ರಾಯಚೂರು: ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದುಗಲ್ ಹೊರವಲಯದ ಜನತಾ ಕಾಲೋನಿ ಬಳಿ ಇಂದು ಸಂಭವಿಸಿದೆ.
ಉಮಲೂಟಿ ಗ್ರಾಮದ ಕನಕಪ್ಪ ಮತ್ತು ಕುಷ್ಟಗಿ ತಾಲೂಕಿನ ವಿಠ್ಠಲಾಪುರದ ಜಗದೀಶ್ ಮೃತ ದುರ್ದೈವಿಗಳು. ಮುದುಗಲ್ ಕಡೆಯಿಂದ ತಾವರಗೆರೆ ಕಡೆ ರಸ್ತೆ ಮಾರ್ಗವಾಗಿ ತೆರಳುವ ವೇಳೆ ಈ ದುರ್ಘಟನೆ ಜರುಗಿದೆ. ಮುದುಗಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಜನತಾ ಕಾಲೋನಿ ಬಳಿ ಸಂಭವಿಸಿದ ರಸ್ತೆ ಅಫಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಲಾರ: 3 ಬೈಕ್ಗಳಿಗೆ ಬೊಲೆರೋ ವಾಹನ ಡಿಕ್ಕಿ, ಐವರು ಸ್ಥಳದಲ್ಲೇ ಸಾವು - ROAD ACCIDENT