ಮುಂಬೈ, ಮಹಾರಾಷ್ಟ್ರ:ಮಗ ಪಾಸ್ ಆಗಿದ್ದು ಕಂಡು ಕಣ್ಣೀರಿಟ್ಟ ತಂದೆ, ಯುವಕನನ್ನು ಭುಜದ ಮೇಲೆ ಹೊತ್ತು ಮೆರವಣಿಗೆ ಮಾಡಿಸಿದ ಜನ. ಆರತಿ ಬೆಳಗಿ ತಲಕವಿಟ್ಟ ಅಮ್ಮ. ಇದ್ಯಾವುದೋ ದೊಡ್ಡ ಸಾಧನೆ ಮಾಡಿದ ಯುವಕನಿಗೆ ಮಾಡಿದ ಸನ್ಮಾನವಲ್ಲ. 10ನೇ ತರಗತಿಯನ್ನು 10 ಬಾರಿ ಫೇಲ್ ಆಗಿ, ಕಡೆಗೂ 11ನೇ ಸಲಕ್ಕೆ ಜಸ್ಟ್ ಪಾಸ್ ಆದವನಿಗೆ ಕೊಟ್ಟ ಗೌರವ.
ಇದು ತಮಾಷೆಯಾದರೂ ನಿಜ. ಮಹಾರಾಷ್ಟ್ರದ ಪರಲಿ ತಾಲೂಕಿನ ದಾಬಿ ಗ್ರಾಮದ ಯುವಕ ಕೃಷ್ಣ ಎಂಬಾತ 10ನೇ ತರಗತಿಯಲ್ಲಿ ಪಾಸಾಗಿ ಕುಟುಂಬಸ್ಥರ ಸಂತಸಕ್ಕೆ ಕಾರಣವಾಗಿದ್ದಾನೆ. ಇದರಲ್ಲಿ ಬಹು ವಿಶೇಷ ಇಲ್ಲವಾದರೂ ಆ ಬಡ ಕುಟುಂಬ ಮತ್ತು ತಂದೆಯ ಹಠ ಇಲ್ಲಿ ಗೆದ್ದಿದೆ.
ಏನಿದು 10ನೇ ಕ್ಲಾಸ್ ಪಾಸ್ ಕಹಾನಿ:ವಿದ್ಯಾರ್ಥಿ ಕೃಷ್ಣ ಅವರ ತಂದೆ ಸಾಮಾನ್ಯ ಕೂಲಿ ಕಾರ್ಮಿಕ. ಮಗ 10ನೇ ಕ್ಲಾಸ್ ಶಿಕ್ಷಣ ಪೂರೈಸಬೇಕು ಎಂಬುದು ಆ ಬಡ ತಂದೆಯ ಕನಸಾಗಿತ್ತು. ಇದಕ್ಕಾಗಿ ಏನೇ ಕಷ್ಟ ಬಂದರೂ ಪ್ರತಿ ಬಾರಿ ಪರೀಕ್ಷೆ ಬರೆಸುತ್ತಿದ್ದ. ಶಿಕ್ಷಣಕ್ಕೆ ಅಗತ್ಯ ಓದು, ಬರಹ ಇಲ್ಲವಾದರೂ ವಿದ್ಯಾರ್ಥಿ ಕೃಷ್ಣ ಪರೀಕ್ಷೆ ಬರೆದು ನಪಾಸಾಗುತ್ತಿದ್ದ.
ವಿದ್ಯಾರ್ಥಿ ಕೃಷ್ಣ 2018ರಲ್ಲಿ 10ನೇ ತರಗತಿ ಓದುತ್ತಿದ್ದ. ಆತ ಆ ವರ್ಷದ ಪರೀಕ್ಷೆಯಲ್ಲಿ ಮೊದಲ ಸಲ ಫೇಲ್ ಆಗಿದ್ದಾನೆ. ತಂದೆ ನಾಮದೇವ್ ಮುಂಡೆ ಅವರು ಮಗನಿಗೆ ಪರೀಕ್ಷೆ ಬರೆಯಲು ಒತ್ತಾಯ ಮಾಡುತ್ತಿದ್ದರು. ಅಲ್ಲಿಂ ಕೃಷ್ಣ 10 ಬಾರಿ ಪರೀಕ್ಷೆ ಕಟ್ಟಿದ್ದಾನೆ. ಫಲಿತಾಂಶ ಮಾತ್ರ 'ಫೇಲ್'. ಶ್ರಮ ಜೀವಿಯಾದ ಕೃಷ್ಣನ ತಂದೆ ಏನೇ ಆದರೂ ಸರಿ ನೀನು 10ನೇ ಕ್ಲಾಸ್ ಪಾಸ್ ಆಗಬೇಕು ಎಂದು ಹಠ ಹಿಡಿದಿದ್ದರು. 2024 ರ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಮತ್ತೆ ಪರೀಕ್ಷೆಗೆ ಕುಳಿತ ಕೃಷ್ಣ 11ನೇ ಯತ್ನದಲ್ಲಿ ಪಾಸ್ ಆಗಿದ್ದಾನೆ.
ಇಷ್ಟೇ, ಈ ಸುದ್ದಿ ಕೇಳಿ ತಂದೆ ಕುಣಿದು ಕುಪ್ಪಳಿಸಿದ್ದಾನೆ. ಮಗನ ಮಹತ್ಸಾಧನೆಯನ್ನು ಕೊಂಡಾಡಿದ್ದಾನೆ. ಜನರಿಗೆ ಈ ಬಗ್ಗೆ ಹೇಳಿ ಆತನಿಗೆ ಟೊಪ್ಪಿ ಧರಿಸಿ ಊರ ತುಂಬಾ ಹೆಗಲ ಮೇಲೆ ಹೊತ್ತು ಮೆರವಣಿ ಮಾಡಲಾಗಿದೆ. ಮನೆಗೆ ಬಂದ ಮಗನಿಗೆ ತಾಯಿ ಮತ್ತು ಕುಟುಂಬಸ್ಥರು ಹಾರ ಹಾಕಿ, ಆರತಿ ಬೆಳಗಿ ಸ್ವಾಗತಿಸಿದ್ದಾರೆ. ಪಕ್ಕದಲ್ಲೇ ಇದ್ದ ತಂದೆ ಸಂತಸದಲ್ಲಿ ಕಣ್ಣೀರು ಹಾಕಿದ್ದಾನೆ.
11ನೇ ಸಲದ ಯತ್ನದಲ್ಲಿ 10ನೇ ಕ್ಲಾಸ್ ಪಾಸ್ ಆದ ವಿದ್ಯಾರ್ಥಿ ಕೃಷ್ಣನ ಈ ಕತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೊಂಥರ ಇತ್ತೀಚೆಗೆ ಬಾಲಿವುಡ್ನಲ್ಲಿ ತೆರೆಕಂಡ 12 ಫೇಲ್ ಸಿನಿಮಾದ ಮಾದರಿಯಲ್ಲಿ ಯುವಕನೊಬ್ಬ ಹಠ ಹಿಡಿದು ಪಾಸ್ ಆಗಿ ಸರ್ಕಾರ ಅಧಿಕಾರಿಯಾದ ಕಥೆಯಂತಿದೆ.
ಇದನ್ನೂ ಓದಿ:ಕೇವಲ 10 ರೂಪಾಯಿಗೆ ಟಿಫಿನ್: ತಾನು ಎದುರಿಸಿದ ಕಷ್ಟವೇ ಈತನನ್ನು ಹೋಟೆಲ್ ಉದ್ಯಮಿಯನ್ನಾಗಿ ಮಾಡಿತು! - Tiffin Centre Owner Inspiring Story