ಕರ್ನಾಟಕ

karnataka

By ETV Bharat Karnataka Team

Published : Feb 23, 2024, 2:52 PM IST

ETV Bharat / bharat

ಟೆಲಿಗ್ರಾಂ ಮೂಲಕ ಕಿಡ್ನಿ ಮಾರಾಟದ ಅಕ್ರಮ ಜಾಲ: ಪ್ರಕರಣ ದಾಖಲಿಸಿದ ತೆಲಂಗಾಣ ಸಿಐಡಿ

ಕಿಡ್ನಿ ಅವಶ್ಯಕತೆ ಹೊಂದಿರುವ ಸಂತ್ರಸ್ತರನ್ನು ಗುರಿಯಾಗಿಸಿಕೊಂಡು ಈ ಜಾಲ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ.

telangana-cid-registers-case-on-kidney-selling-racket-through-telegram
telangana-cid-registers-case-on-kidney-selling-racket-through-telegram

ಹೈದರಾಬಾದ್​​: ಭಾರತದಲ್ಲಿ ಅಕ್ರಮವಾಗಿ ಕಿಡ್ನಿ ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ. ಆದರೆ, ಕಿಡ್ನಿ ಕಸಿಗಾಗಿ ಕಾದು ಕುಳಿತವರ ಸಂಖ್ಯೆ ದೊಡ್ಡದಿರುವ ಹಿನ್ನೆಲೆ ಕಿಡ್ನಿ ಮಾರಾಟದ ಅಕ್ರಮ ಜಾಲಗಳು ಸದ್ದಿಲ್ಲದೇ ಕಾರ್ಯ ನಿರ್ವಹಿಸುತ್ತಿರುವುದು ಅನೇಕ ವೇಳೆ ಬೆಳಕಿಗೆ ಬಂದಿದೆ. ಇದೀಗ ಈ ದಂಧೆಕೋರರು ಹೈಟೆಕ್​ ಮಾರ್ಗ ಆರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕಿಡ್ನಿ ಅಕ್ರಮ ಮಾರಾಟ ಚಟುವಟಿಕೆಯಲ್ಲಿ ತೊಡಗಿರುವ ಪ್ರಕರಣ ಕಂಡು ಬಂದಿದ್ದು, ಈ ಸಂಬಂಧ ತೆಲಂಗಾಣ ಸಿಐಡಿ ಕಾರ್ಯಾಚರಣೆಗೆ ಇಳಿದಿದೆ.

ತೆಲಂಗಾಣದಲ್ಲಿ ಅಕ್ರಮವಾಗಿ ಕಿಡ್ನಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಿಡ್ನಿ ಮಾರಾಟ ಕುರಿತು ಜಾಹೀರಾತು ನೀಡಿರುವ ಸಂಬಂಧ ಸಾಮಾಜಿಕ ಕಾರ್ಯಕರ್ತರು ದೂರು ನೀಡಿದ್ದರು. ಈ ದೂರಿನ ಹಿನ್ನೆಲೆ ಇದೀಗ ಈ ಸಾಮಾಜಿಕ ಜಾಲತಾಣದ ಗುಂಪಿನ ತನಿಖೆಗೆ ಪೊಲೀಸರು ಮುಂದಾಗಿದ್ದು, ಅವರು ಮಾನವ ಅಂಗಾಂಗ ಕಸಿ 1994 ಕಾಯ್ದೆಯ ಸೆಕ್ಷನ್​​ 18 ಮತ್ತು 19ರ ಅಡಿ ಪ್ರಕರಣ ದಾಖಲಿಸಿದ್ದಾರೆ.

ಟೆಲಿಗ್ರಾಂ ಆ್ಯಪ್​ ಸೇರಿದಂತೆ ವಿವಿಧ ಚಾನಲ್​ಗಳಲ್ಲಿ ಕಿಡ್ನಿ ಮಾರಾಟದ ಕುರಿತು ವಿಷಯಗಳು ಬೆಳಕಿಗೆ ಬಂದ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತರೊಬ್ಬರು ಸಿಐಡಿಗೆ ತಿಳಿಸಿದ್ದು, ಕಿಡ್ನಿ ಅವಶ್ಯಕತೆ ಉಳ್ಳವನು ರಹಸ್ಯವಾಗಿ ಗ್ಯಾಂಗ್​ ಪತ್ತೆ ಮಾಡಿ ಈ ಗುಂಪಿಗೆ ಸೇರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಗುಂಪಿಗೆ ಆಡ್ಮಿನ್​ ಮಾತ್ರವೇ ಸದಸ್ಯರನ್ನು ಸೇರಿಸಬಹುದಾಗಿದೆ. ಇದು ಸೈಬರ್​ ವಂಚನೆ ಅಥವಾ ಕಿಡ್ನಿ ಮಾರಾಟ ಜಾಲವಾ ಎಂಬುದನ್ನು ಪತ್ತೆ ಮಾಡಬೇಕಿದೆ. ಕಿಡ್ನಿ ಸಂತ್ರಸ್ತರನ್ನು ಹುಡುಕಿ ಈ ಗುಂಪು ರಚಿಸಲಾಗಿದ್ದು, ಇವರಿಗೆ ಹಣದಲ್ಲಿ ಅಥವಾ ಅಂಗಾಂಗದಲ್ಲಿ ವಂಚನೆ ನಡೆಸಲಾಗಿದೆಯಾ ಎಂಬುದನ್ನು ಪತ್ತೆ ಮಾಡಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಕೂಡ ರಾಜ್ಯದಲ್ಲಿ ಈ ರೀತಿ ಕಿಡ್ನಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ್ದರು. ಹೈದರಾಬಾದ್​ ಮತ್ತು ರಚಕೊಂಡ ಆಯುಕ್ತರ ಜೊತೆಗೆ ಸಿಐಡಿ ಈ ಪ್ರಕರಣ ಬೇಧಿಸಿತ್ತು. ಈ ಜಾಲವೂ ಕಿಡ್ನಿಯನ್ನು ಶ್ರೀಲಂಕಾಕ್ಕೆ ಕೊಂಡೊಯ್ದು ಅಲ್ಲಿ ಕಸಿ ಮಾಡುತ್ತಿದ್ದು, ಪೊಲೀಸರ ತನಿಖೆ ವೇಳೆ ಪತ್ತೆಯಾಗಿತ್ತು. 2016ರ ಪ್ರಕರಣಕ್ಕೆ ಸಿಐಡಿ ಕಳೆದ ವರ್ಷ ಚಾರ್ಜ್​ ಶೀಟ್​​ ಹಾಕಿದೆ. ಇತ್ತೀಚಿನ ಪ್ರಕರಣ ಕುರಿತು ಹಳೆ ಗ್ಯಾಂಗ್​​ಗೆ ನಂಟಿರಬಹುದೇ ಎಂಬ ಸಂಬಂಧ ಸಿಐಡಿ ತನಿಖೆಗೆ ಮುಂದಾಗಿದೆ.

ಇದನ್ನೂ ಓದಿ:ಹರ್ನಿಯಾ ಆಪರೇಷನ್​ಗೆ ಹೋದ ರೋಗಿಯ ಮೂತ್ರಪಿಂಡವೇ ಕಣ್ಮರೆ; ಪರಿಹಾರಕ್ಕೆ ಆದೇಶಿಸಿದ ಗ್ರಾಹಕ ಆಯೋಗ

ABOUT THE AUTHOR

...view details