ETV Bharat / state

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಬಳಕೆ ಹೆಚ್ಚಳ; ಮುಚ್ಚುವ ಹಂತಕ್ಕೆ ತಲುಪಿದ ಹಾಪ್ ಕಾಮ್ಸ್ ಮಳಿಗೆಗಳು - HOPCOMS STORES

ರಾಜ್ಯದೆಲ್ಲೆಡೆ ಸುಮಾರು 600 ಹಾಪ್​ಕಾಮ್ಸ್​ ಮಳಿಗೆಗಳಿದ್ದು, ಅವುಗಳಲ್ಲಿ ಈಗಾಗಲೇ 140 ಮಳಿಗೆಗಳನ್ನು ಮುಚ್ಚಲಾಗಿದೆ ಎನ್ನುವ ಅಂಕಿ ಅಂಶಗಳು ಹೊರಬಿದ್ದಿವೆ.

Hopcoms store
ಹಾಪ್​ಕಾಮ್ಸ್ ಮಳಿಗೆ (ETV Bharat)
author img

By ETV Bharat Karnataka Team

Published : 2 hours ago

ಬೆಂಗಳೂರು: ನಗರದಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಬಳಕೆ ಹೆಚ್ಚಾಗಿರುವ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಹಾಪ್​ಕಾಮ್ಸ್ ಮಳಿಗೆಗಳು ಮುಚ್ಚುವ ಹಂತಕ್ಕೆ ತಲುಪಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಸರ್ಕಾರಿ ಸ್ವಾಮ್ಯದ ಹಾಪ್​ಕಾಮ್ಸ್​ನ 140 ಮಳಿಗೆಗಳು ಬಂದ್​; ರೈತರು ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಪಡೆಯಲು ಹಾಗೂ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ತಾಜಾ ಕೃಷಿ ಉತ್ಪನ್ನಗಳನ್ನು ನೀಡಲು 1965 ರಲ್ಲಿ ಹಾಪ್‌ಕಾಮ್ಸ್​​ ಅನ್ನು ಆರಂಭಿಸಲಾಯಿತು. ರಾಜ್ಯದಲ್ಲಿ 26 ಹಾಪ್‌ಕಾಮ್ಸ್ ಶಾಖೆಗಳಿದ್ದು, ಬೆಂಗಳೂರು, ಬೆಳಗಾವಿ, ಬೀದರ್, ಬಳ್ಳಾರಿ, ಚಿಕ್ಕಮಗಳೂರು. ಶಿವಮೊಗ್ಗ, ಗದಗ, ಧಾರವಾಡ, ದಾವಣಗೆರೆ ಮತ್ತು ಇತರ ಸ್ಥಳಗಳಲ್ಲಿ ಸುಮಾರು 600 ಮಳಿಗೆಗಳಿವೆ. ಆದರೆ ಸದ್ಯ ಸರ್ಕಾರಿ ಸ್ವಾಮ್ಯದ ತೋಟಗಾರಿಕಾ ಉತ್ಪಾದಕರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ ಮಳಿಗೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಕಳೆದ ಐದು ವರ್ಷಗಳಲ್ಲಿ 140 ಮಳಿಗೆಗಳನ್ನು ಮುಚ್ಚಲಾಗಿದೆ ಎಂಬ ಮಾಹಿತಿ ಅಂಕಿ ಅಂಶಗಳಿಂದ ಹೊರಬಿದ್ದಿದೆ.

ಹಾಪ್​ಕಾಮ್ಸ್​​ಗೆ ಮಾಲ್​ಗಳಿಂದ ದರ ಪೈಪೋಟಿ ; ಇನ್ನು ನಗರದ ಹಲವು ಕಡೆಗಳಲ್ಲಿರುವ ಮಾಲ್‌ಗಳಲ್ಲಿ ತರಕಾರಿ, ಹಣ್ಣುಗಳು ಅಗ್ಗದ ದರದಲ್ಲಿ ದೊರೆಯುವುದರಿಂದ ಗ್ರಾಹಕರು ಅಲ್ಲೇ ಖರೀದಿಸುತ್ತಿದ್ದು, ಇದರಿಂದಾಗಿ ಹಾಪ್​ಕಾಮ್​ಗಳ ಕಡೆಗೆ ಹೋಗುವವರೇ ಕಡಿಮೆಯಾಗುತ್ತಿದ್ದಾರೆ. ಮಾರಾಟಗಾರರಲ್ಲಿ ತೀವ್ರ ಪೈಪೋಟಿಯುಂಟಾಗುತ್ತಿದ್ದು, ಖಾಸಗಿ ಕಂಪನಿಗಳು ಹಲವು ಕಡೆಗಳಲ್ಲಿ ವಿಶೇಷ ಅಂಗಡಿಗಳನ್ನು ತೆರೆಯುತ್ತಿರುವುದು ಹಾಪ್​ಕಾಮ್​ಗಳ ಬೇಡಿಕೆ ಕುಸಿಯಲು ಕಾರಣವಾಗಿದೆ. ಹಲವು ಕಡೆಗಳಲ್ಲಿ ಜನಸಂಚಾರ ಕಡಿಮೆಯಿರುವ ಕಡೆಗಳಲ್ಲಿ ಹಾಪ್​ಕಾಮ್ಸ್​​ ಮಳಿಗೆಗಳಿರುವುದು ವ್ಯಾಪಾರ ವಹಿವಾಟಿಗೆ ಹಿನ್ನಡೆಯಾಗಿದೆ. ಕೆಲವು ಕಡೆಗಳಲ್ಲಿ ದಿನಕ್ಕೆ 500 ರಿಂದ 600 ರೂಪಾಯಿಗಳಷ್ಟು ಮಾತ್ರ ವ್ಯವಹಾರ ನಡೆಯುತ್ತಿರುವುದರಿಂದ ನಷ್ಟವುಂಟಾಗಿ ಮಳಿಗೆಗಳನ್ನು ಮುಚ್ಚಲಾಗುತ್ತಿದೆ ಎಂದು ವರದಿಯಾಗಿದೆ.

ಹಾಪ್​ಕಾಮ್ಸ್​​ ಮಳಿಗೆಗಳು ಮುಚ್ಚಿರುವುದು ನಿಜ- ವ್ಯವಸ್ಥಾಪಕ ನಿರ್ದೇಶಕರು: ಈ ಬಗ್ಗೆ ಮಾಹಿತಿ ನೀಡಿದ ಹಾಪ್​ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿ, "ಹಲವು ಕಾರಣಗಳಿಂದ ಹಾಪ್​ಕಾಮ್ಸ್ ಮಳಿಗೆಗಳನ್ನು ಮುಚ್ಚಿರುವುದು ನಿಜ. ಅದು ಬೇಡಿಕೆ ಹೆಚ್ಚಿಸಲು, ವ್ಯಾಪಾರ ವಹಿವಾಟಿನ ಸಂಬಂಧ ತೆಗೆದುಕೊಂಡ ಕ್ರಮಗಳಾಗಿವೆ. ಹಲವು ಸುಧಾರಣಾ ಕರ್ಮಗಳನ್ನು ಕೈಗೊಂಡು ಕೈಗೆಟಕುವ ಬೆಲೆಗೆ ಹಣ್ಣು ತರಕಾರಿಗಳನ್ನು ಮಾರಲು, ಹೆಚ್ಚು ಡಿಸ್ಕೌಂಟ್​ಗಳನ್ನು ನೀಡುವ ಯೋಜನೆಗಳನ್ನು ರೂಪಿಸಿಕೊಂಡು ಹೆಚ್ಚು ಗ್ರಾಹಕರನ್ನು ಸೆಳೆಯಲು ಕ್ರಮ ಕೈಗೊಳ್ಳುವ ಕಾರ್ಯ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 15 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಶನಿವಾರ ಸಂತೆ ಮತ್ತೆ ಆರಂಭ: ಕುರಿ, ಮೇಕೆಗಳ ಮಾರಾಟಕ್ಕೆ ವೇದಿಕೆ ಸಿದ್ಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.