ETV Bharat / lifestyle

ಅದ್ಭುತ ರುಚಿಯ ಹಿರೇಕಾಯಿ ರೈಸ್​ ಸೂಪ್​ನ ಪ್ರಯೋಜನ ತಿಳಿದರೆ ಅಚ್ಚರಿಪಡುತ್ತೀರಿ; ಸಿದ್ಧಪಡಿಸೋದು ಸರಳ! - RIDGE GOURD RICE SOUP RECIPE

ಹಿರೇಕಾಯಿ ರೈಸ್​ ಸೂಪ್ ಸೇವಿಸಿದರೆ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೆ ತೂಕವು ಇಳಿಕೆಯಾಗುತ್ತದೆ. ಈ ಸೂಪ್ ಅನ್ನು ಆಹಾರದ ಭಾಗವಾಗಿ ಮಾಡಿಕೊಂಡರೆ ಅನೇಕ ಆರೋಗ್ಯದ ಪ್ರಯೋಜನಗಳು ಲಭಿಸುತ್ತವೆ ಎಂದು ವೈದ್ಯರು ಸಲಹೆ ನೀಡುತ್ತಾರೆ.

HEALTHY RIDGE GOURD RICE SOUP  How to Make Ridge Gourd Rice Soup  Ridge Gourd HEALTH BENEFITS  ಹಿರೇಕಾಯಿ ರೈಸ್​ ಸೂಪ್
ಹಿರೇಕಾಯಿ ರೈಸ್​ ಸೂಪ್ (ETV Bharat)
author img

By ETV Bharat Lifestyle Team

Published : Dec 19, 2024, 5:13 PM IST

How to Make Ridge Gourd Rice Soup: ಇಂದಿನ ಆಧುನಿಕ ಯುಗದಲ್ಲಿ ಹೆಚ್ಚಿನ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ತೂಕ ಇಳಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಡಯಟಿಂಗ್ ಕೂಡ ಮಾಡುತ್ತಾರೆ. ಆದರೆ, ಡಯಟಿಂಗ್ ಹೆಸರಿನಲ್ಲಿ ತಿನ್ನುವ ಆಹಾರವನ್ನು ಅರ್ಧಕ್ಕೆ ಇಳಿಸಲಾಗುತ್ತದೆ. ಆದರೆ, ಹೀಗೆ ಬಾಯಿ ಕಟ್ಟಿಕೊಳ್ಳುವುದರಿಂದ ತೂಕ ಕಡಿಮೆಯಾದರು ಕೂಡ ಬೇರೆ ಆರೋಗ್ಯ ಸಮಸ್ಯೆಗಳು ಬರುವುದು ನಿಶ್ಚಿತ. ಅದಕ್ಕಾಗಿಯೇ ವೈದ್ಯರು ಸೂಚಿಸುವಂತಹ ಆರೋಗ್ಯಕರ ಆಹಾರದತ್ತ ಗಮನ ಹರಿಸಲು ಮುಂದಾಗಬೇಕಿದೆ. ಇದರಿಂದ ಕಡಿಮೆ ಕ್ಯಾಲೋರಿ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಿರೇಕಾಯಿ ರೈಸ್​ ಸೂಪ್ ಅನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಸೂಪ್​ಗೆ ಬೇಕಾಗುವ ಪದಾರ್ಥಗಳೇನು ಹಾಗೂ ತಯಾರಿಸುವ ವಿಧಾನ ಹೇಗೆ ಎಂಬುದನ್ನು ತಿಳಿಯೋಣ.

ಸೂಪ್​ಗೆ ಬೇಕಾಗುವ ಪದಾರ್ಥಗಳೇನು?

  • ಹಿರೇಕಾಯಿ (ಮಧ್ಯಮ ಗಾತ್ರ) - 2
  • ಬಾಸ್ಮತಿ ಅಕ್ಕಿ - 2 ಕಪ್
  • ಎಣ್ಣೆ - 2 ಟೀಸ್ಪೂನ್
  • ಒಗ್ಗರಣೆಗೆ ಬೇಕಾದ ಧಾನ್ಯಗಳು (ಕಡಲೆಕಾಳು, ಉದ್ದಿನಬೇಳೆ, ಸಾಸಿವೆ, ಜಿರಿಗೆ) - 1 ಟೀಸ್ಪೂನ್
  • ಒಣಮೆಣಸಿನಕಾಯಿ - 3
  • ಬೆಳ್ಳುಳ್ಳಿ ಪೇಸ್ಟ್ - 2 ಟೀಸ್ಪೂನ್
  • ಈರುಳ್ಳಿ - ಒಂದು
  • ಆಲೂಗಡ್ಡೆ - ಒಂದು
  • ಕೆಂಪು ಕುಂಬಳಕಾಯಿ ಚೂರುಗಳು - ಒಂದು ಕಪ್
  • ಅರಿಶಿನ - 3/4 ಟೀಸ್ಪೂನ್
  • ಕಾಳುಮೆಣಸಿನ ಪುಡಿ - ಅರ್ಧ ಟೀಸ್ಪೂನ್
  • ಕೊತ್ತಂಬರಿ ಸೊಪ್ಪಿನ ಪುಡಿ - 2 ಟೀಸ್ಪೂನ್
  • ನಿಂಬೆ - ಒಂದು
  • ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:

  • ಮೊದಲು ಹಿರೇಕಾಯಿ ಹಾಗೂ ಆಲೂಗಡ್ಡೆ ಮತ್ತು ಈರುಳ್ಳಿ ಸಿಪ್ಪೆಯನ್ನು ತೆಗೆದು ತೆಳುವಾಗಿ ಕತ್ತರಿಸಬೇಕಾಗುತ್ತದೆ. ಬಾಸ್ಮತಿ ರೈಸ್​ನ್ನು ಸಹ ತೊಳೆದು ನೆನೆಸಿಡಿ.
  • ಈಗ ಒಲೆ ಆನ್ ಮಾಡಿ, ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಬಿಸಿಯಾದಾಗ ಒಗ್ಗರಣೆಗೆ ಬೇಕಾದ ಧಾನ್ಯಗಳು (ಕಡಲೆಕಾಳು, ಉದ್ದಿನಬೇಳೆ, ಸಾಸಿವೆ, ಜಿರಿಗೆ) ಹಾಕಿ ಫ್ರೈ ಮಾಡಿ. ಜೊತೆಗೆ ಒಣ ಮೆಣಸಿನಕಾಯಿಯನ್ನು ಹಾಕಿ ಸ್ವಲ್ಪ ಹುರಿದುಕೊಳ್ಳಬೇಕಾಗುತ್ತದೆ.
  • ಅದಾದ ನಂತರ ರುಬ್ಬಿದ ಬೆಳ್ಳುಳ್ಳಿ ಹಾಗೂ ಈರುಳ್ಳಿ ಪೀಸ್​ಗಳನ್ನು ಹಾಕಿ ಫ್ರೈ ಮಾಡಿಟ್ಟುಕೊಳ್ಳಬೇಕಾಗುತ್ತದೆ. ಈಗ ಅದಕ್ಕೆ ತೆಳುವಾಗಿ ಕತ್ತರಿಸಿದ ಆಲೂಗಡ್ಡೆ, ಕುಂಬಳಕಾಯಿ, ಹಿರೇಕಾಯಿ ಪೀಸ್​ಗಳನ್ನು, ಅರಿಶಿನ, ಕರಿಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ.
  • ಸ್ವಲ್ಪ ಬೇಯಿಸಿದ ನಂತರ, ಬಾಸ್ಮತಿ ರೈಸ್​ನ್ನು ಸೇರಿಸಿ. ಮತ್ತೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿ.. ಅದರಲ್ಲಿ 2 ಲೀಟರ್ ನೀರು ಸುರಿಯಿರಿ. ಬಳಿಕ ಮಿಶ್ರಣ ಮಾಡಿ. ಈ ವೇಳೆ ಸ್ಟೌ ಅನ್ನು ಕಡಿಮೆ ಉರಿಯಲ್ಲಿ ಇಡಬೇಕಾಗುತ್ತದೆ. ಜೊತೆಗೆ ತರಕಾರಿಗಳು ಚೆನ್ನಾಗಿ ಬೇಯುವವರೆಗೆ ಅಕ್ಕಿಯನ್ನು ಬೇಯಿಸಿ.
  • ಅಕ್ಕಿ ಮತ್ತು ತರಕಾರಿಗಳನ್ನು ಬೇಯಿಸಿದ ನಂತರ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ. ಮತ್ತೊಮ್ಮೆ ಮಿಶ್ರಣ ಮಾಡಿ. ಆಗ ಟೇಸ್ಟಿ ಹಾಗೂ ಆರೋಗ್ಯಕರ ಹಿರೇಕಾಯಿ ರೈಸ್​ ಸೂಪ್ ಸಿದ್ಧವಾಗುತ್ತದೆ.

ಈ ಸೂಪ್​ ಆರೋಗ್ಯ ಪ್ರಯೋಜನಗಳೇನು?

  • ಈ ರುಚಿಕರವಾದ ಹಿರೇಕಾಯಿ ರೈಸ್​ ಸೂಪ್​ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಕಡಿಮೆ ಕ್ಯಾಲೋರಿಗಳು ತೂಕವನ್ನು ಇಳಿಸಲು ಬಯಸುವವರಿಗೆ ಉತ್ತಮ ಆಹಾರವಾಗಿದೆ ಎಂದು ತಜ್ಞರು ತಿಳಿಸುತ್ತಾರೆ.
  • ಹಿರೇಕಾಯಿಯಲ್ಲಿರುವ ಹೆಚ್ಚಿನ ಫೈಬರ್ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ. ಅನೇಕ ರೀತಿಯ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
  • ಹಿರೇಕಾಯಿಯನ್ನು ಆಹಾರದಲ್ಲಿ ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಾಧ್ಯವಿದೆ.
  • ಹಿರೇಕಾಯಿಯಲ್ಲಿ ವಿಟಮಿನ್-ಸಿ, ಮೆಗ್ನೀಸಿಯಮ್, ಕಬ್ಬಿಣ, ಥಯಾಮಿನ್ ಇತ್ಯಾದಿ ಪೋಷಕಾಂಶಗಳು ಸೇರಿವೆ. ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
  • ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರು ಹಿರೇಕಾಯಿಯನ್ನು ಆಹಾರದಲ್ಲಿ ಸೇರಿಸಿಕೊಂಡರೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
  • ಹಿರೇಕಾಯಿ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಒಳ್ಳೆಯದು. ಇದರಲ್ಲಿರುವ ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳು ಚರ್ಮಕ್ಕೆ ಪೋಷಣೆಯನ್ನು ಒದಗಿಸುತ್ತವೆ. ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಓದುಗರಿಗೆ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.