ಕರ್ನಾಟಕ

karnataka

ETV Bharat / bharat

ಉದಯಪುರದಲ್ಲಿ ಥಾಯ್ಲೆಂಡ್​ ಮಹಿಳೆ ಮೇಲೆ ಗುಂಡಿನ ದಾಳಿ: ಆಸ್ಪತ್ರೆಗೆ ದಾಖಲು - THAI WOMAN HOSPITALISED

ಘಟನೆ ಕುರಿತು ಮಾತನಾಡಿರುವ ಉದಯಪುರ ಎಸ್​ಪಿ ಯೊಗೇಶ್​ ಗೋಯಲ್​, ವಿದೇಶಿ ಮಹಿಳೆಯೊಬ್ಬರು ಗುಂಡಿನ ದಾಳಿಗೆ ಒಳಗಾಗಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ

thai-woman-hospitalised-with-bullet-injury-in-udaipur-probe-on-to-identify-accused
ಸಾಂದರ್ಭಿಕ ಚಿತ್ರ (ಐಎಎನ್​ಎಸ್​)

By PTI

Published : Nov 9, 2024, 2:48 PM IST

ಉದಯಪುರ, ರಾಜಸ್ಥಾನ: ಗುಂಡಿನ ದಾಳಿಗೆ ಒಳಗಾಗಿದ್ದ ಥಾಯ್ಲೆಂಡ್​ ಮಹಿಳೆಯನ್ನು ಅಪರಿಚಿತ ವ್ಯಕ್ತಿಗಳು ಶನಿವಾರ ಇಲ್ಲಿನ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಅವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

24 ವರ್ಷದ ಮಹಿಳೆ ಪಕ್ಕೆಲುಬು ಬಳಿ ಗುಂಡಿನ ಗಾಯಕ್ಕೆ ಒಳಗಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತು ಮಾತನಾಡಿರುವ ಉದಯಪುರ ಎಸ್​ಪಿ ಯೋಗೇಶ್​ ಗೋಯಲ್​, ವಿದೇಶಿ ಮಹಿಳೆಯೊಬ್ಬರು ಗುಂಡಿನ ದಾಳಿಗೆ ಒಳಗಾಗಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ ಎಂಬ ಮಾಹಿತಿ ದೊರೆಯಿತು. ಆರಂಭದ ತನಿಖಾ ಮಾಹಿತಿ ಪ್ರಕಾರ, ಅಕ್ಟೋಬರ್​ 21ರಂದು ವಿದೇಶಿ ಮಹಿಳೆ ತಮ್ಮ ಸ್ನೇಹಿತರ ಜೊತೆಗೆ ಇಲ್ಲಿನ ಮಲಿ ಕಾಲೋನಿಯಲ್ಲಿ ಥಂಕ್​ ಛನೊಕ್​ ಹೋಟೆಲ್​ನಲ್ಲಿ ವಾಸವಾಗಿದ್ದರು. ಮಧ್ಯರಾತ್ರಿ 1.30ರ ಸುಮಾರಿಗೆ ಮಹಿಳೆ ಸ್ನೇಹಿತರ ಭೇಟಿ ಮಾಡಲು ಹೋಟೆಲ್​ನಿಂದ ಹೊರಗೆ ತೆರಳಿದ್ದರು , ಈ ವೇಳೆ ಅವರು ಗಾಯೊಂಡಿದ್ದಾರೆ.

ಮಹಿಳೆಯನ್ನು ಮೂವರು ಅಪರಿಚಿತ ವ್ಯಕ್ತಿಗಳು ಇಲ್ಲಿನ ಖಾಸಗಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ. ಇದಾದ ಬಳಿಕ ಯಾವುದೇ ಸುಳಿವು ನೀಡದೇ ಅವರು ಹೊರ ನಡೆದಿದ್ದಾರೆ. ಬಳಿಕ ಮಹಿಳೆಯನ್ನು ಮಹಾರಾಣಾ ಭೂಪಾಲ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಲ್ಲಿನ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಮೂವರು ಅಪರಿಚಿತ ವ್ಯಕ್ತಿಗಳು ಯಾರು ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಇದನ್ನೂ ಓದಿ:ನಾಯಿ ಮರಿಗಳ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಮಹಿಳೆಯರು: ಪ್ರಕರಣ ದಾಖಲು

ABOUT THE AUTHOR

...view details