ಜೋಧಪುರ, ರಾಜಸ್ಥಾನ: ಪೈಲಟ್ ಆಗಬೇಕು ಎಂಬ ಕನಸು ಹೊಂದಿದ್ದ ಯುವತಿ ಅಪಘಾತದಲ್ಲಿ ಸಾವನ್ನಪ್ಪಿದ್ದು, ಸಾವಿನ ಬಳಿಕ ಅವರು ಐದು ಜನರ ಬಾಳಿಗೆ ಬೆಳಕಾಗಿದ್ದಾರೆ.
ಏನಿದು ಘಟನೆ?: ಮೂಲತಃ ಪೋಖ್ರಾನ್‌ನ ಖೆಟೋಲೈ ಮೂಲದ 21 ವರ್ಷದ ಚೇತನಾ ಬಿಷ್ಣೋಯ್ ಮಹಾರಾಷ್ಟ್ರದ ರೆಡ್ಬರ್ಡ್ನಲ್ಲಿ ಪೈಲಟ್ ತರಬೇತಿ ಪಡೆಯುತ್ತಿದ್ದರು. ಡಿಸೆಂಬರ್ 9ರಂದು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರ ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ಘೋಷಿಸಿದ್ದರು.
ಮಗಳನ್ನು ಕಳೆದುಕೊಂಡ ನೋವಿನಲ್ಲಿದ್ದ ಕುಟುಂಬ ಮಗಳನ್ನು ಮತ್ತೊಂದು ಜೀವದಲ್ಲಿ ಕಾಣುವ ದೃಢ ನಿರ್ಧಾರಕ್ಕೆ ಬಂದರು. ಈ ತೀರ್ಮಾನದ ಬೆನ್ನಲ್ಲೇ ಅಂಗಾಂಗ ದಾನಕ್ಕೆ ಮುಂದಾದರು. ಇದರ ಪರಿಣಾಮ ಐದು ಮಂದಿಗೆ ಹೊಸ ಜನ್ಮ ಪಡೆದಿದ್ದಾರೆ. ಅಂಗಾಂಗ ದಾನ ಪ್ರಕ್ರಿಯೆ ಬಳಿಕ ಬಿಷ್ಣೋಯಿ ಅಂತ್ಯಕ್ರಿಯೆಯನ್ನು ಬುಧವಾರ ಸ್ವಗ್ರಾಮದಲ್ಲಿ ಕುಟುಂಬಸ್ಥರು ನೆರವೇರಿಸಿದ್ದಾರೆ.
ಈ ಬಗ್ಗೆ ಹೆರಿಟೇಜ್ ಓನರ್ಸ್ ಸೊಸೈಟಿಯ ಅಧ್ಯಕ್ಷ ಹೇಳಿದ್ದಿಷ್ಟು: ಈ ಕುರಿತು ಮಾತನಾಡಿರುವ ಹೆರಿಟೇಜ್ ಓನರ್ಸ್ ಸೊಸೈಟಿಯ ಅಧ್ಯಕ್ಷ ಅಶೋಕ್ ಸಂಚೇತಿ, ಚೇತನಾ ಅವರ ತಂದೆ ಜ್ಯೋತಿ ಪ್ರಕಾಶ್ ಕೃಷಿಕರಾಗಿದ್ದು, ಪೋಖ್ರಾನ್‌ನಲ್ಲಿ ಗ್ಯಾಸ್ ಏಜೆನ್ಸಿಯನ್ನೂ ನಡೆಸುತ್ತಿದ್ದಾರೆ. ಜೋದ್ಪುರದ ರದ ಉಮ್ಮದ್ ಹೆರಿಟೇಜ್‌ನಲ್ಲಿ ವಾಸಿಸುತ್ತಿದ್ದ ಆಕೆ, ಪೈಲಟ್ ಆಗುವ ಕನಸು ಕಂಡಿದ್ದರು. ಆ ಗುರಿಯಂತೆಯೇ ಸಾಗಿದ್ದಳು. 200 ಗಂಟೆಯಲ್ಲಿ ಹಾರಾಟದ ಗುರಿಯನ್ನು ಕೇವಲ 55 ಗಂಟೆಯಲ್ಲಿ ಮುಗಿಸಿ ವಿಕ್ರಮ ಕೂಡಾ ಮೆರೆದಿದ್ದಳು. ಆದರೆ, ದುರದೃಷ್ಟವಶಾತ್ ಅಪಘಾತ ಸಂಭವಿಸಿದ್ದು, ಇದೀಗ ಕುಟುಂಬದಲ್ಲಿ ಮೌನ ಮಡುಗಟ್ಟಿದೆ ಎಂದರು.
ಐದು ಅಂಗಾಂಗಗಳ ದಾನ: ಚೇತನಾಳ ಹೃದಯ, ಲಿವರ್, ಎರಡೂ ಕಿಡ್ನಿ ಮತ್ತು ಮೇದೋಜೀರಕ ಗ್ರಂಥಿಯನ್ನು ಅಂಗಾಂಗ ದಾನ ಮಾಡಲು ಕುಟುಂಬ ಒಪ್ಪಿಗೆ ನೀಡಿದೆ. ಚೇತನ ಅಂಗಾಂಗ ಪಡೆದ ಕುಟುಂಬವೂ ಪುಣೆಯ ರೂಬಿ ಹಾಲ್ ಕ್ಲಿನಿಕ್‌ನಲ್ಲಿ ಚೇತನಾ ಅವರ ಕುಟುಂಬಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ: ಆಫ್ರಿಕನ್ ಪತ್ರಕರ್ತರನ್ನು ಭೇಟಿ ಮಾಡಿದ ಜೈ ಶಂಕರ್: ಭಾರತದ ರೂಪಾಂತರಗಳ ಬಗ್ಗೆ ಸಂವಾದ