ಜೈಪುರ, ರಾಜಸ್ಥಾನ: ತಂದೆಯ ನಿವೃತ್ತಿ ಆದೇಶಕ್ಕೆ ಮಗ ಸಹಿ ಮಾಡುವುದನ್ನು ಕೇಳಲು ಎಷ್ಟು ಚೆನ್ನಾಗಿದೆಯಲ್ಲವೇ?. ಇಂತಹ ಅಪರೂಪದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಭರತ್‌ಪುರ ವಿಭಾಗೀಯ ಆಯುಕ್ತರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಸನ್ವರ್ಮಲ್ ವರ್ಮಾ ಅವರ ನಿವೃತ್ತಿ ಆದೇಶಕ್ಕೆ ಕಾರ್ಮಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಹುದ್ದೆಯಲ್ಲಿರುವ ಅವರ ಪುತ್ರ ಕನಿಷ್ಕ ಕಟಾರಿಯಾ ಸಹಿ ಹಾಕಿದ್ದಾರೆ. ಇದನ್ನು ಕನಿಷ್ಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆ ರಾಜಸ್ಥಾನದ ಅಧಿಕಾರಿಗಳ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಇಬ್ಬರಿಗೂ ಒಂದೇ ಸಮಯದಲ್ಲಿ ಬಡ್ತಿ ಸಿಕ್ಕಿತ್ತು. ತಂದೆ ಮತ್ತು ಮಗನ ಸಂಬಳ ಏಕಕಾಲದಲ್ಲಿ ಹೆಚ್ಚಳವಾಗಿತ್ತು. ಸನ್ವರ್ಮಲ್ ವರ್ಮಾ ಸಂಬಳವನ್ನು ಆಯ್ಕೆ ವೇತನ ಶ್ರೇಣಿಯಿಂದ ಸೂಪರ್‌ಟೈಮ್ ಪೇ ಸ್ಕೇಲ್‌ಗೆ (ಪೇ ಮ್ಯಾಟ್ರಿಕ್ಸ್‌ನಲ್ಲಿ ಹಂತ 14) ಹೆಚ್ಚಿಸಲಾಗಿದ್ದರೆ, ಅದೇ ಸಮಯದಲ್ಲಿ, ಕನಿಷ್ಕ ಕಟಾರಿಯಾ ಅವರ ಸಂಬಳವನ್ನು ಜೂನಿಯರ್ ವೇತನ ಶ್ರೇಣಿಯಿಂದ ಹಿರಿಯ ವೇತನ ಶ್ರೇಣಿಗೆ (ಪೇ ಮ್ಯಾಟ್ರಿಕ್ಸ್‌ನಲ್ಲಿ 11 ನೇ ಹಂತ) ಹೆಚ್ಚಿಸಲಾಗಿದೆ.
ಸನ್ವರ್ಮಲ್ ಶರ್ಮಾ ಅವರ ನಿವೃತ್ತಿ ಆದೇಶವನ್ನು ಸೆಪ್ಟೆಂಬರ್ 28 ರಂದು ಹೊರಡಿಸಲಾಗಿದೆ. ಜೈಪುರ ವಿಭಾಗೀಯ ಆಯುಕ್ತ ಐಎಎಸ್ ರಶ್ಮಿ ಗುಪ್ತಾ ಅವರಿಗೆ ಭರತ್‌ಪುರ ವಿಭಾಗೀಯ ಆಯುಕ್ತರಾಗಿ ಹೆಚ್ಚುವರಿ ಪ್ರಭಾರ ನೀಡಲಾಗಿದೆ. IAS, IPS, RAS ಅಧಿಕಾರಿಗಳ ವರ್ಗಾವಣೆ, ನಿವೃತ್ತಿ ಮತ್ತು ಇತರ ಸೇವೆಗಳಿಗೆ ಸಂಬಂಧಿಸಿದ ಆದೇಶಗಳಿಗೆ ಜಂಟಿ ಕಾರ್ಯದರ್ಶಿ ಮಾತ್ರ ಸಹಿ ಮಾಡುತ್ತಾರೆ.