ಮಾವೋವಾದಿಗಳು ಸಹ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರು. ಇವರೆಲ್ಲ ಸರ್ಕಾರಕ್ಕೆ ಶರಣಾಗಿರುವುದು ಗಡ್ಚಿರೋಲಿಯಲ್ಲಿನ ಮಾವೋವಾದಿ ಚಟುವಟಿಕೆಗಳಿಗೆ ದೊಡ್ಡ ಹಿನ್ನಡೆಯಾದಂತಾಗಿದೆ.

ತಾರಕ್ಕನ ಕುರಿತಾದ ಸಂಕ್ಷಿಪ್ತ ಮಾಹಿತಿ;

  • ನಾಲ್ಕು ದಶಕಗಳ ಕಾಲ ದಂಡಕಾರಣ್ಯದಲ್ಲಿ ಸಕ್ರಿಯ ನಕ್ಸಲ್​ ಚಟುವಟಿಕೆ
  • ದಂಡಕಾರಣ್ಯ ವಲಯ ಸಮಿತಿ ಸದಸ್ಯೆಯಾಗಿರುವ ತಾರಕ್ಕ ಸುಮಾರು 40 ವರ್ಷಗಳಿಂದ ಮಾವೋವಾದಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.
  • ಎನ್‌ಕೌಂಟರ್‌ಗಳಲ್ಲಿ ಭಾಗಿ: ಭದ್ರತಾ ಪಡೆಗಳ ವಿರುದ್ಧದ 35 ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗಿದ್ದ ತಾರಕ್ಕ.
  • ಬಂಧನಕ್ಕೆ ಬಹುಮಾನ ಘೋಷಣೆ: ವಾಂಟೆಡ್​ ಲಿಸ್ಟ್​ನಲ್ಲಿದ್ದ ತಾರಕ್ಕನನ್ನು ಸೆರೆಹಿಡಿದವರಿಗೆ ₹25 ಲಕ್ಷ ಬಹುಮಾನವನ್ನು ಸರ್ಕಾರದಿಂದ ಘೋಷಿಸಲಾಗಿತ್ತು.

ಪ್ರಕರಣಗಳು: ವಿವಿಧ ರಾಜ್ಯಗಳಲ್ಲಿ ನಕ್ಸಲ್​ ನಾಯಕಿ ತಾರಕ್ಕನ ವಿರುದ್ಧ ಒಟ್ಟು 66 ಪ್ರಕರಣಗಳು ದಾಖಲಾಗಿವೆ.

ವಿಮಲಾ ಅಲಿಯಾಸ್​ ತಾರಕ್ಕ ಶರಣಾಗಿದ್ದರೂ ಸಹ ಅವರ ಪತಿ ಮಲ್ಲೋಜುಲ ವೇಣುಗೋಪಾಲ್ ಅವರು ಉನ್ನತ ಶ್ರೇಣಿಯ ಮಾವೋವಾದಿ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾರಕ್ಕನೊಂದಿಗೆ ಶರಣಾದ ಸಹಚರರ ಮಾಹಿತಿ;

  • ತಾರಕ್ಕನೊಂದಿಗೆ ಶರಣಾದವರಲ್ಲಿ ಪ್ರಭಾವಿ ಮಾವೋವಾದಿ ನಾಯಕರು ಸೇರಿದ್ದಾರೆ..
  • ಸುರೇಶ್ ಉಯಿಕೆ (56) - ನಕ್ಸಲ್​ ಉಪ ಕಮಾಂಡರ್.
  • ಕಲ್ಪನಾ ತೋರಂ ಅಲಿಯಾಸ್ ಭಾರತಿ (55) - ನಕ್ಸಲ್​ ಪ್ರದೇಶ ಸಮಿತಿ ಸದಸ್ಯೆ
  • ಅರ್ಜುನ್ ಅಲಿಯಾಸ್ ಸಾಗರ್ ಹಿಚಾನಿ (32) - ಏರಿಯಾ ಸಮಿತಿ ಸದಸ್ಯ
  • ವನಿತಾ ಸಕ್ಕು ದರ್ವೆ (31), ಸಾಮಿ ಮತ್ತಾಮಿ (25), ಮತ್ತು ನಿಶಾ ಬೋಡಕ್​ (31) - ವಿಭಾಗೀಯ ಸಮಿತಿ ಸದಸ್ಯರು
  • ಶ್ರುತಿ ಉಲಗೆ (26), ಶಶಿಕಲಾ ದುರ್ವೆ (29), ಸೋನು ಸುಕ್ಕು (23), ಮತ್ತು ಆಕಾಶ್ ಸೋಮ (20) - ಶರಣಾದ ಇತರ ಕಾರ್ಯಕರ್ತರು.

ನಕ್ಸಲ್​ ಕಾರ್ಯಾಚರಣೆಗಳ ಪರಿಣಾಮಗಳು;ವಾಂಟೆಡ್​ ಪಟ್ಟಿಯಲ್ಲಿರುವ ನಕ್ಸಲ್​ ಉನ್ನತ ಶ್ರೇಣಿಯ ನಾಯಕರು, ಪ್ರಮುಖ ಕಾರ್ಯಕರ್ತರು ಸರ್ಕಾರಕ್ಕೆ ಶರಣಾಗಿರುವುದು ದೀರ್ಘಾವಧಿಯ ಭದ್ರಕೋಟೆಯಾದ ದಂಡಕಾರಣ್ಯ ಪ್ರದೇಶದಲ್ಲಿ ಮಾವೋವಾದಿ ಶಕ್ತಿ ದುರ್ಬಲಗೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಲ್ಲದೆ, ನಕ್ಸಲ್​ ನಿಗ್ರಹ ಪಡೆಯ ಕಾರ್ಯಾಚರಣೆಯ ಪ್ರಯತ್ನದ ಫಲವಾಗಿದೆ. ಶರಣಾದ ಕಾರ್ಯಕರ್ತರು ಮಾವೋವಾದಿ ಕಾರ್ಯಾಚರಣೆಗಳ ಬಗ್ಗೆ ನಿರ್ಣಾಯಕ ಗುಪ್ತಚರ ಮಾಹಿತಿ ಒದಗಿಸುವ ಸಾಧ್ಯತೆಯಿದೆ.

ಮನವಿ ಮಾಡಿದ್ದ ಅಮಿತ್​ ಶಾ;ಕಳೆದ ಡಿಸೆಂಬರ್​ 15 ರಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು, ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ನಕ್ಸಲರಿಗೆ ಮನವಿ ಮಾಡಿದ್ದರು. ಇಲ್ಲವಾದಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಬೇಕಾಗುತ್ತದೆ. ಶರಣಾದ ನಕ್ಸಲರ ಪುನರ್ವಸತಿ ಸರ್ಕಾರದ ಜವಾಬ್ದಾರಿ ಎಂದು ಭರವಸೆ ನೀಡಿದ್ದರು. ಅಲ್ಲದೆ, 2026ರ ಮಾರ್ಚ್​ 31ರ ವೇಳೆಗೆ ದೇಶದಲ್ಲಿ ನಕ್ಸಲ್​ವಾದವನ್ನು ಸಂಪೂರ್ಣ ನಿರ್ನಾಮ ಮಾಡಲಿದ್ದೇವೆ ಎಂಬ ಮಾತನ್ನು ಸಹ ಹೇಳಿದ್ದರು.

ಇದನ್ನೂ ಓದಿ: ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿ, ಇಲ್ಲವೇ ಭದ್ರತಾ ಸಿಬ್ಬಂದಿಯ ಕಠಿಣ ಕ್ರಮ ಎದುರಿಸಿ: ಅಮಿತ್ ಶಾ

ABOUT THE AUTHOR

...view details