ಕರ್ನಾಟಕ

karnataka

ETV Bharat / bharat

2029ರವರೆಗೆ ಪಕ್ಷ ರಾಜಕಾರಣ ಬಿಟ್ಟು ದೇಶಕ್ಕಾಗಿ ದುಡಿಯಿರಿ: ಸಂಸದರಿಗೆ ಪ್ರಧಾನಿ ಮೋದಿ ಕರೆ - PM Modi - PM MODI

ದೇಶದ ಬಡವರು, ಯುವಕರು, ಮಹಿಳಾ ಸಬಲಿಕರಣಕ್ಕಾಗಿ ಎಲ್ಲಾ ಸಂಸದರೂ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ (ANI)

By ETV Bharat Karnataka Team

Published : Jul 22, 2024, 1:16 PM IST

ನವದೆಹಲಿ: ಪಕ್ಷ ರಾಜಕಾರಣ ಬಿಟ್ಟು ಎಲ್ಲಾ ಸಂಸದರು ಒಟ್ಟಾಗಿ ದೇಶಕ್ಕಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಇಂದು ಸಂಸತ್ತಿನ ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಮಾತನಾಡಿದ ಅವರು, ಜನವರಿ 2029ರಲ್ಲಿ ಮತ್ತೆ ಲೋಕಸಭೆ ಚುನಾವಣೆ ಬರಲಿದೆ. ಅಲ್ಲಿಯವರೆಗೆ ಎಲ್ಲ ಸಂಸದರೂ ಸೇರಿ ಪಕ್ಷ ರಾಜಕಾರಣ ಬಿಟ್ಟು ಬಡವರು, ರೈತರು, ಯುವಕರು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ ಎಂದರು.

ಕೆಲವು ಪಕ್ಷಗಳು ನಕಾರಾತ್ಮಕ ರಾಜಕೀಯದಲ್ಲಿ ತೊಡಗಿರುವ ಕಾರಣ ಅನೇಕ ಸಂಸದರಿಗೆ ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಸಾಧ್ಯವಾಗಿಲ್ಲ. ಈ ಪಕ್ಷಗಳು ತಮ್ಮ ರಾಜಕೀಯ ವೈಫಲ್ಯಗಳನ್ನು ಮರೆಮಾಚಲು ಸಂಸತ್ತಿನ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿ ದುರುಪಯೋಗಪಡಿಸಿಕೊಳ್ಳುತ್ತಿವೆ. ಹಾಗಾಗಿ, ಈ ಬಾರಿ ಇಂತಹ ತಪ್ಪುಗಳನ್ನು ಮಾಡದೇ ಎಲ್ಲಾ ಸಂಸದರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಬಜೆಟ್​ ಕುರಿತು ಮಾತನಾಡುತ್ತಾ, 60 ವರ್ಷಗಳ ನಂತರ ಸತತ ಮೂರನೇ ಬಾರಿಗೆ ಸರ್ಕಾರವೊಂದು ಅಧಿಕಾರಕ್ಕೆ ಬಂದಿರುವುದು ಹೆಮ್ಮೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವ ಬಲಿಷ್ಠ ಬಜೆಟ್​ ನಾಳೆ ಮಂಡನೆ ಆಗಲಿದೆ. ಇದು ಅಮೃತಕಾಲದ ಮಹತ್ವದ ಬಜೆಟ್ ಆಗಿರಲಿದ್ದು, ಮುಂದಿನ 5 ವರ್ಷಗಳ ಕಾಲ ನಮ್ಮ ಕೆಲಸಗಳ ದಿಕ್ಕು ನಿರ್ಧರಿಸಲಿದೆ. ಇದರ ಜೊತೆಗೆ, ದೇಶವಾಸಿಗಳ ಭರವಸೆಗಳಿಗೆ ಭದ್ರ ಬುನಾದಿ ಆಗಿರಲಿದೆ ಎಂದು ಹೇಳಿದರು.

ದೇಶದ ಆರ್ಥಿಕತೆಯ ಕುರಿತು ಮಾತನಾಡಿ, ಭಾರತ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರೆದಿದೆ. ಸತತ ಮೂರನೇ ಬಾರಿಗೆ ಶೇ 8ರಷ್ಟು ಬೆಳವಣಿಗೆಯೊಂದಿಗೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದ್ದೇವೆ. ಸಕಾರಾತ್ಮಕ ದೃಷ್ಟಿಕೋನ ಮತ್ತು ನಿರಂತರವಾಗಿ ಹೆಚ್ಚುತ್ತಿರುವ ಹೂಡಿಕೆಯಿಂದ ಇದು ಸಾಧ್ಯವಾಗಿದೆ ಎಂದು ಮೋದಿ ತಿಳಿಸಿದರು.

ಇದನ್ನೂ ಓದಿ:ಸಂಸತ್ ಅಧಿವೇಶನ ಆರಂಭ: ನಾಳೆ ಬಜೆಟ್‌, ಇಂದು ಆರ್ಥಿಕ ಸಮೀಕ್ಷೆ ಮಂಡನೆ - Parliament Budget Session

ABOUT THE AUTHOR

...view details