ನಾಗ್ಪುರ(ಮಹಾರಾಷ್ಟ್ರ): ನಾಗ್ಪುರದ ಪ್ರಾಣಿ ರಕ್ಷಣಾ ಕೇಂದ್ರದ ಮೂರು ಹುಲಿಗಳು ಮತ್ತು ಒಂದು ಚಿರತೆ ಸಾವನ್ನಪ್ಪಿದೆ. ಸೋಂಕಿಗೆ ಒಳಗಾಗಿದ್ದ ಚಿಕನ್ ತಿಂದು ಇವುಗಳು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ರಾಜ್ಯ ಅರಣ್ಯ ಸಚಿವ ಗಣೇಶ್ ನಾಯ್ಕ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಈ ಕುರಿತು ಪ್ರಯೋಗಾಲಯದ ವರದಿ ಬಂದ ಬಳಿಕವೇ ಸ್ಪಷ್ಟವಾಗಿ ದೃಢೀಕರಿಸಲು ಸಾಧ್ಯ ಎಂದು ಚಂದ್ರಪುರ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಹೇಳಿದರು.
ವೈಜ್ಞಾನಿಕ ಪ್ರಯೋಗಾಲಯದ ವರದಿ ಇನ್ನಷ್ಟೇ ಕೈ ಸೇರಬೇಕಿದೆ. ಪ್ರಾಥಮಿಕ ಮಾಹಿತಿ ಅನುಸಾರ, ಸೋಂಕಿತ ಕೋಳಿಯನ್ನು ಸೇವಿಸಿ, ಈ ಪ್ರಾಣಿಗಳಿಗೆ ಸವನ್ನಪ್ಪಿರಬಹುದು. ಆದಾಗ್ಯೂ ಈಗಲೇ ಸ್ಪಷ್ಟವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ವಿವರವಾದ ತನಿಖೆಗೆ ಸೂಚಿಸಲಾಗಿದ್ದು, ಬಳಿಕವೇ ಮಾಹಿತಿ ಲಭ್ಯವಾಗಲಿದೆ ಎಂದರು.
ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು ಪ್ರತಿಕ್ರಿಯಿಸಿ, ಪ್ರಾಣಿಗಳಿಗೆ ನೀಡುವ ಆಹಾರವನ್ನು ಪರಿಶೀಲನೆ ನಡೆಸಲು ನಿರ್ದೇಶಿಸಲಾಗಿದೆ. ಸಾವನ್ನಪ್ಪಿದ್ದ ಹುಲಿಗಳು ಮತ್ತು ಚಿರತೆಯನ್ನು ಪ್ರಾಣಿ-ಮಾನವ ಸಂಘರ್ಷದಿಂದ ರಕ್ಷಿಸಿ ಇಲ್ಲಿನ ಗೊರೆವಡಾ ರಕ್ಷಣಾ ಕೇಂದ್ರಕ್ಕೆ ತಂದು ಬಿಡಲಾಗಿತ್ತು ಎಂದು ಹೇಳಿದರು.
ಇದನ್ನೂ ಓದಿ:17 ವರ್ಷದ ಹಿಂದೆ 'ಕೊಲೆಯಾದ ವ್ಯಕ್ತಿ' ಮರಳಿ ಮನೆಗೆ! ಅಮಾಯಕರಿಗೆ 2 ವರ್ಷ ಜೈಲು ಶಿಕ್ಷೆ